ಹರಪನಹಳ್ಳಿ : ತಾಲ್ಲೂಕಿನ ನೀಲಗುಂದ ಗುಡ್ಡದ ಸಂಸ್ಥಾನ ಜಂಗಮಪೀಠದಲ್ಲಿ ಫೆ.14ರ ಶನಿವಾರ 40ನೇ ವರ್ಷದ ಸರಳ ಆದರ್ಶ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ.

ಸಾಮೂಹಿಕ ವಿವಾಹಕ್ಕೆ ಅರ್ಜಿ ಸಲ್ಲಿಸುವ ಆಸಕ್ತರು ವಧು ವರರ ಆಧಾರ ಕಾರ್ಡು, ಶಾಲಾ ದಾಖಲಾತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿವಾಸಿ ದೃಢೀಕರಣ ಹಾಗೂ 3 ಭಾವಚಿತ್ರ ಕೊಟ್ಟು ಹೆಸರುನೊಂದಾಯಿಸಬೇಕು. ವಧುವಿಗೆ 2 ಮಾಂಗಲ್ಯ, ಸೀರೆ, ರವಿಕೆ, ವರನಿಗೆ ಶರ್ಟ್, ದೋತರ, ಟವಾಲ್, ದಂಡಿ, ಬಾಸಿಂಗ ಕೊಡಲಾಗುವುದು. ಇದರ ಜೊತೆ ಸರಳ ಸಾಮೂಹಿಕ ವಿವಾಹ ಆದವರಿಗೆ ಸರ್ಕಾರ ಕೊಡುವ ರೂ. 50 ಸಾವಿರ ಹಣವನ್ನು ಸಂಬಂಧಪಟ್ಟ ಇಲಾಖೆಯಿಂದ ಕೊಡಿಸುವ ವ್ಯವಸ್ಥೆ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗೆ 9980277582, 9886928747 ಸಂಪರ್ಕಿಸುವಂತೆ ಗುಡ್ಡದ ಸಂಸ್ಥಾನದ ಚನ್ನಬಸವ ಶಿವಯೋಗಿ ಸ್ವಾಮೀಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a comment