Home ಕೃಷಿ ಹರಪನಹಳ್ಳಿ ಸಾಧಕ ರೈತರಿಗೆ ‘ಸಮಗ್ರ ಕೃಷಿ ಪ್ರಶಸ್ತಿ’ ಪ್ರಧಾನ
ಕೃಷಿ

ಹರಪನಹಳ್ಳಿ ಸಾಧಕ ರೈತರಿಗೆ ‘ಸಮಗ್ರ ಕೃಷಿ ಪ್ರಶಸ್ತಿ’ ಪ್ರಧಾನ

Share
ಹರಪನಹಳ್ಳಿ ಸಾಧಕ ರೈತರಿಗೆ ‘ಸಮಗ್ರ ಕೃಷಿ ಪ್ರಶಸ್ತಿ’ ಪ್ರಧಾನ
Share

ಹರಪನಹಳ್ಳಿ : ಸಾವಯವ ಗೊಬ್ಬರ ಬಳಸಿ ಆಹಾರ ಧಾನ್ಯ ಬೆಳೆ ಬೆಳೆಯಿರಿ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅಬಿಪ್ರಾಯಪಟ್ಟರು.

ನಗರದ ತಾಲ್ಲೂಕು ಪಂಚಾಯ್ತಿ ರಾಜೀವಗಾಂಧಿ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿ ಸಮಾಜ ಸಹಯೋಗದಲ್ಲಿ ಮಂಗಳವಾರ  ಆಯೋಜಿಸಿದ್ದ ರೈತ ದಿನಾಚರಣೆ ಮತ್ತು ಪ್ರಧಾನಮಂತ್ರಿ ಕಿರಿ ಆಹಾರ ಉದ್ಯಮಿಗಳ ನಿಯಮ ಶುದ್ದಗೊಳಿಸುವ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು. ಊಟದ ಜೋಳ, ಸಿರಿದಾನ್ಯದ ಬೆಳಗಳಿಗೆ ಹೆಚ್ಚು ಆದ್ಯತೆ ನೀಡಿ. ರಾಸಾಯನಿಕ ಗೊಬ್ಬರ ಬಳಸದೇ, ಕೊಟ್ಟಿಗೆ ಗೊಬ್ಬರವನ್ನೆ ಬಳಸಿ ಎಂದರು.

ಜಿಲ್ಲಾ ಸಂಪನ್ಮೂಲ ವ್ಯಕ್ತಿ ಎ.ಕೆ.ರುದ್ರಯ್ಯ, ಎಂ.ಲಕ್ಷ್ಮಣಶೆಟ್ಟಿ ಉಪನ್ಯಾಸ ನೀಡಿದರು. ಸ್ಪಿಂಕಲರ್ ಪೈಪುಗಳು, ಕೃಷಿ ಯಂತ್ರೋಪಕರಣ, ತಾಡಪಾಲುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಸಾಧಕ ರೈತರಾದ ಷಣ್ಮುಖಪ್ಪ ಅವರಿಗೆ ಸಮಗ್ರ ಕೃಷಿ ಪ್ರಶಸ್ತಿ, ಮೈದೂರು ಬಸಮ್ಮ ತೋಟಗಾರಿಕ  ಬೆಳೆ ವೈವಿದ್ಯಕರಣ ಪ್ರಶಸ್ತಿ, ತಾಲ್ಲೂಕು ಮಟ್ಟದ ಪ್ರಶಸ್ತಿಗೆ ಭಾಜನರಾದ ಸಿ.ಬಸವರಾಜ್ ಕಡಬಗೆರೆ, ಸಂತೋಷ ಹೊಸಕೋಟೆ, ತೆಲಿಗಿ ಭೀಮಪ್ಪ, ಅಂಜನಗೌಡ ಕಲ್ಗುಡಿ, ಹನುಮಂತಪ್ಪ ಅವರನ್ನು ಸನ್ಮಾನಿಸಲಾಯಿತು. ಸಹಾಯಕ ನಿರ್ದೇಶಕ ವಿ.ಸಿ.ಉಮೇಶ,  ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ, ತಾಲ್ಲೂಕು ಅಧ್ಯಕ್ಷ ಮಡಿವಾಳಪ್ಪ, ಕೆಡಿಪಿ ಸದಸ್ಯ ಬಸವರಾಜಪ್ಪ, ಷಣ್ಮುಖಪ್ಪ, ಶಶಿನಾಯ್ಕ  ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಕೃಷಿ

ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿ...

Homeಕೃಷಿ

ಜಿಲ್ಲೆಯಲ್ಲಿ ಭೀಕರ ಬರಛಾಯೆ: ಬರ ಅಧ್ಯಯನಕ್ಕೆ ಅಖಾಡಕ್ಕಿಳಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ

ವಿಜಯನಗರ(ಹೊಸಪೇಟೆ) : ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ  ಜಿಲ್ಲೆಯಾದ್ಯಂತ ಬರ ಹಾಗೂ ಮಳೆ ಅಭಾವದ ಛಾಯೆ ಆವರಿಸಿದೆ....

Homeಕೃಷಿ

ತುಂಗಭದ್ರ ಜಲಾಶಯದ ನೀರು ಕೇವಲ ಕುಡಿಯಲು ಮಾತ್ರ  ರೈತರು ಪರ್ಯಾಯ ಬೆಳೆ ಆಶ್ರಯಿಸಿ : ಡಿಸಿ ಮನವಿ

ವಿಜಯನಗರ (ಹೊಸಪೇಟೆ) : ಮುಂಗಾರು ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಮಟ್ಟ ಕ್ಷೀಣಿಸುತ್ತಿದೆ ಜನ...

ಮೀನು ಗಾರಿಕೆ ಇಲಾಖೆ
Homeಕೃಷಿ

ಮೀನುಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026-27 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳಡಿ ಉಚಿತ ಮೀನುಗಾರಿಕೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.