ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಕೋಲಶಾಂತೇಶ್ವರ ಸ್ವಾಮಿ ಕಾರ್ತಿಕೋತ್ಸವ ವಿಜೃಂಭಣೆಯಿಂದ ನೆರವೇರಿತು.
ಸೋಮವಾರ ಸಂಜೆ ಸಂಸ್ಥಾನದ ಶಾಂತಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕೋಲಶಾಂತೇಶ್ವರ ಸ್ವಾಮಿ ಅಲಂಕೃತ ಪಲ್ಲಕ್ಕಿಯಲ್ಲಿ ಕೂರಿಸಿ, ಆರಂಭವಾದ ಮೆರವಣಿಗೆಯು ಬಸಪ್ಪನ ಕಟ್ಟೆ, ಹರಿಹರೇಶ್ವರ ಸ್ವಾಮಿ, ಅರಸೀಕೆರೆ ತಿಮ್ಮಲಾಪುರದ ಬಸವೇಶ್ವರ ಸ್ವಾಮಿ ಹಾಗೂ ಊರ ಹೊರಗಿನ ಮಠಕ್ಕೆ ತೆರಳಿ, ಮಣ್ಣಿನ ಹಣತೆ ಬೆಳಗಲಾಯಿತು. ಬಳಿಕ ಗ್ರಾಮಸ್ಥರೆಲ್ಲರೂ ದೀಪ ಹಚ್ಚುವ ಮೂಲಕ ಕಾರ್ತಿಕೋತ್ಸವ ಆಚರಿಸಿದರು. ಸಂಜೆ ಸ್ವಾಮಿಗೆ ಮಂಡಕ್ಕಿ, ಕೊಬ್ಬರಿ, ಬೆಲ್ಲ, ಉತ್ತುತ್ತಿ ನೈವೇದ್ಯವನ್ನು ಸ್ವಾಮಿಗೆ ಸಲ್ಲಿಸಿದರು.
ಸೋಮವಾರ ಬೆಳಗ್ಗೆಯಿಂದಲೇ ಜನರು ಸ್ವಾಮಿಯ ದೇವಸ್ಥಾನಕ್ಕೆ ಬಂದು ಹಣ್ಣು, ಕಾಯಿ, ಹೂ, ಹೋಳಿಗೆ ಎಡೆಯನ್ನು ಅರ್ಪಿಸಿದರು. ರಾತ್ರಿ ಜರುಗಿದ ಮೆರವಣಿಗೆಯಲ್ಲಿ ಸಮ್ಮಾಳ, ನಂದಿಕೋಲು ಸೇರಿ ವಾದ್ಯಗೊಷ್ಟಿಗಳು ಗಮನ ಸೆಳೆದವು. ವೆಂಕಟೇಶ್ ಶೆಟ್ರು ಕುಟುಂಬದವರು ಲಕ್ಷ ಬತ್ತಿಗಳ ದೀಪಗಳನ್ನು ಬೆಳಗಿದ್ದು ಗಮನ ಸೆಳೆಯಿತು. ಮಾಜಿ ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ವೈ.ಡಿ. ಸುಶೀಲಮ್ಮ ದೇವೇಂದ್ರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ವಿಶಾಲಕ್ಷಮ್ಮ, ಮುಖಂಡರಾದ ಪ್ರಶಾಂತ್ ಪಾಟೀಲ್, ಲಕ್ಷ್ಮೀದೇವಿ ಅಣ್ಣಪ್ಪ, ಇಟಿಗಿಹಳ್ಳಿ ಬಸವರಾಜಪ್ಪ, ವೈ.ಕೊಟ್ರೇಶ್, ಅಡ್ಡಿ ಚನ್ನವೀರಪ್ಪ, ವೆಂಕಟೇಶ್ ಶೆಟ್ರು, ಎ.ಹೆಚ್.ಕೊಟ್ರೇಶ್,ಎ. ಹೆಚ್. ವಿಶ್ವನಾಥ್, ಉಜ್ಜಿನಿ ಸಾಂತಪ್ಪ, ವೈ. ರೇಖಾ ಕೊಟ್ರೇಶ್, ಎ.ಬಿ.ಬಸವನಗೌಡ, ತೋಸಿಖಾನಿ ಈರಣ್ಣ, ಗುರುವಪ್ಪ, ಯೋಗೀಶ್, ಶಾಂತ ಪಾಟೀಲ್, ವೈಶಾಕ್ ಪಾಟೀಲ್, ವೃಷಬೇಂದ್ರಯ್ಯ, ಎ. ಹೆಚ್. ಪಂಪಣ್ಣ, ಎ.ಹೆಚ್. ನಾಗರಾಜಪ್ಪ ಇದ್ದರು.
Leave a comment