ಬಳ್ಳಾರಿ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 110/11ಕೆವಿ ಸೌತ್ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಫ್-25 ಹಾಗೂ ಎಫ್-46 ಫೀಡರ್ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 05 ರಂದು ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಏರಿಯಾಗಳು:
ಆರ್.ಕೆ ಮಿಲ್ ರೋಡ್, ಬಾಪೂಜಿ ನಗರ, ಬಾಪೂಜಿ ನಗರ ಸರ್ಕಲ್, ರಾಣಿತೋಟ, ಕಣೆಕಲ್ ಬಸ್ ಸ್ಟಾö್ಯಂಡ್, ದೊಡ್ಡ ಹಾಗೂ ಸಣ್ಣ ಮಾರ್ಕೆಟ್, ಕಾರ್ಕಳ ತೋಟ, ಸಾಯಿ ಕಾಲೋನಿ, ಆರ್.ಆರ್. ಲೇಔಟ್, ಟೋಪಿಗಲ್ಲಿ, ಮರಿಸ್ವಾಮಿ ಮಠ, ಇಂಡಸ್ಟಿçಯಲ್ ಏರಿಯಾ ಹಂತ-1 ಸೇರಿದಂತೆ ಇನ್ನೂ ಮುಂತಾದ ಏರಿಯಾಗಳು ಹಾಗಾಗಿ ಸಾರ್ವಜನಿಕರು, ವಿದ್ಯುತ್ ಗ್ರಾಹಕರು ಜೆಸ್ಕಾಂ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a comment