ವಿಜಯನಗರ(ಹೊಸಪೇಟೆ) : ಸಾಮಾಜಿಕ ಜಾಲತಾಣಗಳಲ್ಲಿ ಹಾವಿನ ಕಡಿತಕ್ಕೆ 108 ಆಂಬುಲೆನ್ಸ್ನಲ್ಲೇ ಔಷಧ ಲಭ್ಯವಿದ್ದು, ಕರೆ ಮಾಡಿದರೆ ಮನೆ ಬಾಗಿಲಿಗೆ ಬಂದು ಔಷಧ ನೀಡುತ್ತಾರೆ ಎಂಬ ಗಾಳಿಸುದ್ದಿ ಹರಡಲಾಗುತ್ತಿದೆ. ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು
ಸ್ಪಷ್ಟಪಡಿಸಿದ್ದಾರೆ.
ಹಾವಿನ ಕಡಿತಕ್ಕೆ ಆಂಟಿ-ಸ್ನೇಕ್ ವೆನಮ್ ಔಷಧವು ಹತ್ತಿರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಆದ್ದರಿಂದ, ಹಾವಿನ ಕಡಿತಕ್ಕೊಳಗಾದವರು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಉಚಿತವಾಗಿ ಚಿಕಿತ್ಸೆ ಮತ್ತು ಔಷಧವನ್ನು ಪಡೆದುಕೊಳ್ಳಬಹುದು ಎಂದು ಮನವಿ ಮಾಡಿದ್ದಾರೆ.
Leave a comment