Home ಹರಪನಹಳ್ಳಿ : ‘ನರೇಗಾ ಬಚಾವೋ ಸಂಗ್ರಾಮ’
Homeಸುದ್ದಿಗಳು

ಹರಪನಹಳ್ಳಿ : ‘ನರೇಗಾ ಬಚಾವೋ ಸಂಗ್ರಾಮ’

Share
ಹರಪನಹಳ್ಳಿ : ‘ನರೇಗಾ ಬಚಾವೋ ಸಂಗ್ರಾಮ’
Share

ಹರಪನಹಳ್ಳಿ : ವಿಜಿ ಬಿಜಿ ರಾಮ್ ವಿರೋಧಿಸಿ  ಕಾಂಗ್ರೆಸ್ ಪಕ್ಷದಿಂದ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜ್ ಮುಂಭಾಗ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿದ್ದ ಟೆಂಟ್ ನಲ್ಲಿ ಕುಳಿತ ತಾಲ್ಲೂಕು ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಗುರುವಾರ ‘ನರೇಗಾ ಬಚಾವೋ ಸಂಗ್ರಾಮ’ ಉಪವಾಸ ಸತ್ಯಾಗ್ರಹ ನಡೆಸಿದರು.

ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಬೆಳಿಗ್ಗೆ 11ಕ್ಕೆ ಸತ್ಯಾಗ್ರಹ ಆರಂಭಿಸಿ ಸಂಜೆ 4 ಗಂಟೆಗೆ ಮುಕ್ತಾಯಗೊಳಿಸಿದರು. ನೇತೃತ್ವವಹಿಸಿದ್ದ  ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್  ಮಾತನಾಡಿ, ಮ-ನರೇಗಾಗೆ ತಿದ್ದುಪಡಿ ತಂದಿರುವ ಬಿಜೆಪಿ ಕೇಂದ್ರ ಸರ್ಕಾರ ‘ವಿಬಿ ಜಿ ರಾಮ ಜಿ ’ ಕಾಯ್ದೆ ಜಾರಿಗೊಳಿಸಿ, ಬಡವರ ಹಕ್ಕುಗಳನ್ನು ಕಸಿಯುವ  ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ದೇಶದ ಬಡ ಜನತೆಗೆ ಕೆಲಸ, ಊಟ, ಶಿಕ್ಷಣ ಸದುದ್ದೇಶದಿಂದ ಮನಮೋಹನ್ ಸಿಂಗ್ ಅವರು ಮ-ನರೇಗಾ ಯೋಜನೆ 2005ರಲ್ಲಿ ಜಾರಿ ಮಾಡಿದ್ದರು. ಅದರ ಆಶಯ ಬುಡಮೇಲು ಮಾಡಿ, ಮಹಾತ್ಮಗಾಂಧಿಜಿ ಅವರನ್ನು ಅಪಮಾನಿಸಿರುವ  ಕೇಂದ್ರದ ಬಿಜೆಪಿ   ಸಂವಿಧಾನ ವಿರೋಧಿ ಕಾಯ್ದೆ ಜಾರಿಗೊಳಿಸಿದೆ. ಬಡ ಜನತೆಗೆ, ಕೂಲಿ ಕಾರ್ಮಿಕರಿಗೆ ಮಾರಕವಾಗಿರುವ ವಿಬಿ ಜಿ ರಾಮ್ಜಿ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ ಸುಳ್ಳು ಹೇಳಿ ಅಧಿಕಾರ ಅಲಂಕರಿಸಿದ ಬಿಜೆಪಿ ಹೊಸ ಕಾಯ್ದೆಗಳ ಮೂಲಕ ದೇಶದ ಜನತೆಗೆ ಮಾಡುವ ವಂಚನೆ ನಿಲ್ಲಿಸಿ ಮ-ನರೇಗಾ ಯೋಜನೆ ಪುನರ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಸತ್ಯಾಗ್ರಹದಲ್ಲಿ  ‘ವಿಬಿ-ಜಿ-ರಾಮ್ ಜಿ’ ಹೊಸ ಕಾಯ್ದೆ ವಿರೋಧಿಸಿ ಹಳ್ಳಿಯಿಂದ ದಿಲ್ಲಿಯ ತನಕ ಪಕ್ಷಾತೀತ ಹೋರಾಟ ಮಾಡಬೇಕು. ಮನರೇಗಾ ಮರುಸ್ಥಾಪನೆಗಾಗಿ ಪ್ರತಿಭಟನೆ ತೀವ್ರಗೊಳಿಸಲು ಸಂಕಲ್ಪ ಮಾಡಲಾಯಿತು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕುಬೇರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ, ಮುಖಂಡರಾದ ಶಶಿಧರ ಪೂಜಾರ, ಪ್ರಕಾಶ ಪಾಟೀಲ್, ಪೋಮ್ಯನಾಯ್ಕ, ಡಿ.ಅಬ್ದುಲ್ ರೆಹಮಾನ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಲಾಟಿ ದಾದಾಪೀರ, ಜಿಲ್ಲಾ ವಕ್ತಾರ ಇಸ್ಮಾಯಿಲ್ ಎಲಿಗಾರ, ಕೃಷ್ಣನಾಯ್ಕ, ಕಂಚಿಕೇರಿ ಮಂಜಪ್ಪ, ಮೈದೂರು ಒ.ರಾಮಪ್ಪ, ಹುಲಿಕಟ್ಟೆ ಚಂದ್ರಪ್ಪ, ಮಹಾವೀರ, ಟಿ.ವೆಂಕಟೇಶ್, ಸಾಸ್ವಿಹಳ್ಳಿ ನಾಗರಾಜ್, ಮತ್ತೂರು ಬಸವರಾಜ್, ಜಾಕೀರ ಹುಸೇನ್, ಬಸವರಾಜ ಸಂಗಪ್ಪನವರ, ಎಚ್.ವಸಂತಪ್ಪ, ಮತ್ತಿಹಳ್ಳಿ ಪಿ.ರಾಮಣ್ಣ, ಎಲ್.ಮಂಜನಾಯ್ಕ  ಮಾತನಾಡಿದರು. ಮುಖಂಡರಾದ ಮತ್ತಿಹಳ್ಳಿ ಶಿವಣ್ಣ, ನೀಲಗುಂದ ವಾಗೀಶ, ಚಿಕ್ಕೇರಿ ಬಸಪ್ಪ, ಕುಲುಮಿ ಅಬ್ದುಲ್, ವನಜಾಕ್ಷಿ, ನವರಂಗ, ದೇವೇಂದ್ರಗೌಡ, ಅಶೋಕ, ಮೆಹಬೂಬ್, ಉಮಾಮಹೇಶ್ವರಿ, ಜೀಷಾನ್ ಸೇರಿದಂತೆ ಅನೇಕರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಜೂ.18 ರಂದು ಪರಿಶಿಷ್ಟ ಜಾತಿ ಜನಾಂಗದವರ ಕುಂದು-ಕೊರತೆ ಆಲಿಕೆ ಸಭೆ

