ದಾವಣಗೆರೆ : ಸಂಚಾರ ನಿಯಮಗಳ ಉಲ್ಲಂಘನೆ ಇ-ಚಲನ್ ದಂಡವನ್ನು ಪಾವತಿಸದೇ ಇರುವ ಪ್ರಕರಣಗಳಿಗೆ ಶೇ.50 ರಷ್ಟು ರಿಯಾಯತಿ ಪಾವತಿಸಿ, ಉಲ್ಲಂಘನೆ ಮುಕ್ತವಾಗಲು ಡಿ.12 ಶುಕ್ರವಾರ ಕೊನೆಯ ದಿನ.
ಘನ ರಾಜ್ಯ ಸರ್ಕಾರವು, ಸರ್ಕಾರದ ಆದೇಶ ಸಂಖ್ಯೆ: ಟಿಡಿ 27 ಟಿಡಿಓ 2023 ಬೆಂಗಳೂರು, ದಿನಾಂಕ; 21.08.2025 ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಈ-ಚಲನ್ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ರಿಯಾಯಿತಿಯನ್ನು ನೀಡಿ ಆದೇಶಿಸಿರುತ್ತದೆ.
ಸಂಚಾರ ನಿಯಮಗಳ ಉಲ್ಲಂಘನೆಯ ಇ-ಚಲನ್ ದಂಡವನ್ನು ಪಾವತಿಸಲು ಶೇ 50% ರಷ್ಟು ಈ ಆದೇಶವು ದಿನಾಂಕ: 23.08.2025 ರಿಂದ 12.09.2025 ರವರೆಗೆ ಜಾರಿಯಲ್ಲಿರುತ್ತದೆ. ಸಂಚಾರ ನಿಯಮಗಳ ಉಲ್ಲಂಘನೆಯ ಇ-ಚಲನ್ ದಂಡವನ್ನು ಪಾವತಿಸದೇ ಇರುವ ಪ್ರಕರಣಗಳಿಗೆ ಶೇ.50 ರಷ್ಟು ರಿಯಾಯತಿ ದಂಡವನ್ನು ಪಾವತಿಸಲು ನಾಳೆ ದಿನಾಂಕ 12-12-2025 ರಂದು ಕೊನೆ ದಿನವಾಗಿದ್ದು ಕೂಡಲೇ ಈ ಕೆಳಕಂಡ ಸ್ಥಳಗಳಲ್ಲಿ ದಂಡವನ್ನು ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.
ಬಾಕಿ ಇರುವ ಇ-ಚಲನ್ ದಂಡ ಪಾವತಿಸುವ ಸ್ಥಳಗಳು :
- ಪೋಸ್ಟ್ ಆಫೀಸ್ ಗಳಿಗೆ ಬೇಟಿ ನೀಡಿ ಪಾವತಿಸಬಹುದಾಗಿದೆ.
- ದಾವಣಗೆರೆ ನಗರದ ಉತ್ತರ ಸಂಚಾರಿ ಪೊಲೀಸ್ ಠಾಣೆ, ದಕ್ಷಿಣ ಸಂಚಾರ ಠಾಣೆ, ಆರ್.ಟಿ.ಓ ಕಛೇರಿ ವೃತ್ತ, ಎಸಿ ಕಛೇರಿ ವೃತ್ತ, ಅರುಣ ವೃತ್ತ ( ಸಂಚಾರ ವೃತ್ತ ಕಛೇರಿ), ಸಂಗೊಳ್ಳಿ ರಾಯಣ್ಣ ವೃತ್ತ, ನಿಜಲಿಂಗಪ್ಪ ಬಡಾವಣೆ ಬಳಿ ಕರ್ನಲ್ ರವೀಂದ್ರನಾಥ ವೃತ್ತ (ಟವರ್ ಕ್ಲಾಕ್ ವೃತ್ತ), ಡೆಂಟಲ್ ಕಾಲೇಜ್ ರಸ್ತೆ, ಬಾಡಾ ಕ್ರಾಸ್, ರಾಮ & ಕೋ ವೃತ್ತ, ಹೈಸ್ಕೂಲ್ ಮೈದಾನ ಗಳಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳ ಬಳಿ ಬೇಟಿ ನೀಡಿ ಇ-ಚಲನ್ ದಂಡವನ್ನು ಪಾವತಿಸಬಹುದಾಗಿದೆ.
- ಮೇಲ್ಕಂಡ ಸ್ಥಳಗಳಲ್ಲಿ ಅಲ್ಲದೇ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆ ಬೇಟಿ ನೀಡಿ ತಮ್ಮ ವಾಹನಗಳ ಮೇಲೆ ಇರುವ ಇ-ಚಲನ್ ಬಾಕಿ ಇರುವ ದಂಡವನ್ನು ಪರಿಶೀಲಿಸಿ ಪಾವತಿಸಬಹುದಾಗಿದೆ
Leave a comment