Home ಪೋಲೀಸ್ ಠಾಣೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ – ಎಸ್‌ಪಿ ಎಸ್.ಜಾಹ್ನವಿ
Homeಸುದ್ದಿಗಳು

ಪೋಲೀಸ್ ಠಾಣೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ – ಎಸ್‌ಪಿ ಎಸ್.ಜಾಹ್ನವಿ

Share
Share

ಹರಪನಹಳ್ಳಿ : ಪೋಲೀಸ್ ಇಲಾಖೆಯು ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಏಕಗವಾಕ್ಷಿ ಪ್ರಾರಂಭಿಸಿ ಒಂದೇ ಸೂರಿನಡಿ ಎಲ್ಲಾ ಸೌಕರ್ಯ ಕೊಡುವ ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ತಿಳಿಸಿದರು. ಹರಪನಹಳ್ಳಿ ನಗರದ ಪೋಲೀಸ್ ಠಾಣೆಯ ಅವರಣದಲ್ಲಿ ಶನಿವಾರ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಗಣೇಶ ಮೂರ್ತಿ ಕೂರಿಸುವ ಆಯೋಜಕರು ಪೋಲೀಸ್ ಇಲಾಖೆಗೆ ನೀಡಿರುವ ಮುಚ್ಚಳಿಕೆ ಪತ್ರದ ಆದೇಶದ ನಿಯಮಗಳಿಗೆ ಸನ್ನದ್ದರಾಗಿಬೇಕು.

ಗಣೇಶ ಮೂರ್ತಿ ಕೂರಿಸುವ ಸ್ಥಳವನ್ನು ಸರಿಯಾಗಿ ಪರಿಶೀಲಿಸಿ ಸ್ಥಳೀಯ ಆಡಳಿತ, ಕೆಇಬಿ, ನಗರಸಭೆ, ಅಗ್ನಿ ಶಾಮಕ ಕಛೇರಿಗಳಿಂದ ಕಡ್ಡಾಯವಾಗಿ ಪರವಾನಗಿ ಪಡೆದೆ ವಿದ್ಯುತ್ ಪೂರೈಕೆ ಮಾಡಿಕೊಳ್ಳಬೇಕು, ತುಕ್ಕು ಹಿಡಿದ ವೈರ್‌ಗಳಿಂದ ವಿದ್ಯುತ್ಪ ಡೆಯುವ ಕೆಲಸಕ್ಕೆ ಕೈ ಹಾಕಿ ಏನಾದರೂ ಅವಘಡಗಳು ಸಂಭವಿಸಿದಲ್ಲಿ ಆಯೋಜಕರೆ ನೇರ ಹೊಣೆಗಾರರಾಗುತ್ತೀರಿ. ಅನ್ನಸಂತರ್ಪಣೆ ಮಾಡುವವರು ಊಟ ಮತ್ತು ಆಹಾರ ಪದಾರ್ಥವನ್ನು ಸರಿಯಾಗಿ ಪರಿಶೀಲಿಸಿ ಭಕ್ತರಿಗೆ ಒದಗಿಸಬೇಕು. ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚು ಆಕರ್ಷಣೆ ಮತ್ತು ಜನದಟ್ಟಣೆ ಇರುವ ಗಣೇಶ ಮೂರ್ತಿಯ ಬಳಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು, ಮತ್ತು ಮಹಿಳೆಯರು ಮತ್ತು ಮಕ್ಕಳು ವೃದ್ದರಿಗೆ ಗಣೇಶನ ದರ್ಶನಕ್ಕೆ ಪ್ರತ್ಯೇಕ ಬ್ಯಾರಿಕೇಡ್ಅ ಳವಡಿಸಿಕೊಳ್ಳಬೇಕು.

ಅನ್ಯದರ್ಮಿಧಯರಿಗೆ ನೋವುಂಟಾಗದಂತ ಬ್ಯಾನರ್‌ಗಳನ್ನು ಹಾಕುವಂತಿಲ್ಲ, ಮೆರವಣಿಗೆ ವೇಳೆ ಡಿಜೆ ಅಳವಡಿಸುವಂತಿಲ್ಲ. ಅದನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ, ದೇಶದ ಕಲೆ ಸಾಹಿತ್ಯದ ಉಳಿವಿಗಾಗಿ ಮೂಲ ಪರಂಪರೆಯ ಗೀತಿಗಳನ್ನು ಹಾಕಬೇಕು, ವಿಸರ್ಜನೆ ಮಾಡುವಾಗ ಪ್ರಮುಖ ಆಯೋಜಕರು ಮಾತ್ರ ತೆರಳಬೇಕು ಎಂದು ತಿಳಿಸಿದರು.

ಡಿವೈಎಸ್ಪಿ ಡಾ.ಸಂತೋಷ್ ಚವ್ಹಾಣ್ ಮಾತನಾಡಿ, ಎಲ್ಲಾ ಸಮಾಜದವರು ಧರ್ಮದವರು ಕೂಡಿಕೊಂಡು ಸಂಭ್ರದಿಂದ ಹಬ್ಬ ಅಚರಣೆ ಮಾಡಬೇಕು. ಗಣೇಶ ಕೂರಿಸುವ ಆಯೋಜಕರು ಸಂಬಂದಿಸಿದ ಇಲಾಖೆವಾರು ಪರವಾನಗಿ ಪಡೆಯುವುದು ಕಡ್ಡಾಯ, ಸರ್ವಧರ್ಮೀಯರು ಕೂಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ದೇಶದಲ್ಲಿ ಪಾಶ್ಚಾತ್ಯ ಸಂಸ್ಕೃತಿ ಹೆಚ್ಚಿ ದೇಶೀಯ ಜಾನಪದ ಸೊಗಡಿನ ಗೀತೆಗಳು ಮರೆಯಾಗುತ್ತಿವೆ. ಅದರ ಉಳಿವಿಗಾಗಿ ಗಣೇಶ ವಿಸರ್ಜನೆ ವೇಳೆ ಜಾನಪದ, ಹಾಗೂ ಭಕ್ತೀಗೀತೆಗಳನ್ನು ಮೆರವಣಿಗೆಯಲ್ಲಿ ಹಾಕಬೇಕು.

