Home ಕೃಷಿ ಹರಪನಹಳ್ಳಿ: ಎಸ್‌ಯುಜೆಎಂ ಕಾಲೇಜು ಆವರಣದಲ್ಲಿ ಪರಿಸರ ದಿನ
ಕೃಷಿಸುದ್ದಿಗಳು

ಹರಪನಹಳ್ಳಿ: ಎಸ್‌ಯುಜೆಎಂ ಕಾಲೇಜು ಆವರಣದಲ್ಲಿ ಪರಿಸರ ದಿನ

Share
Share

ಹರಪನಹಳ್ಳಿ :  ಇಲ್ಲಿನ ಜೆಸಿಐ ಅಲ್ಯುಮ್ನಿ ಕ್ಲಬ್, ಸ್ಫೂರ್ತಿ ಜೆಸಿಸ್, ವಸುದೈವ ಕುಟುಂಬಕಂ ಸಂಸ್ಥೆ ಹಾಗೂ ಎಸ್‌ಯುಜೆಎಂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜೂನ್ 4 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾಲೇಜಿನ ಹಸಿರು ಆವರಣದಲ್ಲಿ 40ಕ್ಕೂ ಹೆಚ್ಚು ವಿವಿಧ ತಳಿಯ ಸಸಿಗಳನ್ನು ನೆಡುವ ಮೂಲಕ ಪ್ರಕೃತಿ ಸಂರಕ್ಷಣೆಯ ಜಾಗೃತಿ ಮೂಡಿಸಲಾಯಿತು.

ಶಿವಕೃಪ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಹರ್ಷ ಅವರು ಸಸಿಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ಪರಿಸರ ಎಂದರೆ ಕೇವಲ ನಮ್ಮ ಸುತ್ತಲಿನ ಗಿಡ-ಮರಗಳಷ್ಟೇ ಅಲ್ಲ; ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ನಮ್ಮ ಒಟ್ಟಾರೆ ಜೀವನಶೈಲಿ ಮತ್ತು ಸ್ವಚ್ಛತೆಯೂ ಅದರ ಭಾಗವಾಗಿದೆ. ಸಮಾಜದಲ್ಲಿ ದೊಡ್ಡ ಬದಲಾವಣೆ ಅಪೇಕ್ಷಿಸುವ ಮುನ್ನ, ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಮಟ್ಟದಲ್ಲಿ ಪರಿಸರ ಪ್ರೇಮವನ್ನು ರೂಢಿಸಿಕೊಳ್ಳಬೇಕು,” ಎಂದರು.

ಪರಿಸರ ರಕ್ಷಣೆ ಸರ್ಕಾರದ ಕೆಲಸ ಮಾತ್ರವಲ್ಲ

ಮುಖ್ಯ ಅತಿಥಿಯಾಗಿದ್ದ ಕೀಲು-ಮೂಳೆ ತಜ್ಞ ಡಾ. ಪ್ರಶಾಂತ ಮಾತನಾಡಿ, “ಆರೋಗ್ಯಕರ ಮತ್ತು ದೀರ್ಘ ಆಯಸ್ಸಿನ ಬದುಕಿಗೆ ಉತ್ತಮ ಪರಿಸರ ಅತ್ಯಗತ್ಯ. ಗಾಳಿ, ನೀರು ಹಾಗೂ ಮಣ್ಣಿನ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು. ಇದನ್ನು ಕೇವಲ ಸರ್ಕಾರದ ಜವಾಬ್ದಾರಿ ಎಂದು ಕೈತೊಳೆದುಕೊಳ್ಳಲು ಸಾಧ್ಯವಿಲ್ಲ,” ಎಂದು ನೆನಪಿಸಿದರು.

ಬಿ.ಎಡ್. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಟಿ.ಎಂ. ರಾಜಶೇಖರ್ ಅವರು ಸಾಲುಮರದ ತಿಮ್ಮಕ್ಕನವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ, “ತಿಮ್ಮಕ್ಕನವರು ಯಾವುದೇ ಪ್ರಶಸ್ತಿ, ಪುರಸ್ಕಾರಗಳ ಆಸೆಯಿಲ್ಲದೆ ಪರಿಸರವನ್ನು ಪ್ರೀತಿಸಿದರು. ಅಂತಹ ಜವಾಬ್ದಾರಿಯುತ ಮನೋಭಾವ ಇಂದಿನ ಯುವ ಪೀಳಿಗೆಯಲ್ಲಿ ಬೆಳೆಯಬೇಕಿದೆ,” ಎಂದು ಆಶಯ ವ್ಯಕ್ತಪಡಿಸಿದರು.
ಅಪ್ಪಿಕೋ ಚಳುವಳಿಯ ನೆನಪು
ಪ್ರಾಂತ್ಯ ಅಧ್ಯಕ್ಷ ಹೆಚ್. ಮಲ್ಲಿಕಾರ್ಜುನ ಮಾತನಾಡಿ, “ಮರಗಳ ರಕ್ಷಣೆಗಾಗಿ ಮಲೆನಾಡಿನಲ್ಲಿ ನಡೆದ ‘ಅಪ್ಪಿಕೋ ಚಳುವಳಿ’ ಇಡೀ ಜಗತ್ತಿಗೆ ಪರಿಸರ ರಕ್ಷಣೆಯ ಪಾಠ ಕಲಿಸಿದೆ. ನಾವು ನೆಡುವ ಪ್ರತಿಯೊಂದು ಮರವನ್ನು ಮಕ್ಕಳಂತೆ ಪ್ರೀತಿಯಿಂದ ಪೋಷಿಸಬೇಕು. ಕೇವಲ ಹೊರಗಿನ ಪ್ರಕೃತಿ ಮಾತ್ರವಲ್ಲ, ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯವೂ ಶುದ್ಧವಾಗಿರಬೇಕು,” ಎಂದು ಕಿವಿಮಾತು ಹೇಳಿದರು.

