Home ಅಪರಾಧ ದಾವಣಗೆರೆ : ಸಂಚಾರ ನಿಯಮ ಉಲ್ಲಂಘನೆಗೆ ಶೇ.50ರಷ್ಟು ರಿಯಾಯ್ತಿ
ಅಪರಾಧ

ದಾವಣಗೆರೆ : ಸಂಚಾರ ನಿಯಮ ಉಲ್ಲಂಘನೆಗೆ ಶೇ.50ರಷ್ಟು ರಿಯಾಯ್ತಿ

Share
ದಾವಣಗೆರೆ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50ರಷ್ಟು ಮೀಸಲಾತಿ
Share

ದಾವಣಗೆರೆ : ಸಂಚಾರ ನಿಯಮಗಳ ಉಲ್ಲಂಘನೆ ಇ-ಚಲನ್ ದಂಡವನ್ನು ಪಾವತಿಸದೇ ಇರುವ ಪ್ರಕರಣಗಳಿಗೆ ಶೇ.50 ರಷ್ಟು ರಿಯಾಯತಿ  ಪಾವತಿಸಿ, ಉಲ್ಲಂಘನೆ ಮುಕ್ತವಾಗಲು ಡಿ.12 ಶುಕ್ರವಾರ ಕೊನೆಯ ದಿನ.

ಘನ ರಾಜ್ಯ ಸರ್ಕಾರವು, ಸರ್ಕಾರದ ಆದೇಶ ಸಂಖ್ಯೆ: ಟಿಡಿ 27 ಟಿಡಿಓ 2023 ಬೆಂಗಳೂರು, ದಿನಾಂಕ; 21.08.2025 ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಈ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ರಿಯಾಯಿತಿಯನ್ನು ನೀಡಿ ಆದೇಶಿಸಿರುತ್ತದೆ.

ಸಂಚಾರ ನಿಯಮಗಳ ಉಲ್ಲಂಘನೆಯ ಇ-ಚಲನ್ ದಂಡವನ್ನು ಪಾವತಿಸಲು ಶೇ 50% ರಷ್ಟು ಈ ಆದೇಶವು ದಿನಾಂಕ: 23.08.2025 ರಿಂದ 12.09.2025 ರವರೆಗೆ ಜಾರಿಯಲ್ಲಿರುತ್ತದೆ. ಸಂಚಾರ ನಿಯಮಗಳ ಉಲ್ಲಂಘನೆಯ ಇ-ಚಲನ್ ದಂಡವನ್ನು ಪಾವತಿಸದೇ ಇರುವ ಪ್ರಕರಣಗಳಿಗೆ ಶೇ.50 ರಷ್ಟು ರಿಯಾಯತಿ ದಂಡವನ್ನು ಪಾವತಿಸಲು ನಾಳೆ ದಿನಾಂಕ 12-12-2025 ರಂದು ಕೊನೆ ದಿನವಾಗಿದ್ದು ಕೂಡಲೇ ಈ ಕೆಳಕಂಡ ಸ್ಥಳಗಳಲ್ಲಿ ದಂಡವನ್ನು ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.

 ಬಾಕಿ ಇರುವ ಇ-ಚಲನ್ ದಂಡ ಪಾವತಿಸುವ ಸ್ಥಳಗಳು :

  1. ಪೋಸ್ಟ್ ಆಫೀಸ್ ಗಳಿಗೆ ಬೇಟಿ ನೀಡಿ ಪಾವತಿಸಬಹುದಾಗಿದೆ.
  2. ದಾವಣಗೆರೆ ನಗರದ ಉತ್ತರ ಸಂಚಾರಿ ಪೊಲೀಸ್ ಠಾಣೆ, ದಕ್ಷಿಣ ಸಂಚಾರ ಠಾಣೆ, ಆರ್.ಟಿ.ಓ ಕಛೇರಿ ವೃತ್ತ, ಎಸಿ ಕಛೇರಿ ವೃತ್ತ, ಅರುಣ ವೃತ್ತ ( ಸಂಚಾರ ವೃತ್ತ ಕಛೇರಿ), ಸಂಗೊಳ್ಳಿ ರಾಯಣ್ಣ ವೃತ್ತ, ನಿಜಲಿಂಗಪ್ಪ ಬಡಾವಣೆ ಬಳಿ ಕರ್ನಲ್ ರವೀಂದ್ರನಾಥ ವೃತ್ತ (ಟವರ್ ಕ್ಲಾಕ್ ವೃತ್ತ), ಡೆಂಟಲ್ ಕಾಲೇಜ್ ರಸ್ತೆ, ಬಾಡಾ ಕ್ರಾಸ್, ರಾಮ & ಕೋ ವೃತ್ತ, ಹೈಸ್ಕೂಲ್ ಮೈದಾನ ಗಳಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳ ಬಳಿ ಬೇಟಿ ನೀಡಿ ಇ-ಚಲನ್ ದಂಡವನ್ನು ಪಾವತಿಸಬಹುದಾಗಿದೆ.
  3. ಮೇಲ್ಕಂಡ ಸ್ಥಳಗಳಲ್ಲಿ ಅಲ್ಲದೇ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆ ಬೇಟಿ ನೀಡಿ ತಮ್ಮ ವಾಹನಗಳ ಮೇಲೆ ಇರುವ ಇ-ಚಲನ್ ಬಾಕಿ ಇರುವ ದಂಡವನ್ನು ಪರಿಶೀಲಿಸಿ ಪಾವತಿಸಬಹುದಾಗಿದೆ
Share

Leave a comment

Leave a Reply

Your email address will not be published. Required fields are marked *

Related Articles
Homeಅಪರಾಧ

ಹರಪನಹಳ್ಳಿ: ನಕಲಿ ದಾಖಲೆ ಸೃಷ್ಟಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12...

Homeಅಪರಾಧ

ಪೊಲೀಸ್ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ : 4.57ಕೋಟಿ ಸ್ವತ್ತು ವಶ

ವಿಜಯನಗರ(ಹೊಸಪೇಟೆ) : 2025ರ ಜನವರಿ 1 ರಿಂದ ಜೂನ್ 30 ರವರೆಗೆ ಜಿಲ್ಲೆಯ್ಲಲಿ ಸ್ವತ್ತು ಕಳುವಾದ...

ಬಾಗಳಿಯಲ್ಲಿ ಬಾವಿಗೆ ಬಿದ್ದು ಬಾಲಕ ಸಾವು
Homeಅಪರಾಧ

ಬಾವಿಗೆ ಬಿದ್ದು ಬಾಲಕ ಸಾವು

ಹರಪನಹಳ್ಳಿ : ತಾಲೂಕಿನ ಬಾಗಳಿ ಗ್ರಾಮದ ಐತಿಹಾಸಿಕ ಕಲ್ಲೇಶ್ವರ ದೇವಸ್ಥಾನ ವೀಕ್ಷಣೆಗೆ ಬಂದಿದ್ದ 4ನೇ ತರಗತಿಯ...

sandeep kanivihalli
Homeಅಪರಾಧ

ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಹರಪನಹಳ್ಳಿ : ತಾಲೂಕಿನ ಕಣಿವಿಹಳ್ಳಿಯಲ್ಲಿ ನೀರು ತರಲು ಹೋಗಿದ್ದ ಬಾಲಕ ಸಂದೀಪ್ (15) ಕೊಳವೆಬಾವಿ ಬಳಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.