Home ವಚನಾಕಾರರ ಸಾಹಿತ್ಯ ಸರ್ವಕಾಲಕ್ಕೂ ಪ್ರಸ್ತುತ
Homeಸುದ್ದಿಗಳು

ವಚನಾಕಾರರ ಸಾಹಿತ್ಯ ಸರ್ವಕಾಲಕ್ಕೂ ಪ್ರಸ್ತುತ

Share
ವಚನಾಕಾರರ ಸಾಹಿತ್ಯ ಸರ್ವಕಾಲಕ್ಕೂ ಪ್ರಸ್ತುತ
Share

ಹರಪನಹಳ್ಳಿ : ಹನ್ನೆರಡನೆ ಶತಮಾನದ ವಚನಕಾರ ಬಸವಣ್ಣ ರಚಿಸಿದ ವಚನಗಳು ಶಿಷ್ಟ ಸಾಹಿತ್ಯಕ್ಕೆ ಒತ್ತುಕೊಟ್ಟರೆ, ಅಂಬಿಗರ ಚೌಡಯ್ಯ ಅವರ ವಚನ ಸಾಹಿತ್ಯ ಗಾಂಭೀರ್ಯಕ್ಕೆ ಆಧ್ಯತೆ ನೀಡಿದೆ. ವಚನಗಳಲ್ಲಿರುವ ಸಂದೇಶಗಳು ಸರ್ವ ಕಾಲಕ್ಕೂ ಪ್ರಸ್ತುತವಾಗುತ್ತವೆ ಎಂದು ಹಿರಿಯ ವಕೀಲ ಕಣಿವಿಹಳ್ಳಿ ಮಂಜುನಾಥ ತಿಳಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಬುಧವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನ ಜಯಂತಿಯಲ್ಲಿ ಅವರು ಉಪನ್ಯಾಸ ನೀಡಿದರು. ಶರಣರು ವಚನಗಳ ಚಾಟಿ ಏಟಿನ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದ್ದಾರೆ. ನೂರಾರು ಶರಣರ, ಸಾವಿರಾರು ವಚನಗಳು ಸತ್ಯವನ್ನೆ ನುಡಿದಿವೆ. ನಿಷ್ಠುರ ಮಾತಿನ ಚಾಟಿಯು ಜನಮಾನಸದಲ್ಲಿ ಉಳಿಯುತ್ತದೆ ಎನ್ನುವುದಕ್ಕೆ ವಚನಗಳೇ ಸಾಕ್ಷಿಯಾಗಿವೆ ಎಂದರು.

ರೆಡ್ಡಿ ಸಮಾಜದ ತಾಲ್ಲೂಕು ಅಧ್ಯಕ್ಷ ಗಿರಿರಾಜ ರೆಡ್ಡಿ ಮಾತನಾಡಿ. ವಸ್ತುನಿಷ್ಠ ಯೋಚನೆಯಿಂದ ವಿಜ್ಞಾನಿಯಾದ, ಭಾವನಿಷ್ಟ ಯೋಚನೆಯಿಂದ ಕವಿಯಾದ, ಇವೆರಡನ್ನು ಮೀರಿದವರು ಸಮಾಜ ಸುಧಾರಣೆ ಮಾಡಿ ತಮ್ಮದೇ ಚಾಪು ಮೂಡಿಸಿದವರು.  ಅಂತಹ ಮಹನೀಯರ ಪೈಕಿ ವೇಮನ ಯೋಗಿ ಶರಣರು ದಾರ್ಶನಿಕರು ಎಂದು ಹೇಳಿದರು.

ಉದ್ಘಾಟಿಸಿ ತಹಶೀಲ್ದಾರ ಬಿ.ವಿ.ಗಿರೀಶ್‌ ಬಾಬು ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  ತಾಲ್ಲೂಕು ಪಂಚಾಯಿತಿ ಇಒ ವೈ.ಎಚ್.ಚಂದ್ರಶೇಖರ, ಗಂಗಾಧರ,  ಪವಾಡಿ ಬಸವರಾಜ್‌, ಜೆ.ಕೊಟ್ರೇಶ್‌, ಪವಾಡಿ ದೇವೇಂದ್ರಪ್ಪ, ಬಿ.ವೈ.ಹಾಲೇಶ್‌, ಕೋಟಿ ಭೀಮಪ್ಪ, ದೇವರಾಜ್‌, ಅರಸನಾಳು ಬಸವರಾಜ್‌, ಚಿಗಟೇರಿ ಸುರೇಶ, ಸಿಂಗ್ರಿಹಳ್ಳಿ ನಿಂಗಪ್ಪ ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಹರಪನಹಳ್ಳಿ : ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ 

ಪ್ರಜಾಸೇವ ಆಂದೋಲನ ಜನರ ಹೃದಯಕ್ಕೆ ಮುಟ್ಟುವಂತಿರಲಿ ಹರಪನಹಳ್ಳಿ :  ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ...

Homeಸುದ್ದಿಗಳು

ಬಾಲಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ 

ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ...

Homeಸುದ್ದಿಗಳು

ಜೆಡಿಎಸ್ ಅಧ್ಯಕ್ಷರಾಗಿ ವಿ. ಮಲ್ಕಪ್ಪ ಆಯ್ಕೆ

ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ...

Homeಸುದ್ದಿಗಳು

ಮಕ್ಕಳಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ನೀಡುವ ಹೊಣೆ ಎಲ್ಲರದ್ದು: ಪ್ರಾಂಶುಪಾಲ ಡಾ. ಎಂ. ಸುರೇಶ್

ಹರಪನಹಳ್ಳಿ : 'ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಹೊಣೆಯನ್ನು ಪ್ರತಿಯೊಬ್ಬರೂ ಹೊರಬೇಕು'...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.