Home ಮಳೆಗಾಗಿ ಮುಸ್ಲಿಂರಿಂದ ಸಲಾತ್ ಆಲ್‍ ಇಸ್ತಿಸ್ಕಾ ಪ್ರಾರ್ಥನೆ
Homeಸುದ್ದಿಗಳು

ಮಳೆಗಾಗಿ ಮುಸ್ಲಿಂರಿಂದ ಸಲಾತ್ ಆಲ್‍ ಇಸ್ತಿಸ್ಕಾ ಪ್ರಾರ್ಥನೆ

Share
Share

ಹರಪನಹಳ್ಳಿ : ಬಿತ್ತನೆ ಮಾಡಿ ಎದೆಯುದ್ದ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗಾಗಿ ಅಲ್ಲಾನ (ದೇವರ) ಮೊರೆ ಹೋಗಿರುವ  ನಗರದ ಐದು ಕೇರಿ ಮುಸ್ಲೀಂ ದೈವಸ್ಥರು ಭಾನುವಾರ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ನಗರದ ತೆಕ್ಕದಗರಡಿಕೇರಿ, ಗುಂಡಿನಕೇರಿ, ಗಾಜಿಕೇರಿ, ಇಸ್ಲಾಂಪುರ, ಖಾಜಾರ ಓಣಿ ಹಾಗೂ ಬಂಗಿ ಮೊಹಲ್ಲಾ ಬಡಾವಣೆಯ ಮುಸ್ಲಿಂ ಧರ್ಮದ ಮೌಲ್ವಿಗಳ ಸಮ್ಮುಖದಲ್ಲಿ ನಗರದ ರೈಲ್ವೆ ನಿಲ್ದಾಣ ಸಮೀಪವಿರುವ ಖಬರಸ್ತಾನ ಖಾಲಿ ಪ್ರದೇಶದಲ್ಲಿ ನೂರಾರು ಜನರು, ಒಂದು ತಾಸು ಮಳೆರಾಯನ ಕೃಪೆಗೆ ಪ್ರಾರ್ಥಿಸಿದರು.

ನಿತ್ಯ ಮಸೀದಿಯಲ್ಲಿ ಮಾಡುವ ಪ್ರಾರ್ಥನೆಗಿಂತ ಇದು ಭಿನ್ನವಾಗಿತ್ತು. ಸಲಾತ್ ಆಲ್‍ ಇಸ್ತಿಸ್ಕಾ ಎಂದು ಕರೆಯಿಸಿಕೊಳ್ಳುವ ಈ ನಮಾಜ್‍ ನಲ್ಲಿ, ಮುಸ್ಲಿಂರು ತಮ್ಮ ಎರಡು ಹಸ್ತಗಳನ್ನು ಭೂಮಿಯತ್ತ ತಿರುಗಿಸಿ ಅಲ್ಲಾ ರ ಬಳಿ ಕ್ಷಮೆಯಾಚಿಸಿದ್ದು ವಿಶೇಷವಾಗಿತ್ತು. ‘ನಮ್ಮ ತಪ್ಪುಗಳಿಂದ ದೇವರು ಮಳೆಯನ್ನು ತಡೆ ಹಿಡಿಯುತ್ತಾನೆ. ದೇವರಲ್ಲಿ ಕ್ಷಮೆಯಾಚಿಸಿದರೆ ದೇವರು ಕರುಣೆ ತೋರಿ ಮಳೆ ಸುರಿಸುತ್ತಾನೆ, ಸಮೃದ್ದಿ ತಂದುಕೊಡುತ್ತಾನೆ.

