ಹರಪನಹಳ್ಳಿ: ತಾಲೂಕಿನ ಐತಿಹಾಸಿಕ ಬಾಗಳಿ ಗ್ರಾಮದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮದ ಬಿ. ವೈ. ದುರುಗೇಶ್ ಅವರ ಪುತ್ರಿಯಾದ ಬಿ. ವೈ. ಹೇಮಲತಾ, ಶ್ರೀಕೃಷ್ಣನ ಮನಮೋಹಕ ವೇಷಭೂಷಣ ತೊಟ್ಟು ಎಲ್ಲರ ಗಮನ ಸೆಳೆದಳು. ಪುಟ್ಟ ಬಾಲಕಿ ಹೇಮಲತಾ ಧರಿಸಿದ್ದ ಕಿರೀಟ, ನವಿಲುಗರಿ, ಕೈಯಲ್ಲಿನ ಕೊಳಲು ಹಾಗೂ ಬಣ್ಣಬಣ್ಣದ ಉಡುಪು ಕೃಷ್ಣನ ಲೀಲೆಯನ್ನು ನೆನಪಿಸುವಂತಿತ್ತು.
ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಮಗುವಿಗೆ ಕೃಷ್ಣನ ಅಲಂಕಾರ ಮಾಡಿ ಸಂಭ್ರಮಿಸಲಾಯಿತು. ಕಂದಮ್ಮನ ಈ ಸುಂದರ ರೂಪವನ್ನು ಕಂಡು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿ, ಮಗುವಿಗೆ ಶುಭ ಹಾರೈಸಿದರು
Leave a comment