Home ಗ್ರಾಪಂ ಗಳಿಗೆ ಅನುದಾನ ಕಡಿತ ಖಂಡಿಸಿ ಪ್ರತಿಭಟನೆ
Homeಸುದ್ದಿಗಳು

ಗ್ರಾಪಂ ಗಳಿಗೆ ಅನುದಾನ ಕಡಿತ ಖಂಡಿಸಿ ಪ್ರತಿಭಟನೆ

Share
Share

ಹರಪನಹಳ್ಳಿ : ಗ್ರಾಮ ಪಂಚಾಯಿತಿಗಳಿಗೆ ಅನುದಾನ ಕಡಿತಗೊಳಿಸಿರುವುದನ್ನು ಖಂಡಿಸಿ ಅಖಿಲ ಭಾರತ ಕಿಸಾನ್ ಸಭಾ ಹಗರಿಗುಡಿಹಳ್ಳಿ ಶಾಖೆಯಿಂದ ತಾಲ್ಲೂಕಿನ ಸಾಸ್ವಿಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಾಸ್ವಿಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ಮಾಡಿದ ಪದಾಧಿಕಾರಿಗಳು ವಿಬಿ ಜಿ ರಾಮ್‍ ಜಿ ಯೋಜನೆಯಡಿ 2 ತಿಂಗಳಬಾಕಿ ಹಣ ಬಿಡುಗಡೆ ಮಾಡಬೇಕು. 15ನೇ ಹಣಕಾಸು ಮತ್ತು ವಿಬಿಜಿ ರಾಮ್‍ ಜಿ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು. ಸಾಸ್ವಿಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ವೈಜ್ಞಾನಿಕ ಚರಂಡಿ ವ್ಯವಸ್ಥೆ ನಿರ್ಮಿಸಬೇಕು. ಬೀದಿ ದೀಪ ಅಳವಡಿಸಬೇಕು.

ಸ್ಮಶಾನಕ್ಕೆ ಗುಣಮಟ್ಟದ ರಸ್ತೆ, ತಂತಿ ಬೇಲಿ, ಸರ್ಕಾರಿ ಸಾರಿಗೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ಹರಪನಹಳ್ಳಿಯಿಂದ ನಿಚ್ಚಾಪುರ, ಮುತ್ತಿಗಿ, ಕೊಟ್ಟೂರು ಮಾರ್ಗವಾಗಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಎರಡು ಸರ್ಕಾರಿ ಸರ್ಕಾರಿ ಬಸ್ ಒದಗಿಸಬೇಕು. ಸಾಮಾಜಿಕ ಭದ್ರತಾ ವೇತನ, ಸಂಧ್ಯಾ ಸುರಕ್ಷಾ, ವಿಧವೆ ವೇತನ ಹಣ ಮುಂಜೂರು ಮಾಡಬೇಕು.

ಬಾಕಿಯಿರುವ ಇಸ್ವತ್ತುಗಳನ್ನು ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು. ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಅಧ್ಯಕ್ಷ ಗುಡಿಹಳ್ಳಿ ಹಾಲೇಶ್, ಹಗರಿಗುಡಿ ಶಿವರಾಮ್, ಡಿ.ಎಚ್.ಅರುಣ್, ಎ.ಹಾಲೇಶಪ್ಪ, ಪ್ರಭುಗೌಡ, ಸಲಾಂ ಸಾಹೇಬ್, ಈಶಪ್ಪ ಕಡಗೆರೆ, ಎಂ.ಕಾಳಮ್ಮ,ಶಾಂತಪ್ಪ, ಹುಲಿಗೆಪ್ಪ, ಬಿ.ಚೆನ್ನಬಸಪ್ಪ, ಕೊಟ್ರೇಶ್, ಎಂ.ಪ್ರಕಾಶ, ಎಲ್‍.ಹಾಲೇಶ್, ಟಿ.ನಾಗರಾಜ್, ಶಂಭುಲಿಂಗಪ್ಪ, ಗೋವಿಂಧರಾಜ್ , ಟಿ.ಮಂಜುನಾಥ ಇತರರಿದ್ದರು. ಹರಪನಹಳ್ಳಿ ತಾಲ್ಲೂಕು ಸಾಸ್ವಿಹಳ್ಳಿ ಗ್ರಾಮದಲ್ಲಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಮಳೆಗಾಗಿ ಮುಸ್ಲಿಂರಿಂದ ಸಲಾತ್ ಆಲ್‍ ಇಸ್ತಿಸ್ಕಾ ಪ್ರಾರ್ಥನೆ

ಹರಪನಹಳ್ಳಿ : ಬಿತ್ತನೆ ಮಾಡಿ ಎದೆಯುದ್ದ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗಾಗಿ ಅಲ್ಲಾನ (ದೇವರ) ಮೊರೆ...

Homeಸುದ್ದಿಗಳು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷಣ್ ಮಾಸಾಚರಣೆ ಕಾರ್ಯಕ್ರಮ 

ವಿಜಯನಗರ : ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ವಲಯದ ಪಾಪಿನಾಯಕನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ  4ರಲ್ಲಿ...

Homeಸುದ್ದಿಗಳು

ಸೆ.25ರಂದು ದಿಶಾ ಸಮಿತಿ ಪ್ರಗತಿ ಪರಿಶೀಲನಾ ಸಭೆ

ವಿಜಯನಗರ : ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೆಪ್ಟೆಂಬರ್ 25ರಂದು ಬೆಳಗ್ಗೆ 11 ಗಂಟೆಗೆ ಸಂಸದರಾದ...

Homeಸುದ್ದಿಗಳು

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ -2026″ಶಿಕ್ಷಕ ಸೇವಾ ರತ್ನ”ಪ್ರಶಸ್ತಿ ಪ್ರಧಾನ.

ಹರಪನಹಳ್ಳಿ: ತಾಲೂಕಿನ ಅರಸನಾಳು ಗ್ರಾಮದ ಹೆಚ್.ಶಿವಾನಂದ ಅವರು ಹರಪನಹಳ್ಳಿ ನಗರದ ಶ್ರೀ ತರಳಬಾಳು ಜಗದ್ಗುರು ವಿದ್ಯಾ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.