ಈ ನಂಬಿಕೆಯಲ್ಲಿ ನಾವೆಲ್ಲರೂ ನಮ್ಮ ತಪ್ಪುಗಳನ್ನು ಮನ್ನಿಸಲು, ಕ್ಷಮೆಯಾಚಿಸಿ, ಅಲ್ಲಾ ದೇವರಿಗೆ ಪ್ರಾರ್ಥನೆ ಸಲ್ಲಿಸಿರುವುದಾಗಿ’ ನೇತೃತ್ವ ವಹಿಸಿದ್ದ ಮಸೀದಿಯ ಮೌಲ್ವಿಗಳು ಮಾಹಿತಿ ನೀಡಿದರು. ಮೌಲ್ವಿಗಳಾದ ಹೈದರ್ ಅಲಿ, ಅಮ್ಜದ್ ಅಲಿ, ಅಬುಸಾಲೇಹ, ಹಾಫೀಜ್ ಶಹೀದ್, ಗುಲಾಂ ರಬ್ಬಾನಿ ಅವರು ಮಾತನಾಡಿದರು. ದೈವಸ್ಥರಾದ ಬಿ.ಮೆಹಬೂಬ್ ಸಾಬ್, ಹೆಚ್.ಜಿಲಾನ್, ಎಸ್‍.ಹತೀಕ್, ಕೆ.ಇಮಾಮ್ ಸಾಬ್, ಎಸ್‍.ನೂರುಲ್ಲಾ, ಎ.ಫಾಜಿಲ್ಲಾ, ಎಸ್‍.ಕೆ.ರಫೀಕ್, ಎಸ್‍.ಕೆ.ಮುಸ್ತಾಫ, ಕೆ.ರಿಜ್ವಾನ್, ವಿ.ಶೌಕತ್ ಅಲಿ, ರಫೀಕ್, ಬುಡೇನ್‍ ಸಾಬ್. ಕೆ.ಮೆಹಬೂಬ್ ಸಾಬ್, ಎ.ಜಬಿವುಲ್ಲಾ, ಎ.ಜಾವಿದ್, ಜೆ.ನೌಷದ್ ಇತರರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಬಾಕಿ ಕೂಲಿ ಪಾವತಿಸಿ, ನಿವೇಶನ ಒದಗಿಸಿ: ಕುಂಚೂರು ಗ್ರಾ.ಪಂ. ಎದುರು ಕಾರ್ಮಿಕರ ಹಕ್ಕೋತ್ತಾಯ

ಹರಪನಹಳ್ಳಿ : ತಾಲ್ಲೂಕಿನ ಕುಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಚೂರು ಹಾಗೂ ಅರಸನಾಳು ಗ್ರಾಮಗಳ ನರೇಗಾ...

Homeಸುದ್ದಿಗಳು

ಗ್ರಾಪಂ ಗಳಿಗೆ ಅನುದಾನ ಕಡಿತ ಖಂಡಿಸಿ ಪ್ರತಿಭಟನೆ

ಹರಪನಹಳ್ಳಿ : ಗ್ರಾಮ ಪಂಚಾಯಿತಿಗಳಿಗೆ ಅನುದಾನ ಕಡಿತಗೊಳಿಸಿರುವುದನ್ನು ಖಂಡಿಸಿ ಅಖಿಲ ಭಾರತ ಕಿಸಾನ್ ಸಭಾ ಹಗರಿಗುಡಿಹಳ್ಳಿ...

Homeಸುದ್ದಿಗಳು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷಣ್ ಮಾಸಾಚರಣೆ ಕಾರ್ಯಕ್ರಮ 

ವಿಜಯನಗರ : ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ವಲಯದ ಪಾಪಿನಾಯಕನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ  4ರಲ್ಲಿ...

Homeಸುದ್ದಿಗಳು

ಸೆ.25ರಂದು ದಿಶಾ ಸಮಿತಿ ಪ್ರಗತಿ ಪರಿಶೀಲನಾ ಸಭೆ

ವಿಜಯನಗರ : ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೆಪ್ಟೆಂಬರ್ 25ರಂದು ಬೆಳಗ್ಗೆ 11 ಗಂಟೆಗೆ ಸಂಸದರಾದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.