ವಿಜಯನಗರ(ಹೊಸಪೇಟೆ) : ಕೆನರಾ ಬ್ಯಾಂಕ್ ದೇಶಪಾಂಡೆ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ತರಬೇತಿಯು ಸೆಪ್ಟೆಂಬರ್ ಮೊದಲ ವಾರದಿಂದ 31 ದಿನಗಳ ಉಚಿತ ತರಬೇತಿ ನೀಡಲಾಗುವುದು.
ತರಬೇತಿ ಅವಧಿಯಲ್ಲಿ ಡಿಜಿಟಲ್ ಕ್ಯಾಮೆರಾ ಬಳಕೆ, ಫೋಟೋಗ್ರಫಿಯ ಮೂಲಭೂತ ತತ್ವಗಳು, ಲೈಟಿಂಗ್ ತಂತ್ರಗಳು, ಪೋಟ್ರೇಟ್, ಮದುವೆ ಹಾಗೂ ಕಾರ್ಯಕ್ರಮಗಳ ಛಾಯಾಗ್ರಹಣ, ವಿಡಿಯೋಗ್ರಫಿ, ಡೋನ್ ಛಾಯಾಗ್ರಹಣದ ಪರಿಚಯ, ವಿಡಿಯೋ ಎಡಿಟಿಂಗ್, ಫೋಟೋ ಎಡಿಟಿಂಗ್, ಆಲ್ಬಮ್ ವಿನ್ಯಾಸ, ಸಾಮಾಜಿಕ ಮಾಧ್ಯಮಗಳಿಗಾಗಿ ಕಂಟೆಂಟ್ ಸೃಷ್ಟಿ, ಗ್ರಾಹಕ ನಿರ್ವಹಣೆ ಹಾಗೂ ಸ್ವಂತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಉದ್ಯಮ ಆರಂಭಿಸುವ ಕುರಿತು ಸಮಗ್ರ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು,ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರ ಸ್ವಂತ ಉದ್ಯಮ ಆರಂಭಿಸಲು ಬ್ಯಾಂಕ್ ಸಾಲದ ಮಾರ್ಗದರ್ಶನ ಹಾಗೂ ಉದ್ಯಮ ಸ್ಥಾಪನೆಗೆ ಅಗತ್ಯ ಸಲಹೆ ಮತ್ತು ಸಹಾಯ ನೀಡಲಾಗುತ್ತದೆ. ಆಸಕ್ತರು ಆನ್‌ಲೈನ್ ವೆಬ್‌ಸೈಟ್ www.rsetihaliyal.org ನಲ್ಲಿ https://forms.gle/VnZ557oP1PQ2
ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರ ಮೊ.ಸಂ: 8970145354, 9483485489 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Leave a comment