ವಿಜಯನಗರ : ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸಿಕೇರೆಯಲ್ಲಿ, ಊರಿನ ಕ್ಷೇಮಾಭಿವೃದ್ಧಿ ಹಾಗೂ ಗ್ರಾಮದ ದೇವತೆಯ ಮೇಲಿನ ಭಕ್ತಿಯ ಸಂಕೇತವಾಗಿ ‘ಅಮ್ಮನವರನ್ನು ಗಡಿ ಭಾಗದಲ್ಲಿ ಇಟ್ಟು ಬರುವ’ (ಕಳಿಸುವ) ಸಾಂಪ್ರದಾಯಿಕ ಆಚರಣೆಯನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.
ಊರಿಗೆ ಬರುವ ಕಷ್ಟ-ಕಾರ್ಪಣ್ಯಗಳು, ರೋಗ-ರುಜಿನಗಳು ದೂರವಾಗಲಿ ಮತ್ತು ಬೆಳೆ-ಬೆಳೆಗೆ ಸಮೃದ್ಧಿ ಸಿಗಲಿ ಎಂಬ ಪ್ರಾರ್ಥನೆಯೊಂದಿಗೆ ದೇವತೆಯನ್ನು ಊರಿನ ಗಡಿ ಭಾಗಕ್ಕೆ (ಅಮ್ಮನ ಊರಿನ ಗಡಿ) ತೆಗೆದುಕೊಂಡು ಹೋಗಿ ನಿಗದಿಪಡಿಸಿದ ಸ್ಥಾಪನೆಯ ಜಾಗದಲ್ಲಿ ಇಟ್ಟು ಬರುವ (ಕಳಿಸುವ) ವಿಧಿಯನ್ನು ಪೂರ್ಣಗೊಳಿಸಲಾಯಿತು. ಈ ಆಚರಣೆಯಲ್ಲಿ ಗ್ರಾಮಸ್ಥರು ಹಾಗೂ ಭಕ್ತಾಧಿಗಳಿದ್ದರು.
Leave a comment