Home ಅಪರಾಧ ಖೋಟಾ ನೋಟು : 6 ಜನ ಆರೋಪಿಗಳ ಬಂಧನ
ಅಪರಾಧ

ಖೋಟಾ ನೋಟು : 6 ಜನ ಆರೋಪಿಗಳ ಬಂಧನ

Share
ಖೋಟಾ ನೋಟು : 6 ಜನ ಆರೋಪಿಗಳ ಬಂಧನ
Share

ಹರಪನಹಳ್ಳಿ : ಜಾತ್ರೆಗೆ ಬಂದಿದ್ದ ಖದೀಮರು ಖೋಟಾ ನೋಟು ಚಲಾಯಿಸಿ, ಪೊಲೀಸರ ಕೈಗೆ ಸಿಕ್ಕಿಬಿದಿದ್ದಾರೆ, ಆರೋಪಿಗಳು ಈ ಕೃತ್ಯಕ್ಕೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಳಸಿಕೊಂಡಿರುವುದು ಪೊಲೀಸರ ತನಿಖೆಗೆ ಹೊರಬಂದಿದೆ. ಯಾರೆಲ್ಲಾ ಪ್ರಕರಣದಲ್ಲಿದ್ದಾರೆ ಎನ್ನುವ ವಿವರವಾದ ಮಾಹಿತಿ ಇಲ್ಲಿದೆ ಓದಿ…

ತಾಲ್ಲೂಕಿನ ಅರಸೀಕೆರೆ ದಂಡಿನ ದುರುಗಮ್ಮ ಜಾತ್ರೆಯಲ್ಲಿ ಖೋಟಾ ನೋಟ್ ಚಲಾವಣೆ ಮಾಡುತ್ತಿದ್ದ ಅರಸೀಕೆರೆ ಗ್ರಾಮದ ಕೆ.ಮಹಮ್ಮದ್ (18), ಉಚ್ಚಂಗಿದುರ್ಗ ಮೊಹಮ್ಮದ್ ಅಖಿಲ್ (18), ಅರಸೀಕೆರೆ ನರೇಂದ್ರ ಪ್ರಸಾದ ಎನ್.ಪಿ. (19), ಕೂಡ್ಲಿಗಿ ಬಿ.ಬಾಬು (36), ಮೊಳಕಾಲ್ಮೂರು ಟಿ.ಕುಮಾರಸ್ವಾಮಿ (43) ಹಾಗೂ ಓರ್ವ ಬಾಲಕ ಸೇರಿ ಒಟ್ಟು ಆರು ಜನ ಬಂಧಿತರು. ಅವರ ಬಳಿ ಇದ್ದ 5 ಮೊಬೈಲ್ ಫೋನ್, ರೂ.500 ಮುಖಬೆಲೆಯ 80 ಖೋಟಾ ನೋಟು, ಗೂಡ್ಸ್ ವಾಹನ, ಎರಡು ಮೋಟಾರ್ ಸೈಕಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾತ್ರೆಯಲ್ಲಿದ್ದ ಶ್ರೀಮಾತ ಅಮ್ಯೂಸ್ ಮೆಂಟ್ ಪಾರ್ಕ್ ಮಾಲೀಕ ಎಚ್.ಕೆ.ವೀರಭದ್ರಪ್ಪ ಅವರು ಆಟಿಕೆ ನಡೆಸುವ ಜಾಗದಲ್ಲಿ ಯಾರೊ ಇಬ್ಬರು ವ್ಯಕ್ತಿಗಳು ರೂ.500 ಮುಖಬೆಲೆಯ ಎರಡು ಖೊಟಾ ನೋಟ್ ಚಲಾವಣೆ ಮಾಡುತ್ತಿದ್ದಾರೆ ಎನ್ನುವ ದೂರು ಆಧರಿಸಿ, ತಂಡಗಳನ್ನು ರಚಿಸಿಕೊಂಡ ಪೊಲೀಸರು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ತಂಡದಲ್ಲಿ ಡಿವೈಎಸ್ಪಿ ಸಂತೋಷ್ ಚೌವ್ಹಾಣ್, ಸಿಪಿಐ ಮಹಾಂತೇಶ ಸಜ್ಜನ್, ವಿಕಾಸ ಲಮಾಣಿ, ಪಿಎಸ್ಐ ವಿಜಯಕೃಷ್ಣ, ಕಿರಣ್ ಕುಮಾರ, ಸಿಬ್ಬಂದಿ ಆನಂದ, ರವಿದಾದಾಪುರ, ಮಾಲತೇಶ, ಸಿದ್ದಿ ಮುಬಾರಕ್, ಯರಿಸ್ವಾಮಿ, ವಸಂತಕುಮಾರ, ದಾದಾಪೀರ, ಹಸನ್ ಸಾಬ್, ಕೆ.ಗುರುರಾಜ, ಹರೀಶ್ ದೇವರಹಟ್ಟಿ, ಮತ್ತಿಹಳ್ಳಿ ಕೊಟ್ರೇಶ, ಗುರ್ಯನಾಯ್ಕ, ರವಿನಾಯ್ಕ, ಅಜ್ಜಪ್ಪ, ಸಿಡಿಆರ್ ವಿಭಾಗದ ಇ.ಕರಿಬಸಪ್ಪ, ಕುಮಾರನಾಯ್ಕ, ಜೀಪ್ ಚಾಲಕ ನಾಗರಾಜನಾಯ್ಕ ಒಳಗೊಂಡಿದ್ದ ತಂಡದ ಕಾರ್ಯಕ್ಕೆ ಎಸ್ಪಿ ಜಾಹ್ನವಿ ಎಸ್, ಹೆಚ್ಚುವರಿ ಎಸ್ಪಿ ಜಿ.ಮಂಜುನಾಥ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles
Homeಅಪರಾಧ

ಹರಪನಹಳ್ಳಿ: ನಕಲಿ ದಾಖಲೆ ಸೃಷ್ಟಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12...

Homeಅಪರಾಧ

ಪೊಲೀಸ್ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ : 4.57ಕೋಟಿ ಸ್ವತ್ತು ವಶ

ವಿಜಯನಗರ(ಹೊಸಪೇಟೆ) : 2025ರ ಜನವರಿ 1 ರಿಂದ ಜೂನ್ 30 ರವರೆಗೆ ಜಿಲ್ಲೆಯ್ಲಲಿ ಸ್ವತ್ತು ಕಳುವಾದ...

ಬಾಗಳಿಯಲ್ಲಿ ಬಾವಿಗೆ ಬಿದ್ದು ಬಾಲಕ ಸಾವು
Homeಅಪರಾಧ

ಬಾವಿಗೆ ಬಿದ್ದು ಬಾಲಕ ಸಾವು

ಹರಪನಹಳ್ಳಿ : ತಾಲೂಕಿನ ಬಾಗಳಿ ಗ್ರಾಮದ ಐತಿಹಾಸಿಕ ಕಲ್ಲೇಶ್ವರ ದೇವಸ್ಥಾನ ವೀಕ್ಷಣೆಗೆ ಬಂದಿದ್ದ 4ನೇ ತರಗತಿಯ...

sandeep kanivihalli
Homeಅಪರಾಧ

ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಹರಪನಹಳ್ಳಿ : ತಾಲೂಕಿನ ಕಣಿವಿಹಳ್ಳಿಯಲ್ಲಿ ನೀರು ತರಲು ಹೋಗಿದ್ದ ಬಾಲಕ ಸಂದೀಪ್ (15) ಕೊಳವೆಬಾವಿ ಬಳಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.