Home ಹರಪನಹಳ್ಳಿ : ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ
Homeಸುದ್ದಿಗಳು

ಹರಪನಹಳ್ಳಿ : ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

Share
ಹರಪನಹಳ್ಳಿ, Harapanahalli, ಆಲಿ ಆದಿಷಾ ಈದ್ಗಾ ಮೈದಾನ, Ali Adisha Idgah Maidan, ಮುಸ್ಲಿಂ ಪ್ರಾರ್ಥನೆ, Muslim Prayers, ಹೊಸಪೇಟೆ ರಸ್ತೆ, Hosapete Road, ಕನ್ನಡ ಸುದ್ದಿ, Kannada News, ವಿಜಯನಗರ ಜಿಲ್ಲೆ, Vijayanagara District
Share

ಹರಪನಹಳ್ಳಿ : ನಗರ ಪ್ರದೇಶ ಒಳಗೊಂಡು ತಾಲ್ಲೂಕಿನ ವಿವಿಧೆಡೆ ಮುಸ್ಲೀಂರು ರಂಜಾನ್ ಉಪವಾಸ ಅಂತ್ಯಗೊಳಿಸಿ ಈದ್ ಉಲ್ ಫ್ರಿತ್ ಹಬ್ಬವನ್ನು ಸಡಗರ ಸಂಭ್ರಮದಿಂದ ಶನಿವಾರ ಆಚರಿಸಿದರು.

ನಗರದ  ಹಡಗಲಿ ರಸ್ತೆ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಆಲಿ ಸುನ್ನಿ ಜಮಾತ್, ತಬಲಿಕ್ ಜಮಾತ್ ಪಂಗದ ಸಾವಿರಾರು ಜನರು ಜಮಾಯಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮೌಲ್ವಿ ಸರ್ಖಾಜಿ ಫೀರಸಾಬ್ ಅವರು, ಈದ್ ಉಲ್ ಫ್ರಿತ್ ನಿಮಿತ್ತ ಪ್ರಾರ್ಥನೆ ಬೋಧಿಸಿದರು. ಅವರ ವಾಣಿ ಅನುಸರಿಸಿದ ಮುಸಲ್ಮಾನರು ಸಾಮೂಹಿಕ ಧ್ವನಿಗೂಡಿಸಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದರು.   ರಂಜಾನ್ ಹಬ್ಬದ ಮಹತ್ವ ಮತ್ತು ಅದರ ಆಚರಣೆಯ ಶಿಸ್ತಿನ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮೈದಾನದಲ್ಲಿ ಹಲವು ಸಂಘಟನೆಗಳ ಪದಾಧಿಕಾರಿಗಳು ಕುಡಿಯುವ ನೀರು, ತಂಪು ಪಾನೀಯ, ಶರಬತ್ ಉಚಿತವಾಗಿ ವಿತರಿಸಿದರು.

ಹಿರಿಯ ಮುಖಂಡರಾದ ಸಿ.ಜಾವಿದ್, ಬೇಲ್ದಾರ ಭಾಷಸಾಬ್, ಪಿ.ಮೆಹಬೂಬ್ ಸಾಬ್, ಎಸ್.ಕೆ.ಶಮಿವುಲ್ಲಾ, ಹೊಂಬಳಗಟ್ಟಿ ಮಕರಬ್ಬಿ ಶರೀಫ್, ಸಿರಾಜುದ್ದಿನ್, ಮುಜಿಬರ್ ರೆಹಮಾನ್, ಎಂ.ದಾದಾಪೀರ, ಜೆ.ಜಬಿವುಲ್ಲಾ, ಜಾಕೀರ ಹುಸೇನ್, ಚಮನ್ ಸಾಬ್, ಹೈದರಅಲಿ, ಮೌಲನಾ ಸಾಬ್ ಇತರರಿದ್ದರು.

ಹೊಂಬಳಗಟ್ಟಿಯಲ್ಲಿ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಷರೀಫ್ ಮಕರಬ್ಬಿ, ಮಹಬೂಬ್ ಸಾಹೇಬ್, ಮುತವಲ್ಲಿ ಜಮಾತ್, ಉಪಾಧ್ಯಕ್ಷ  ಯಹ್ಯಾ, ಎಂ ಅಬ್ದುಲ್ಲಾ , ಫಜಲು ಸಾಹೇಬ್, ಗನಿ ಸಾಹೇಬ್, ಸಲೀಂ ಇದ್ದರು. ನಂದಿಬೇವೂರಿನಲ್ಲಿ ಜರುಗಿದ ಮೆರವಣಿಗೆಯಲ್ಲಿ ಮುಖಂಡರಾದ ಬುಡೇನ್ ಸಾಬ್, ಇಮಾಮ್ ಸಾಬ್, ಬಡೇ ಸಾಬ್, ನಾಲಬಂದಿ ಶಫಿಸಾಬ್ ಭಾಗವಹಿಸಿದ್ದರು. ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗ, ರಾಮನಗರ, ಯು.ಕಲ್ಲಳ್ಳಿ, ಹನುಮನಹಳ್ಳಿ ಹಾಗೂ ಮಾದಿಹಳ್ಳಿ ಗಳಲ್ಲಿ ಪ್ರಾರ್ಥನೆ ಜರುಗಿತು. ಮೌಲ್ವಿ  ಮೌಲಾನ್ ಮಹಮ್ಮದ್ ಅದಿಲ್, ಜಾಮೀಯ ಮಸೀದಿ ಅಧ್ಯಕ್ಷ ಬಿ.ಅಬೀಬ್ ಸಾಹೇಬ್, ಕಾರ್ಯದರ್ಶಿ ಖಾಜಿ ಮಹಮ್ಮದ್, ಮುಖಂಡರಾದ ಅಬ್ದುಲ್ ಸಾಹೇಬ್, ಅದಾಮ್ ಸಾಹೇಬ್, ಐ.ಸಲಾಂ ಸಾಹೇಬ್, ಎಂ.ಹಸೇನ್ ಸಾಹೇಬ್, ಎ.ಮಹಾಬ್ದುಲ್ ಸಾಹೇಬ್, ಬಿ.ಸಲಾಂ ಸಾಹೇಬ್ ಇದ್ದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.