ಬಿ 90 ಸೊಸೈಟಿ ನೂತನ ಕಟ್ಟಡ ಉದ್ಘಾಟನೆ
ಹರಪನಹಳ್ಳಿ : ನಗರದ ಹಳೇ ಬಸ್ ನಿಲ್ದಾಣ ಬಳಿ ರೂ.2.36 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಗೋದಾಮು ಮತ್ತು ವ್ಯಾಪಾರಿ ಮಳಿಗೆಗಳ ನೂತನ ಕಟ್ಟಡವನ್ನು ನಗರಾಭಿವೃದ್ದಿ ಮತ್ತು ನಗರ ಯೋಜನೆ ಇಲಾಖೆ ಸಚಿವ ಬೈರತಿ ಸುರೇಶ ಉದ್ಘಾಟಿಸಿದರು.
ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ದಾರುಕೇಶ್, ಮುಖಂಡ ಎಚ್.ಎಂ.ಮಲ್ಲಿಕಾರ್ಜುನ, ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಎಂ.ವಿ.ಕೃಷ್ಣಕಾಂತ, ಉಪಾಧ್ಯಕ್ಷ ಬಿ.ಉಮಾಮಹೇಶ್ವರಿ, ನಿರ್ದೇಶಕರಾದ ಉದ್ದಾರ ರಂಗಪ್ಪ, ಗಾಟಿನ ಬಸವರಾಜ, ಕೆ.ಮೆಹಬೂಬ ಭಾಷ, ಕಳ್ಳಿಬಾವಿ ಶಫಿವುಲ್ಲಾ, ಎಚ್.ದೇವೇಂದ್ರಪ್ಪ, ಗಿಡ್ಡಳ್ಳಿ ನಾಗರಾಜ್, ನಾಲ್ಬಂದಿ ನಿಸಾರ್, ಟಿ.ಎಚ್,ಎಂ. ಮಂಜುನಾಥ, ಜೋಗಿನ ಜಯಶ್ರೀ, ದಂಡಿನ ಹರೀಶ, ಎಚ್.ಅಂಜಿನಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಬಸವರಾಜ ಹಾಗೂ ಮುಖಂಡರಿದ್ದರು.