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ವದಂತಿಗಳ ಬಗ್ಗೆ ಕಿವಿಗೊಡದೆ ಸತ್ಯಾಂಶವನ್ನು ಅರಿತು ಸಾಗಬೇಕು, ಪ್ರಚೋದನಕಾರಿ ಭಾಷಣಗಳನ್ನು ಮಾಡುವುದು ಸಾಮಾಜಿಕ ಜಾಲತಾಣಗಳಲ್ಲಿ ವಿಕೃತ ಮನಸ್ಥಿತಿ ತೋರಿಸುವಂತಹವರ ಮೇಲೆ ಇಲಾಖೆಯು ವಿಶೇಷ ನಿಗಾ ಇಟ್ಟಿರುತ್ತದೆ ಎಂದು ತಿಳಿಸಿದರು. ತಾಲೂಕಿನದ್ಯಂತ ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ಗಣೇಶ ಪರವಾನಗಿ ಹೆಸರಿನಲ್ಲಿ ಕೆಇಬಿ ಅಧಿಕಾರಿಗಳು ಮನಬಂದಂತೆ ಹಣ ಸುಲಿಗೆ ಮಾಡುತ್ತಿದ್ದಾರೆ, ಅದನ್ನು ತಡೆಗಟ್ಟಿ ಕಾನೂನಾತ್ಮಕ ದರ ನಿಗದಿ ಪಡಿಸುವಂತೆ ಕೌಟಿ ವಿನಯ್ ಸಲಹೆ ನೀಡಿದರು.

ಹಿಂಧೂ ಮಹಾಗಣಪತಿ ಅದಿತ್ಯ ಮಾತನಾಡಿ, ಡಿವೈಡರ್ ಕಾಮಗಾರಿ ನಡೆಯುತ್ತಿದ್ದು, ಡಿವೈಡರ್ ನಲ್ಲಿ ಕಬ್ಬಿಣ ಸಲಕೆಗಳು ಚಾಚಿಕೊಂಡಿದ್ದು, ಅವುಗಳನ್ನು ತೆರವುಗೊಳಿಸಬೇಕು. ಹಿಂದೂ ಮಹಾಗಣಪತಿ ಶೋಭಾಯಾತ್ರೆ ತೆರಳುವ ವೇಳೆ ನಮಗೆ ಸಮಸ್ಯೆ ಅಗದಂತೆ ಸಹಕಾರ ನೀಡಬೇಕು ಎಂದರು. ನಗರದ ಪ್ರಮುಖ ಬೀದಿಗಳಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ತೆರಳುವ ಮಾರ್ಗದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದ್ದು, ಕೂಡಲೆ ಸರಿಪಡಿಸಬೇಕು, ದಾರಿಯುದ್ದಕ್ಕೂ ವಿದ್ಯುತ್ ಪೂರೈಕೆಯಲ್ಲಿ ವ್ಯಥೆಯವಾಗದಂತೆ ನೋಡಿಕೊಳ್ಳಲು ಸಾರ್ವಜನಿಕರು ಸೂಚಿಸಿದದರು.

ಬಿ.ವಿ.ಗಿರೀಶ್ ಬಾಬು, ನಗರಸಭೆ ಪೌರಾಯುಕ್ತೆ ರೇಣುಕಾ ಎಸ್.ದೇಸಾಯಿ, ಓಂಕಾರಗೌಡ್ರು, ಎಚ್.ಎಂ.ಜಗದೀಶ್ ಸಿರಾಜುದ್ದಿನ್, ವರುಣ್ ಕೌಟಿ, ಮುಸ್ತಕ್ ರಿಜ್ವಿ ಸೇರಿದಂತೆ ಇತರರು ಮಾತನಾಡಿದರು. ಈ ವೇಳೆ ತಹಶೀಲ್ದಾರ್ ಡಿವೈಎಸ್ಪಿ ಡಾ. ಸಂತೋಷ್ ಚವ್ಹಾಣ್ ಸಿಪಿಐ ಮಹಾಂತೇಶ್ ಜಿ.ಸಜ್ಜನ್, ವಿವಿಧ ಠಾಣೆಗಳ ಪಿಎಸ್‌ಐಗಳಾದ ಶಂಭುಲಿಂಗಯ್ಯ ಸಿ.ಹಿರೇಮಠ, ವಿಜಯ್ ಕೃಷ್ಣ, ಎ.ಕಿರಣ್ ಕುಮಾರ್, ನಾಗರತ್ನಮ್ಮ, ಅಗ್ನಿಶಾಮಕ ಠಾಣಾಧಿಕಾರಿ ನರಸಪ್ಪ, ಕೆಇಬಿ ಸಹಾಯಕ ಇಂಜಿನಿಯರ್ ಬಸವರಾಜ್, ಎಚ್.ಎ.ಸುರೇಂದ್ರಬಾಬು, ಶರತ್, ಆದಿತ್ಯ, ಕೆ.ಮಹಬೂಬ್ ಸಾಬ್, ಜಾವೀದ್, ಅಂಜಿನಿ, ಹಿಂದೂ ಮಹಾಗಣಪತಿ ಸದಸ್ಯರು, ಗಣಪತಿ ಅಯೋಜಕರು ಸೇರಿದಂತೆ ಅನೇಕರಿದ್ದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.