ವಿಜಯನಗರ : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರ ಹಂಪಸಾಗರದಲ್ಲಿ ಲಭ್ಯವಿರುವ ಜಮೀನು ಮತ್ತು ಕಟ್ಟಡಗಳಲ್ಲಿ ರೇಷ್ಮೆ ಉದ್ಯಮಿ ಹಾಗೂ ರೇಷ್ಮೆ ಉತ್ಪಾದಕ ಸಂಸ್ಥೆ ಸಹಯೋಗದೊಂದಿಗೆ ಚಾಕಿ ಸಾಕಾಣಿಕಾ ಕೇಂದ್ರ ಸ್ಥಾಪಿಸಲು ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ.
ಅರ್ಹತೆಗಳು : ರೈತ ಉದ್ಯಮಿ ಕರ್ನಾಟಕ ನಿವಾಸಿಯಾಗಿರಬೇಕು. ನಿವಾಸ ದೃಢೀಕರಣ ಪತ್ರ ಹೊಂದಿರಬೇಕು. ರೈತ ಉತ್ಪಾದಕತೆ ಸಂಸ್ಥೆ ನೊಂದಣೆಯಾಗಿರಬೇಕು ಮತ್ತು ಸಂಸ್ಥೆ ಚಟುವಟಿಕೆ ನಡೆಸುತ್ತಿರಬೇಕು. ಕೇಂದ್ರಿಯ ರೇಷ್ಮೆ ಮಂಡಳಿಯಿಂದ ಚಾಕಿ ಸಾಕಾಣಿಕಾ ಕೇಂದ್ರ ನಡೆಸಲು ವೈಯಕ್ತಿಕ ಅಥವಾ ಸಂಸ್ಥೆಯಿಂದಾಗಿ ನೊಂದಣಿ ಮತ್ತು ಈ ರಹದಾರಿ ಹೊಂದಿರಬೇಕು. ಚಾಕಿ ಸಾಕಾಣಿಕೆ ಮಾಡುವ ಬಗ್ಗೆ, ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು.
ಸ್ಪರ್ಧಾತ್ಮಕ ಪದ್ಧತಿಯ ಮೂಲಕ ದರವನ್ನು ನಿಯಾಮಾನುಸಾರ ನಿಗಧಿಪಡಿಸಿ ಆಯ್ಕೆ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ರೇಷ್ಮೆ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
Leave a comment