Home ಅಡವಿಹಳ್ಳಿಯಲ್ಲಿ ಬಸವೇಶ್ವರ ದೇವಸ್ಥಾನದ ಕಳಸಾರೋಹಣ
Homeರಾಜಕೀಯಸುದ್ದಿಗಳು

ಅಡವಿಹಳ್ಳಿಯಲ್ಲಿ ಬಸವೇಶ್ವರ ದೇವಸ್ಥಾನದ ಕಳಸಾರೋಹಣ

Share
Share

ಹರಪನಹಳ್ಳಿ: ಮೊಬೈಲ್ಗೆ ಹೇಗೆ ನೆಟ್ವರ್ಕ್ ಟವರ್ ಮುಖ್ಯವೋ, ಹಾಗೆಯೇ ದೇವಸ್ಥಾನದ ಗೋಪುರಕ್ಕೆ ಕಳಸ ಬಹುಮುಖ್ಯ, ದೇವಸ್ಥಾನಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಬೆಳೆಸುವ ಶಕ್ತಿ ಕೇಂದ್ರಗಳಾಗಿವೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಸೋಮಾರ ಹಮ್ಮಿಕೊಂಡಿದ್ದ ಉಜ್ಜಯಿನಿ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಬಸವೇಶ್ವರ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಹಾಗೂ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಗೋಪುರದ ಮೇಲಿರುವ ಕಳಸವು ದೇವಸ್ಥಾನದ ಪವಿತ್ರ ಶಕ್ತಿಯ ಸಂಕೇತ. ಭಗವಂತನ ದಿವ್ಯ ಶಕ್ತಿಯು ಈ ಕಳಸದ ಮೂಲಕ ಇಡೀ ಊರಿಗೆ ಹರಡುತ್ತದೆ ಮತ್ತು ಪ್ರಕೃತಿಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗ್ರಾಮಸ್ಥರು ಪ್ರತಿದಿನ ದೇವರ ಸ್ಮರಣೆ ಮಾಡಬೇಕು. ಭಗವಂತನನ್ನು ಅರಿತಾಗ ಮಾತ್ರ ಅರಿವಿನ ನಿಜವಾದ ಜ್ಞಾನ ಉಂಟಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಅಡವಿಹಳ್ಳಿಯ ಸದ್ಗುರು ಶಿವಯೋಗಿ ವೀರ ಗಂಗಾಧರ ಹಾಲಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ರಾಜ್ಯ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಿ.ನಂಜನಗೌಡ, ದೇವಸ್ಥಾನ ಸಮಿತಿ ಅಧ್ಯಕ್ಷ ಎ.ಜೆ.ಮಂಜುನಾಥ ಗೌಡ, ಉಪಾಧ್ಯಕ್ಷ ಹಾವನೂರು ಹಾಲಪ್ಪ, ಮಲ್ಲಿಕಾರ್ಜುನ ಕಲ್ಮಠ, ಕರಿಬಸವರಾಜ, ಓಂಕಾರಗೌಡ, ಸುರೇಶ, ಪಿ.ಅರುಣ್ ಕುಮಾರ, ಪ್ರಧಾನ ಕಾರ್ಯದರ್ಶಿ ಗುಬ್ಬವ್ವರ ಪೂಜಾರ್ ಬಸವರಾಜ, ಖಜಾಂಚಿ ಬಿ.ಜಿ. ಶರಣಪ್ಪ, ಸಹ ಕಾರ್ಯದರ್ಶಿ ನಿಂಬಳಗೇರಿ ಬಸವರಾಜ ಇದ್ದರು.

 

 

 

 

 

Share

Leave a comment

Leave a Reply

Your email address will not be published. Required fields are marked *

Related Articles
Homeಶಿಕ್ಷಣ

ಹರಪನಹಳ್ಳಿ: ಪಂಚಮಸಾಲಿ ನೌಕರರ ಸಂಘದ ಪ್ರತಿಭಾ ಪುರಸ್ಕಾರ ಜೂನ್ 28ಕ್ಕೆ ಮುಂದೂಡಿಕೆ

ಹರಪನಹಳ್ಳಿ : ತಾಲೂಕು ಪಂಚಮಸಾಲಿ ಲಿಂಗಾಯತ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ...

Homeಕೃಷಿ

ಕೃಷಿ ಕಾರ್ಮಿಕರ ಕೊರತೆಗೆ ಮುಕ್ತಿ: 

ಹರಪನಹಳ್ಳಿ: ಗ್ರಾಮೀಣ ಭಾಗದ ರೈತರು ವರ್ಷಗಳಿಂದ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯಾದ 'ಸಕಾಲಕ್ಕೆ ಕೃಷಿ ಕಾರ್ಮಿಕರು ಸಿಗದಿರುವ'...

Homeಶಿಕ್ಷಣ

 ಹಗರಿ ಗಜಾಪುರ: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕರೆ

ಹರಪನಹಳ್ಳಿ : ಬಾಲ ಕಾರ್ಮಿಕ ಪದ್ಧತಿಯು ಸಮಾಜದ ದೊಡ್ಡ ಪಿಡುಗಾಗಿದ್ದು, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಆರೋಗ್ಯ...

Homeಶಿಕ್ಷಣ

ಅನಂತನಹಳ್ಳಿ : ಕಾಲೇಜುಗಳಿಗೆ ಪ್ರತ್ಯೇಕ ಸಾರಿಗೆ ಬಸ್‍ ಗೆ ಆಗ್ರಹ

ಹರಪನಹಳ್ಳಿ : ತಾಲೂಕಿನ ಅನಂತನಹಳ್ಳಿಯಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.