Home ಕೆ.ಎಚ್.ಮುನಿಯಪ್ಪಗೆ ಸಮಾಜ ಕಲ್ಯಾಣ, ಉಳಿದವರಿಗೆ ಯಾವ ಖಾತೆ ?
Homeರಾಜಕೀಯ

ಕೆ.ಎಚ್.ಮುನಿಯಪ್ಪಗೆ ಸಮಾಜ ಕಲ್ಯಾಣ, ಉಳಿದವರಿಗೆ ಯಾವ ಖಾತೆ ?

Share
DKS BANGLORE
Share
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟದ ಖಾತೆ ಹಂಚಿಕೆ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ನೂತನ ಸಚಿವ ಸಂಪುಟದ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರಬಿದ್ದಿದೆ.
ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಸಂವಿಧಾನದ 166ನೇ ವಿಧಿಯ (3)ನೇ ಪರಿಚ್ಛೇದ ಹಾಗೂ ಕರ್ನಾಟಕ ಸರ್ಕಾರದ ವ್ಯವಹಾರಗಳ ನಿಯಮಗಳು 1977ರ ನಿಯಮ 5ರ ಅನ್ವಯ, ತಕ್ಷಣದಿಂದ ಜಾರಿಗೆ ಬರುವಂತೆ ಈ ಅಧಿಸೂಚನೆ ಹೊರಡಿಸಿದ್ದಾರೆ.
ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ:
  • ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿ): ಹಣಕಾಸು, ಸಚಿವ ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (DPAR), ಗುಪ್ತಚರ, ವಾರ್ತಾ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ, ಕೃಷಿ ಮಾರುಕಟ್ಟೆ, ನಗರ ಮತ್ತು ಗ್ರಾಮಾಂತರ ಯೋಜನೆ, ಬಿಡಿಎ (BDA) ಮತ್ತು ಬಿಎಂಆರ್‌ಡಿಎ (BMRDA) ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳು, ಹಾಗೂ ಹಂಚಿಕೆಯಾಗದ ಇತರ ಎಲ್ಲಾ ಖಾತೆಗಳು.
  • ಬಿ.ಜೆಡ್. ಜಮೀರ್ ಅಹ್ಮದ್ ಖಾನ್: ವಸತಿ.
  • ರಾಮಲಿಂಗಾ ರೆಡ್ಡಿ: ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ.
  • ಲಕ್ಷ್ಮಣ್ ಸವದಿ: ಸಹಕಾರ (ಕೃಷಿ ಮಾರುಕಟ್ಟೆ ಹೊರತುಪಡಿಸಿ).
  • ರುದ್ರಪ್ಪ ಮಾನಪ್ಪ ಲಮಾಣಿ: ಸಕ್ಕರೆ ಮತ್ತು ಜವಳಿ.
  • ಕೆ.ಎಚ್. ಮುನಿಯಪ್ಪ: ಸಮಾಜ ಕಲ್ಯಾಣ.
  • ಶಿವರಾಜ್ ತಂಗಡಗಿ: ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ.
  • ಯು.ಟಿ. ಖಾದರ್: ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ.
  • ಟಿ. ರಘುಮೂರ್ತಿ: ಪರಿಶಿಷ್ಟ ಪಂಗಡಗಳ ಕಲ್ಯಾಣ (ST Welfare).
  • ಡಾ. ಅಜಯ್ ಸಿಂಗ್: ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ.
  • ಚಲುವರಾಯಸ್ವಾಮಿ: ಭಾರಿ ಮತ್ತು ಮಧ್ಯಮ ನೀರಾವರಿ.
  • ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ.
  • ಬಸವರಾಜ ರಾಯರೆಡ್ಡಿ: ಉನ್ನತ ಶಿಕ್ಷಣ.
  • ಶಿವಲಿಂಗೇಗೌಡ: ಅಬಕಾರಿ (ಆರ್ಥಿಕ ಇಲಾಖೆಯಿಂದ).
  • ಪುಟ್ಟರಂಗಶೆಟ್ಟಿ: ಪಶುಸಂಗೋಪನೆ ಮತ್ತು ರೇಷ್ಮೆ.
    ವಿಜಯಾನಂದ ಕಾಶಪ್ಪನವರ್: ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳು.
  • ಸಂತೋಷ್ ಲಾಡ್: ಕಾರ್ಮಿಕ ಮತ್ತು ಉದ್ಯೋಗ.
  • ಕೆ.ಎಸ್. ಬಸವಂತಪ್ಪ: ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ.
  • ಎಸ್.ಎಸ್. ಮಲ್ಲಿಕಾರ್ಜುನ್: ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ.
  • ರಿಜ್ವಾನ್ ಅರ್ಷದ್: ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು.
  • ನರೇಂದ್ರ ಸ್ವಾಮಿ: ಕೃಷಿ.
  • ಎಚ್.ಸಿ. ಬಾಲಕೃಷ್ಣ: ಪೌರಾಡಳಿತ.
  • ಬಿ. ನಾಗೇಂದ್ರ: ಯೋಜನೆ ಮತ್ತು ಅಂಕಿ-ಅಂಶ.
Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಅರಸೀಕೆರೆಯಲ್ಲಿ 6ನೇ ತಾಲ್ಲೂಕು ಸಮ್ಮೇಳನಕ್ಕೆ ಸಮ್ಮತಿ

ಹರಪನಹಳ್ಳಿ : ಕನ್ನಡ ಸಾಹಿತ್ಯ ಸಮ್ಮೇಳನ ಗ್ರಾಮೀಣ ಪ್ರದೇಶಕ್ಕೆ ಪಸರಿಸುವ ನಿಟ್ಟಿನಲ್ಲಿ ಅರಸೀಕೆರೆಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ...

Homeಸುದ್ದಿಗಳು

ಮಾದರ ಮಹಾಸಭಾ ಸದಸ್ಯತ್ವ ನೊಂದಣಿಗೆ ಚಾಲನೆ

ಹರಪನಹಳ್ಳಿ : ರಾಜ್ಯಾಧ್ಯಂತ ಮಾದರ ಮಹಾಸಭಾ ಸದೃಢವಾಗಿ ಕಟ್ಟಲು ಸದಸ್ಯತ್ವ ನೊಂದಾಣಿ ಆರಂಭಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ...

Homeಸುದ್ದಿಗಳು

ಅಂಚೆ ಇಲಾಖೆಯಿಂದ ಆಧಾರ್ ಸೇವೆಗಳ ವಿಸ್ತರಣೆ

ವಿಜಯನಗರ : ಜಿಲ್ಲೆಯ ಸಾರ್ವಜನಿಕರಿಗೆ ಸುಲಭ, ಸುರಕ್ಷಿತ ಹಾಗೂ ಆಧಾರ್ ನವೀಕರಣ ಸೇರಿದಂತೆ ವಿವಿದ ಆಧಾರ್...

Homeಸುದ್ದಿಗಳು

ಬಡ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ

ಕಲಬುರಗಿ: ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ ವತಿಯಿಂದ ಕೊತ್ತನೂರಿನ ಸೇಂಟ್ ಮೇರಿಸ್ ಶಾಲೆಯ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.