ಹರಪನಹಳ್ಳಿ : ತಾಲ್ಲೂಕಿನ ಹಲುವಾಗಲು ಗ್ರಾಮದ ಮಾರುತಿ ಪಬ್ಲಿಕ್ ಶಾಲೆಯ ಮಕ್ಕಳು ಸಾರಿಗೆ ಬಸ್ ನಲ್ಲಿ ಠಾಣೆ ಆವರಣ ಪ್ರವೇಶಿಸಿದರು. ಆಗಮಿಸಿದ ವಿದ್ಯಾರ್ಥಿಗಳಿಗೆ ಪಿಎಸ್ಐ ಕಿರಣ್ ಕುಮಾರ ಮಾತನಾಡಿ, ಸಂಪೂರ್ಣ ಠಾಣೆಯನ್ನು ಪರಿಚಯಿಸಿಕೊಟ್ಟರು. ಠಾಣೆಯಲ್ಲಿ ಸೆಂಟ್ರಿ ಪೊಲೀಸ್, ಬಾಗಿಲು, ಪೊಲೀಸ್ ಸಬ್ ಇನ್ಸಪೆಕ್ಟರ್ ಕರ್ತವ್ಯಗಳು, ತನಿಖಾಧಿಕಾರಿ ಕೋಣೆ, ದಾಸ್ತಾನು ಕೊಠಡಿ, ಪೊಲೀಸರ ವೆಪನ್ ಕೋಣೆ, ಜೈಲು, ವಾಕಿಟಾಕಿ, ರೈಫಲ್, ಗನ್ ಗಳನ್ನು ಪ್ರದರ್ಶಿಸಿ ಅವುಗಳ ಬಗ್ಗೆ ಮಾಹಿತಿ ಕೊಟ್ಟರು.
ಪೊಲೀಸ್ ಇಲಾಖೆ ತೆರೆದಮನೆ ಕಾರ್ಯಕ್ರಮದಡಿ ಶಾಲಾ ಮಕ್ಕಳಿಗೆ ಠಾಣೆಗಳ ಬಗ್ಗೆ ಅರಿವು ಮೂಡಿಸುವುದಾಗಿದೆ. ಇದರಿಂದ ಮಕ್ಕಳು, ಸಾರ್ವಜನಿಕರು ಪೊಲೀಸ್ ಸ್ನೇಹಿಯಾಗಿಸಲಾಗುತ್ತಿದೆ ಎಂದರು. ಪ್ರಥಮ ವರ್ತಮಾನ ವರದಿ, ವಿವಿಧ ತನಿಖಾ ವರದಿಗಳ ಬಗ್ಗೆ ಮಾಹಿತಿ ನೀಡಿದರು. ಠಾಣೆಯನ್ನು ವೀಕ್ಷಿಸಿದ ವಿದ್ಯಾರ್ಥಿಗಳಿಗೆ ಚಾಕುಲೆಟ್ ವಿತರಿಸಲಾಯಿತು. ಸಿಬ್ಬಂದಿಗಳಾದ ಮಂಜಪ್ಪ, ನಾಗರಾಜ್ ಚಿಂಚಲಿ, ಜಮಾಲ್ ಸಾಬ್, ಶಿವಕುಮಾರ ಹಾಗೂ ಶಾಲಾ ಶಿಕ್ಷಕರಿದ್ದರು.
Leave a comment