Home ಕೃಷಿ ಹರಪನಹಳ್ಳಿಯಲ್ಲಿ ವೀಕೆಂಡ್ ಬಿರುಗಾಳಿ ಮಳೆಯ ಆರ್ಭಟ: ತತ್ತರಿಸಿದ ಹಳ್ಳಿಗಳು!
ಕೃಷಿ

ಹರಪನಹಳ್ಳಿಯಲ್ಲಿ ವೀಕೆಂಡ್ ಬಿರುಗಾಳಿ ಮಳೆಯ ಆರ್ಭಟ: ತತ್ತರಿಸಿದ ಹಳ್ಳಿಗಳು!

Share
RAIN DAMAGES
Share

ಹರಪನಹಳ್ಳಿ: ತಾಲ್ಲೂಕಿನಲ್ಲಿ ಶನಿವಾರ ಸಂಜೆ ದಿಢೀರ್‌ ಅಪ್ಪಳಿಸಿದ ರಭಸದ ಬಿರುಗಾಳಿ ಮತ್ತು ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿಯ ಹೊಡೆತಕ್ಕೆ 50ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿದ್ದು, ನೂರಾರು ಮರಗಳು ಹಾಗೂ ವಿದ್ಯುತ್‌ ಕಂಬಗಳು ಧರೆಗುರುಳಿ ಹತ್ತಾರು ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ.

ಬೆಂಡಿಗೇರೆ ಸಣ್ಣ ತಾಂಡಾ: ಇಲ್ಲಿ ಗಾಳಿ-ಮಳೆಯ ಆರ್ಭಟಕ್ಕೆ 25ಕ್ಕೂ ಹೆಚ್ಚು ಮನೆಗಳಿಗೆ ತೀವ್ರ ಹಾನಿಯಾಗಿದೆ. ಮನೆಯೊಂದರ ಮೇಲೆ ಬೃಹತ್ ಜಾಲಿಮರ ಉರುಳಿಬಿದ್ದಿದ್ದು, ಮನೆ ಮಂದಿಯೆಲ್ಲಾ ತಕ್ಷಣ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುಂಡಗತ್ತಿ ಮತ್ತು ಶೃಂಗಾರತೋಟ: ರಸ್ತೆಗೆ ಬೃಹತ್ ಬೇವಿನ ಮರ ಉರುಳಿ ವಾಹನ ಸಂಚಾರ ಬಂದ್ ಆಗಿತ್ತು. ಹಲವು ಮನೆಗಳ ಮೇಲ್ಛಾವಣಿಯ ಶೀಟ್‌ಗಳು ಗಾಳಿಯ ರಭಸಕ್ಕೆ ಹಾರಿಹೋಗಿವೆ. ಮಳೆ ಶುರುವಾಗುತ್ತಿದ್ದಂತೆ ಬೆಸ್ಕಾಂ ಸಿಬ್ಬಂದಿ ಪವರ್ ಕಟ್ ಮಾಡಿದ್ದರಿಂದ ದೊಡ್ಡ ಮಟ್ಟದ ವಿದ್ಯುತ್ ಅವಘಡ ತಪ್ಪಿದೆ.

ಕಂಚಿಕೆರೆ ರಸ್ತೆ: ರಸ್ತೆಗೆ ಮರ ಬಿದ್ದು ಪ್ರಯಾಣಿಕರು ಪರದಾಡುತ್ತಿದ್ದಾಗ, ಪೊಲೀಸರೇ ಖುದ್ದಾಗಿ ನಿಂತು ಸಾರ್ವಜನಿಕರ ಸಹಾಯದೊಂದಿಗೆ ಮರದ ಕೊಂಬೆಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ಬಾಗಳಿ, ಹಳ್ಳಿಕೇರಿ, ಸತ್ತೂರು, ಚೌಡಾಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲೂ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಗ್ರಾಮಸ್ಥರು ರಾತ್ರಿಯಿಡೀ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles
Homeಕೃಷಿ

ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿ...

Homeಕೃಷಿ

ಜಿಲ್ಲೆಯಲ್ಲಿ ಭೀಕರ ಬರಛಾಯೆ: ಬರ ಅಧ್ಯಯನಕ್ಕೆ ಅಖಾಡಕ್ಕಿಳಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ

ವಿಜಯನಗರ(ಹೊಸಪೇಟೆ) : ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ  ಜಿಲ್ಲೆಯಾದ್ಯಂತ ಬರ ಹಾಗೂ ಮಳೆ ಅಭಾವದ ಛಾಯೆ ಆವರಿಸಿದೆ....

Homeಕೃಷಿ

ತುಂಗಭದ್ರ ಜಲಾಶಯದ ನೀರು ಕೇವಲ ಕುಡಿಯಲು ಮಾತ್ರ  ರೈತರು ಪರ್ಯಾಯ ಬೆಳೆ ಆಶ್ರಯಿಸಿ : ಡಿಸಿ ಮನವಿ

ವಿಜಯನಗರ (ಹೊಸಪೇಟೆ) : ಮುಂಗಾರು ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಮಟ್ಟ ಕ್ಷೀಣಿಸುತ್ತಿದೆ ಜನ...

ಮೀನು ಗಾರಿಕೆ ಇಲಾಖೆ
Homeಕೃಷಿ

ಮೀನುಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026-27 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳಡಿ ಉಚಿತ ಮೀನುಗಾರಿಕೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.