ವಿಜಯನಗರ : ಶ್ರೀ ಶಂಕರ್ ಆನಂದಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ವಸಂತಕುಮಾರ ಅವರಿಗೆ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವಾಯ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಬಳ್ಳಾರಿ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ನಿಕಾಯದ ಪ್ರಾಧ್ಯಾಪಕರಾದ ಸಿಎಮ್ ಡಾ.ಜೀಲಾನ್ ಭಾಷಾ.ವಿ ಅವರ ಮಾರ್ಗದರ್ಶನದಲ್ಲಿ “ಇಂಪ್ಯಾಕ್ಟ್ ಆಫ್ ಡಿವಿಡೆಂಡ್ ಪಾಲಿಸಿ ಆನ್ ಶೇರ್ಹೋಲ್ಡರ್ಸ್ ವೆಲ್ತ್: ಆನ್ ಎಂಪರಿಕಲ್ ಎವಿಡೆನ್ಸ್ ಆಫ್ ಆಟೋಮೊಬೈಲ್ ಇಂಡಸ್ಟ್ರಿ ಇನ್ ಇಂಡಿಯಾ” ಎಂಬ ವಿಷಯ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಪ್ರಧಾನ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.
Leave a comment