ಹರಪನಹಳ್ಳಿ : ಕಲಾವಿದರಿಗೆ ಕೊಡುವ ಮಾಸಾಶನದ ವಯೋಮಿತಿ ಸಡಿಲಗೊಳಿಸಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಜಿಲ್ಲಾ ಧ್ಯಕ್ಷ ರಮೇಶ್ ಹಂಚಿನಮನೆ ಒತ್ತಾಯಿಸಿದರು.
ತಾಲ್ಲೂಕಿನ ಸಾಸ್ವಿಹಳ್ಳಿಯಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾಮಟ್ಟದ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕಾರ್ಮಿಕ ಮುಖಂಡ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಗ್ರಾಮೀಣ ಪ್ರತಿಭೆಗಳು ಬಡವರಿದ್ದಾರೆ. ಮಾಸಾಶನಕ್ಕೆ ವಯಸ್ಸಿನ ಮಿತಿ ಇರುವುದರಿಂದ ಕಿರಿಯ ಕಲಾವಿದರು ರಂಗಭೂಮಿಯಿಂದ ದೂರ ಉಳಿಯುತ್ತಿದ್ದಾರೆ. ಅವರಿಗೂ ಮಾಸಾಶನದಂತಹ ಪ್ರೋತ್ಸಾಹಧನ ನಿಗಧಿಪಡಿಸಿದರೆ, ರಂಗಭೂಮಿ ಕಲೆ ಉಳಿಸಿ, ಮುಂದಿನ ಪೀಳಿಗೆಗೆ ಸಾಗಿಸಲು ಸುಲಭವಾಗುತ್ತದೆ ಎಂದರು.
ತಾಲ್ಲೂಕು ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ನಿವೃತ್ತ ಶಿಕ್ಷಕ ಡಗ್ಗಿ ಶಂಕರಪ್ಪ, ಕಲಾವಿದ ಸಂಕಳ್ಳಿ ಶಿವಣ್ಣ ಮಾತನಾಡಿದರು. ಹಗರಿಬೊಮ್ಮನಹಳ್ಳಿ ತಾಲ್ಲೂಕು ಅಧ್ಯಕ್ಷ ಉಮಾಶಂಕರ್, ಗಂಗಜ್ಜಿ ನಾಗರಾಜ್, ಗೋಪಾಲಪ್ಪ, ಎಂ.ಪಿ.ಮೂಗಪ್ಪ, ಅಜ್ಜಯ್ಯ, ಹನುಮಂತಪ್ಪ ಇದ್ದರು.
Leave a comment