ಗಣ್ಯರ ಉಪಸ್ಥಿತಿ – ಸಾಧಕರಿಗೆ ಸನ್ಮಾನ
ಕಾಲೇಜಿನ ಪ್ರಾಚಾರ್ಯ ಎಂ.ಜಿ. ಗುರುಸ್ವಾಮಿ, ವಸುದೈವ ಕುಟುಂಬಕಂ ಸಂಸ್ಥೆಯ ರಂಜಿತ್, ಜೆಸಿ ರವಿ, ಅಧಿಕಾರ್ ಮತ್ತು ಅರ್ಜುನ್ ನಾಯಕ್ ಪರಿಸರದ ಮಹತ್ವದ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಪರಿಸರ ಕಾಳಜಿಯ ಸೇವೆಗಾಗಿ ವಸುದೈವ ಕುಟುಂಬಕಂ ಸಂಸ್ಥೆಯ ರಂಜಿತ್ ಹಾಗೂ ಅರ್ಜುನ್ ನಾಯಕ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹರಪನಹಳ್ಳಿ ಸ್ಫೂರ್ತಿ ಜೆಸಿಸ್ ಅಧ್ಯಕ್ಷೆ ಅಮೃತ ಪ್ರಶಾಂತ್, ಮಾಜಿ ಅಧ್ಯಕ್ಷೆ ಪ್ರಿಯಾಂಕಾ ಅಧಿಕಾರ್, ಜೆಸಿಐ ಮಾಜಿ ಅಧ್ಯಕ್ಷ ಕೆ. ಪ್ರಭಾಕರ್, ಸ್ಥಾಪಕ ಅಧ್ಯಕ್ಷ ಬಿ.ಎಸ್. ರವಿಶಂಕರ್, ಪ್ರಸನ್ನಕುಮಾರ್, ಜೈನ್, ಎಂ. ಅಂಬಣ್ಣ, ಪೂರ್ವ ವಲಯ ಅಧ್ಯಕ್ಷ ಶಿವಕುಮಾರ್ ನಾಯಕ್, ಇರ್ಷಾದ್ ಭಾಷಾ, ಸಪ್ನ ಮಲ್ಲಿಕಾರ್ಜುನ ಹಾಗೂ ಕಾಲೇಜಿನ ಉಪನ್ಯಾಸಕರಾದ ಬಿ. ಕೃಷ್ಣಮೂರ್ತಿ, ಎಂ. ಚಿಕ್ಕಪ್ರಸಾದ್, ಎಸ್. ಕೊಟ್ರೇಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಸಸಿನೆಡುವ ಸಂಕಲ್ಪದೊಂದಿಗೆ ಪಾಲ್ಗೊಂಡಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರೋಗನಿರೋಧಕ ಶಕ್ತಿ ಹೆಚ್ಚಿಸಲು ತಾಯಿಯ ಎದೆಹಾಲು ಅತ್ಯಗತ್ಯ: ಡಿಹೆಚ್‌ಒ ಡಾ.ಟಿ.ಲಿಂಗರಾಜು

ವಿಜಯನಗರ (ಹೊಸಪೇಟೆ) : ಸ್ತನ್ಯಪಾನ ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಬಹುಮುಖ್ಯವಾಗಿದೆ....

Homeಸುದ್ದಿಗಳು

ಸಂಪುಟ ವಿಸ್ತರಣೆ ಕೌತುಕಕ್ಕೆ ಇಂದು ತೆರೆ: ಸಂಜೆ ರಾಜಭವನದಲ್ಲಿ 20 ನೂತನ ಸಚಿವರ ಪದಗ್ರಹಣ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಕೊನೆಗೂ...

Homeಸುದ್ದಿಗಳು

ನರೇಗಾ ಮಾದರಿ ಕಾಮಗಾರಿ ಮರುಸ್ಥಾಪನೆಗೆ ಆಗ್ರಹ

ಹರಪನಹಳ್ಳಿ : ಹೊಸದಾಗಿ ಜಾರಿಗೆ ತಂದಿರುವ ವಿಬಿಜಿ ರಾಮ್‍ಜಿ ಕಾಯ್ದೆಯಡಿ ಹಳೆಯ ನರೇಗಾ ಮಾದರಿ ಕಾಮಗಾರಿಗಳನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ...

Homeಸುದ್ದಿಗಳು

ಮಾನವನ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ

ದಾವಣಗೆರೆ : ಕರ್ನಾಟಕವನ್ನು ಮಾನವ ಕಳ್ಳ ಸಾಗಾಣಿಕೆಯಿಂದ ಮುಕ್ತಗೊಳಿಸಲು ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸಲು ಹಾಗೂ ಸಾಗಾಣಿಕೆಗೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.