Home ಅರಸೀಕೆರೆಯಲ್ಲಿ 6ನೇ ತಾಲ್ಲೂಕು ಸಮ್ಮೇಳನಕ್ಕೆ ಸಮ್ಮತಿ
Homeಸುದ್ದಿಗಳು

ಅರಸೀಕೆರೆಯಲ್ಲಿ 6ನೇ ತಾಲ್ಲೂಕು ಸಮ್ಮೇಳನಕ್ಕೆ ಸಮ್ಮತಿ

Share
Share

ಹರಪನಹಳ್ಳಿ : ಕನ್ನಡ ಸಾಹಿತ್ಯ ಸಮ್ಮೇಳನ ಗ್ರಾಮೀಣ ಪ್ರದೇಶಕ್ಕೆ ಪಸರಿಸುವ ನಿಟ್ಟಿನಲ್ಲಿ ಅರಸೀಕೆರೆಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ 6ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಕೈಜೋಡಿಸುವುದಾಗಿ ಕೋಲಶಾಂತೇಶ್ವರ ಮಠದ ಶಾಂತಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠದಲ್ಲಿ ಮಂಗಳವಾರ ಜರುಗಿದ ಹೋಬಳಿಯ ವಿವಿಧ ಗ್ರಾಮಗಳ ಮುಖಂಡರ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ, ಜಾನಪದ, ಸಾಂಸ್ಕೃತಿಕ, ಜನಪದ ಕಲೆಗಳಿಗೆ ವಿಶೇಷ ಸ್ಥಾನವಿದೆ. ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ, ಆಚಾರ ವಿಚಾರಗಳನ್ನು ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಮಠದ ನೇತೃತ್ವದಲ್ಲಿ ಸಮ್ಮೇಳನ ನಡೆಸಲು ಸಂಪೂರ್ಣ ಒಪ್ಪಿಗೆ ಎಂದರು.

ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಐ.ಸಲಾಂ ಸಾಹೇಬ್, ಹಿರಿಯರಾದ ನಾಗರಾಜ್ ಅವರು ಮಾತನಾಡಿ, ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಕಾರ ಮಾಡುವುದಾಗಿ ತಿಳಿಸಿದರು. ರೇವಣಸಿದ್ದಪ್ಪ, ಗುಡಿಹಳ್ಳಿ ಹಾಲೇಶ್, ಗೊಂದಾಲಿ ಗೋಪಾಲ, ಕಸಾಪ ಮಾಜಿ ಅಧ್ಯಕ್ಷ ಡಿ.ರಾಮನಮಲಿ, ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗಪ್ಪ, ನಿಚ್ಚವ್ವನಹಳ್ಳಿ ಭೀಮಪ್ಪ, ಸಾಹಿತಿ ದುರ್ಗೇಶ ಪೂಜಾರ, ಬಸವರಾಜ್, ವೆಂಕಟೇಶ್, ವಿಶ್ವನಾಥ, ಉಮೇಶ, ರಮೇಶ್ ಸೇರಿದಂತೆ ಸುದೀರ್ಘ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಕೊನೆಗೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ಸ್ವಾಮೀಜಿ ಅವರ ಸಮ್ಮುಖದಲ್ಲೇ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು.

ಮಾರುತಿ ಪೂಜಾರ, ಪೂಜಾರ ಬಸವರಾಜ್, ಚಿದಾನಂದ ಗೌಡ, ಏಕಾಂತಪ್ಪ, ಕೊಟ್ರೇಶ, ಗುಂಡಗತ್ತಿ ಮಂಜುನಾಥ, ಎಚ್.ನಾಗರಾಜ್, ರವೀಂದ್ರ, ಹಾಲೇಶ್, ಮಾಲತೇಶ, ಬಸವನಗೌಡ, ನಾಗರಾಜ ಗೌಡ, ಕೆ.ಮಹೇಶ್, ಹಾದಿಮನಿ ರಮೇಶ್ ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
DKS BANGLORE
Homeರಾಜಕೀಯ

ಕೆ.ಎಚ್.ಮುನಿಯಪ್ಪಗೆ ಸಮಾಜ ಕಲ್ಯಾಣ, ಉಳಿದವರಿಗೆ ಯಾವ ಖಾತೆ ?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟದ ಖಾತೆ ಹಂಚಿಕೆ ಪ್ರಕ್ರಿಯೆ ಕೊನೆಗೂ...

Homeಸುದ್ದಿಗಳು

ಮಾದರ ಮಹಾಸಭಾ ಸದಸ್ಯತ್ವ ನೊಂದಣಿಗೆ ಚಾಲನೆ

ಹರಪನಹಳ್ಳಿ : ರಾಜ್ಯಾಧ್ಯಂತ ಮಾದರ ಮಹಾಸಭಾ ಸದೃಢವಾಗಿ ಕಟ್ಟಲು ಸದಸ್ಯತ್ವ ನೊಂದಾಣಿ ಆರಂಭಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ...

Homeಸುದ್ದಿಗಳು

ಅಂಚೆ ಇಲಾಖೆಯಿಂದ ಆಧಾರ್ ಸೇವೆಗಳ ವಿಸ್ತರಣೆ

ವಿಜಯನಗರ : ಜಿಲ್ಲೆಯ ಸಾರ್ವಜನಿಕರಿಗೆ ಸುಲಭ, ಸುರಕ್ಷಿತ ಹಾಗೂ ಆಧಾರ್ ನವೀಕರಣ ಸೇರಿದಂತೆ ವಿವಿದ ಆಧಾರ್...

Homeಸುದ್ದಿಗಳು

ಬಡ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ

ಕಲಬುರಗಿ: ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ ವತಿಯಿಂದ ಕೊತ್ತನೂರಿನ ಸೇಂಟ್ ಮೇರಿಸ್ ಶಾಲೆಯ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.