ಹರಪನಹಳ್ಳಿ : ರಾಜ್ಯಾಧ್ಯಂತ ಮಾದರ ಮಹಾಸಭಾ ಸದೃಢವಾಗಿ ಕಟ್ಟಲು ಸದಸ್ಯತ್ವ ನೊಂದಾಣಿ ಆರಂಭಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮಾಜದವರು ಹೆಸರು ನೊಂದಾಯಿಸಬೇಕು ಎಂದು ಕರ್ನಾಟಕ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ನಿಂಬಗಲ್ ರಾಮಕೃಷ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಹರಪನಹಳ್ಳಿ, ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ತಾಲ್ಲೂಕಿನಲ್ಲಿರುವ ಸಮಾಜದ ಬಾಂಧವರು ಸ್ವಯಂ ಪ್ರೇರಿತರಾಗಿ ನೊಂದಾಣಿ ಮಾಡಿಸಿಕೊಳ್ಳಬೇಕು. ಇದರಿಂದ ಆರ್ಥಿಕವಾಗಿ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಮಾದರ ಮಹಾಸಭಾವನ್ನು ಮಾಡಲು ನಾವು ಈಗ ತೀರ್ಮಾನಿಸಿದ್ದೇವೆ. ಸಮುದಾಯದ ಬಲವರ್ದನೆಗಾಗಿ ಮಹಾಸಭಾದ ಸದಸ್ಯತ್ವ ಅಭಿಯಾನದಲ್ಲಿ ನೋಂದಣಿ ಮಾಡಿಸಬೇಕು. ಯಾವುದೇ ಪಕ್ಷದಲ್ಲಿರಲಿ, ಪಕ್ಷವನ್ನು ಬದಿಗಿಟ್ಟು, ಮಾದಿಗ ಸಮಾಜ ಸದೃಢಗೊಳಿಸಲು ಪ್ರಮಾಣಿಕ ಪ್ರಯತ್ನ ಮಾಡಿ ಎಂದು ತಿಳಿಸಿದರು.
ಮಾದರ ಮಹಾಸಭಾದ ಜಿಲ್ಲಾ ಉಪಾದ್ಯಕ್ಷ ಎಚ್.ಪೂಜಾಪ್ಪ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡುವುದು ಮಹಾಸಭಾದ ಪ್ರಮುಖ ಉದ್ದೇಶ. ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ತಾಲ್ಲೂಕು ಅಧ್ಯಕ್ಷ ಹುಲಿಕಟ್ಟೆ ಚಂದ್ರಪ್ಪಮಾತನಾಡಿ, ತಾಲ್ಲೂಕಿನಿಂದ 1500 ಜನ ಸದಸ್ಯತ್ವ ಮಾಡಿಸುವ ಗುರಿ ಹೊಂದಲಾಗಿದೆ, ಇದಕ್ಕೆ ವಿವಿಧ ಹಳ್ಳಿಯಲ್ಲಿರುವ ಸಮಾಜದವರು ಸಹಕರಿಸಲು ಮನವಿ ಮಾಡಿದರು.
ಕರ್ನಾಟಕ ಮಾದರ ಮಹಾಸಭಾ ಕಾರ್ಯದರ್ಶಿ ಬದ್ದಿ ಮರಿಸ್ವಾಮಿ , ಪೂಜಾರ ಮರಿಯಪ್ಪ, ನಿಚ್ಚವ್ವನಹಳ್ಳಿ ಭಿಮಪ್ಪ, ಕಂಚಿಕೇರಿ ಕೆಂಚಪ್ಪ, ಹಲುವಾಗಲು ರಮೇಶ, ಸುವರ್ಣಮ್ಮ, ಹಂಚಿನಮನೆ ಕೆಂಚಪ್ಪ, ಹಲುವಾಗಲು ರಮೇಶ್ ಮಾತನಾಡಿದರು. ಹೊಸಪೇಟೆ ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಶೇಖರ, ಮೈದೂರು ರಾಮಪ್ಪ, ಶೃಂಗಾರತೋಟ ನಿಂಗರಾಜ್, ಮಹಾಂತೇಶ, ಒ.ಮಹಾಂತೇಶ, ಕಬ್ಬಳ್ಳಿ ಪರಸಪ್ಪ, ನೀಲಗುಂದ ಸಣ್ಣಪ್ಪ, ನಾಗೇಂದ್ರಪ್ಪ, ಎಸ್.ಎನ್.ಕುಮಾರ, ನಾಗಪ್ಪ ಇತರರಿದ್ದರು.
Leave a comment