Home ಸುದ್ದಿಗಳು  ಅರಸೀಕೆರೆ : ಕೋಲಶಾಂತೇಶ್ವರ ಕಾರ್ತಿಕ ಸಂಭ್ರಮ
ಸುದ್ದಿಗಳು

 ಅರಸೀಕೆರೆ : ಕೋಲಶಾಂತೇಶ್ವರ ಕಾರ್ತಿಕ ಸಂಭ್ರಮ

Share
 ಅರಸೀಕೆರೆ : ಕೋಲಶಾಂತೇಶ್ವರ ಕಾರ್ತಿಕ ಸಂಭ್ರಮ
Share

ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಕೋಲಶಾಂತೇಶ್ವರ ಸ್ವಾಮಿ ಕಾರ್ತಿಕೋತ್ಸವ ವಿಜೃಂಭಣೆಯಿಂದ ನೆರವೇರಿತು.

ಸೋಮವಾರ ಸಂಜೆ  ಸಂಸ್ಥಾನದ ಶಾಂತಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕೋಲಶಾಂತೇಶ್ವರ ಸ್ವಾಮಿ ಅಲಂಕೃತ ಪಲ್ಲಕ್ಕಿಯಲ್ಲಿ ಕೂರಿಸಿ, ಆರಂಭವಾದ ಮೆರವಣಿಗೆಯು  ಬಸಪ್ಪನ ಕಟ್ಟೆ, ಹರಿಹರೇಶ್ವರ ಸ್ವಾಮಿ, ಅರಸೀಕೆರೆ ತಿಮ್ಮಲಾಪುರದ ಬಸವೇಶ್ವರ ಸ್ವಾಮಿ ಹಾಗೂ ಊರ ಹೊರಗಿನ ಮಠಕ್ಕೆ ತೆರಳಿ, ಮಣ್ಣಿನ ಹಣತೆ ಬೆಳಗಲಾಯಿತು. ಬಳಿಕ ಗ್ರಾಮಸ್ಥರೆಲ್ಲರೂ ದೀಪ ಹಚ್ಚುವ ಮೂಲಕ ಕಾರ್ತಿಕೋತ್ಸವ ಆಚರಿಸಿದರು. ಸಂಜೆ ಸ್ವಾಮಿಗೆ ಮಂಡಕ್ಕಿ, ಕೊಬ್ಬರಿ, ಬೆಲ್ಲ, ಉತ್ತುತ್ತಿ ನೈವೇದ್ಯವನ್ನು ಸ್ವಾಮಿಗೆ ಸಲ್ಲಿಸಿದರು.

ಸೋಮವಾರ ಬೆಳಗ್ಗೆಯಿಂದಲೇ ಜನರು ಸ್ವಾಮಿಯ ದೇವಸ್ಥಾನಕ್ಕೆ ಬಂದು ಹಣ್ಣು, ಕಾಯಿ, ಹೂ, ಹೋಳಿಗೆ ಎಡೆಯನ್ನು ಅರ್ಪಿಸಿದರು. ರಾತ್ರಿ ಜರುಗಿದ ಮೆರವಣಿಗೆಯಲ್ಲಿ ಸಮ್ಮಾಳ, ನಂದಿಕೋಲು ಸೇರಿ ವಾದ್ಯಗೊಷ್ಟಿಗಳು ಗಮನ ಸೆಳೆದವು. ವೆಂಕಟೇಶ್ ಶೆಟ್ರು ಕುಟುಂಬದವರು ಲಕ್ಷ ಬತ್ತಿಗಳ ದೀಪಗಳನ್ನು ಬೆಳಗಿದ್ದು ಗಮನ ಸೆಳೆಯಿತು. ಮಾಜಿ ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ವೈ.ಡಿ. ಸುಶೀಲಮ್ಮ ದೇವೇಂದ್ರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ವಿಶಾಲಕ್ಷಮ್ಮ, ಮುಖಂಡರಾದ ಪ್ರಶಾಂತ್ ಪಾಟೀಲ್, ಲಕ್ಷ್ಮೀದೇವಿ ಅಣ್ಣಪ್ಪ, ಇಟಿಗಿಹಳ್ಳಿ ಬಸವರಾಜಪ್ಪ, ವೈ.ಕೊಟ್ರೇಶ್, ಅಡ್ಡಿ ಚನ್ನವೀರಪ್ಪ, ವೆಂಕಟೇಶ್ ಶೆಟ್ರು, ಎ.ಹೆಚ್.ಕೊಟ್ರೇಶ್,ಎ. ಹೆಚ್. ವಿಶ್ವನಾಥ್, ಉಜ್ಜಿನಿ ಸಾಂತಪ್ಪ, ವೈ. ರೇಖಾ ಕೊಟ್ರೇಶ್, ಎ.ಬಿ.ಬಸವನಗೌಡ, ತೋಸಿಖಾನಿ ಈರಣ್ಣ, ಗುರುವಪ್ಪ, ಯೋಗೀಶ್, ಶಾಂತ ಪಾಟೀಲ್, ವೈಶಾಕ್ ಪಾಟೀಲ್, ವೃಷಬೇಂದ್ರಯ್ಯ, ಎ. ಹೆಚ್. ಪಂಪಣ್ಣ, ಎ.ಹೆಚ್. ನಾಗರಾಜಪ್ಪ  ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.