Home ಸುದ್ದಿಗಳು ದೇವರ ತಿಮ್ಲಾಪುರ : ಡಿ.4ಕ್ಕೆ ವೆಂಕಟೇಶ್ವರ ರಥೋತ್ಸವ
ಸುದ್ದಿಗಳು

ದೇವರ ತಿಮ್ಲಾಪುರ : ಡಿ.4ಕ್ಕೆ ವೆಂಕಟೇಶ್ವರ ರಥೋತ್ಸವ

Share
devara timlapura
Share

ಹರಪನಹಳ್ಳಿ : ನಗರಕ್ಕೆ ಸಮೀಪದ ದೇವರ ತಿಮ್ಮಲಾಪುರ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ರಥೋತ್ಸವ ನ.30 ರಿಂದ ಡಿ.6ರ ವರೆಗೆ ಜರುಗಲಿದೆ.

ನ.30ರ ಭಾನುವಾರದಿಂದ ಪ್ರಾರಂಭವಾಗಿ ಡಿ.6ರ ಶನಿವಾರವರೆಗೆ ನಡೆಯುತ್ತದೆ. ನ.30ರ ಭಾನುವಾರ ಮಾರ್ಗಶಿರ ಶುದ್ದದಶಮಿ ಸಂಜೆ 6 ಗಂಟೆಗೆ ಸ್ವಾಮಿಯ ಕಂಕಣ ಮಹೋತ್ಸವ ಜರುಗುವುದು. ಡಿ.1 ಸೋಮವಾರ ಸ್ವಾಮಿಗೆ ಪಂಚಾಮೃತ ಅಭಿಷೇಕ, ಸಂಜೆ 7 ಗಂಟೆಗೆ 1ನೇ ಹುಚ್ಚಯ್ಯ ಜರುಗುವುದು. ಡಿ.2ರ ಮಂಗಳವಾರ 2ನೇ ಉಚ್ಚಯ್ಯ, ಡಿ.3ರ ಬುಧವಾರ ಪಂಚಾಮೃತ ಅಭಿಷೇಕ ಹಾಗೂ 3ನೇ ಉಚ್ಚಯ್ಯ, ಡಿ.4 ಗುರುವಾರ 4ನೇ ಉಚ್ಚಯ್ಯ ಉತ್ಸವ ಜರುಗುವುದು. ಆ ದಿನ ಬೆಳಿಗ್ಗೆ 10 ರಿಂದ 11.40ರ ವರೆಗೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. 11.45ರ ನಂತರ ಸ್ವರ್ಣ ಅಲಂಕಾರಯುತ ಸ್ವಾಮಿ ದರ್ಶನ ಪಡೆಯಬಹುದು. ಮದ್ಯಾಹ್ನ 12 ಗಂಟೆಗೆ ಕೋಂಟೆ ಆಂಜನೇಯ ಮತ್ತು ಸ್ವಾಮಿ ರಥವನ್ನೇರಿ ರಾಜಬೀದಿಯಲ್ಲಿ ಬ್ರಹ್ಮ ರಥೋತ್ಸವ ವಿಜೃಂಬಣೆಯಿಂದ ಜರುಗುವುದು.

ಅದೇ ದಿನ ಸಂಜೆ 6.30ಕ್ಕೆ ಸಾರ್ವಜನಿಕ ರಥೋತ್ಸವ ಸಂಜೆ 6.30ಕ್ಕೆ ನಡೆಯಲಿದೆ. ಡಿ.5ರ ಶುಕ್ರವಾರ ಕೋಟೆ ಆಂಜನೇಯ ಸ್ವಾಮಿ ಸಮೇತ ಸ್ವಾಮಿಯು ಬೇಟೆಗೆ ತೆರಳುವ ಸಂಪ್ರದಾಯ ನಡೆಯುವುದು. ಡಿ.6ರಂದು ರಾತ್ರಿ 11 ಗಂಟೆಗೆ ಓಕುಳಿ ಹಾಗೂ ಅವಾಮೃತ ಉತ್ಸವ ಜರುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಯಶಸ್ವಿ ಗೊಳಿಸಲು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.

 

 

 

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಹರಪನಹಳ್ಳಿ : ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ 

ಪ್ರಜಾಸೇವ ಆಂದೋಲನ ಜನರ ಹೃದಯಕ್ಕೆ ಮುಟ್ಟುವಂತಿರಲಿ ಹರಪನಹಳ್ಳಿ :  ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ...

Homeಸುದ್ದಿಗಳು

ಬಾಲಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ 

ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ...

Homeಸುದ್ದಿಗಳು

ಜೆಡಿಎಸ್ ಅಧ್ಯಕ್ಷರಾಗಿ ವಿ. ಮಲ್ಕಪ್ಪ ಆಯ್ಕೆ

ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ...

Homeಸುದ್ದಿಗಳು

ಮಕ್ಕಳಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ನೀಡುವ ಹೊಣೆ ಎಲ್ಲರದ್ದು: ಪ್ರಾಂಶುಪಾಲ ಡಾ. ಎಂ. ಸುರೇಶ್

ಹರಪನಹಳ್ಳಿ : 'ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಹೊಣೆಯನ್ನು ಪ್ರತಿಯೊಬ್ಬರೂ ಹೊರಬೇಕು'...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.