ವಿಜಯನಗರ : ತಾಲೂಕಿನ ಹಳೇಮಲಪನಗುಡಿ ಗ್ರಾಮದ ನಿವಾಸಿ ಬಳಾಪುರ ನಾಗರಾಜ ತಂದೆ ಲೇಟ್ ಬಳಾಪುರ ತಾಯಪ್ಪ ಸುಮಾರು 43 ವರ್ಷದ ವ್ಯಕ್ತಿ ಕಾಣೆಯಾಗಿದ್ದು, ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಬಳಾಪುರ ನಾಗರಾಜ ಸುಮಾರು 5.2 ಅಡಿ ಎತ್ತರ, ಗೋದಿ ಮೈಬಣ್ಣ, ದಪ್ಪ ಮೈಕಟ್ಟು, ದುಂಡು ಮುಖ, ಸ್ಮಾಟ್ ಮೀಸೆ, ತಲೆಯಲ್ಲಿ 2 ಇಂಚು ಕಪ್ಪು ಮತ್ತು ಬಿಳಿ ಗಡ್ಡ ಹೊಂದಿದ್ದು, ಕಲರ್ ಚೆಕ್ಸ್ ಲುಂಗಿ, ಲೈಟ್ ಪಿಂಕ್ ಕಲರ್ ಶರ್ಟ್ ಧರಿಸಿರುತ್ತಾನೆ. ವ್ಯಕ್ತಿಯು ಕನ್ನಡ ಭಾಷೆ ಮಾತನಾಡುವನು. ಈ ಮೇಲ್ಕಂಡ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಹೊಸಪೇಟೆಯ ಕಂಟ್ರೋಲ್ ರೂಂ ಸಂ: 9480805700, ಪಿಐ ಗ್ರಾಮೀಣ ಪೊಲೀಸ್ ಠಾಣೆ: 9480805746 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Leave a comment