ಬಳ್ಳಾರಿ : ಜಿಲ್ಲೆಯ ಪರಿಶಿಷ್ಟ ಜಾತಿ ಜನಾಂಗದವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ...

ಹರಪನಹಳ್ಳಿ ಪೊಲೀಸ್‌
Homeಸುದ್ದಿಗಳು

ಹರಪನಹಳ್ಳಿಯಲ್ಲಿ ಪೊಲೀಸರ ‘ಕಾಲ್ನಡಿಗೆ ಗಸ್ತು’

ಹರಪನಹಳ್ಳಿ : ನಗರದಲ್ಲಿ ಅಪರಾಧ ಪ್ರಕರಣಗಳಿಗೆ ಬ್ರೇಕ್ ಹಾಕಲು ನಮ್ಮ ಪೊಲೀಸ್ ಇಲಾಖೆ ಒಂದು ಸೂಪರ್...

Homeಶಿಕ್ಷಣ

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಜಾಥ: ರಾರಾಜಿಸಿದ ಜಾಗೃತಿ ಫಲಕಗಳು

ಶಿಕ್ಷಣ ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು: ನ್ಯಾ.ಸಿದ್ದಲಿಂಗ ಪ್ರಭು ಬಳ್ಳಾರಿ : ಹೆಣ್ಣಾಗಲಿ ಅಥವಾ ಗಂಡಾಗಲಿ, ಪ್ರತಿಯೊಬ್ಬ...

Homeಶಿಕ್ಷಣ

ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ

ವಿಜಯನಗರ (ಹೊಸಪೇಟೆ) (ಕರ್ನಾಟಕ ವಾರ್ತೆ) ಜೂನ್.11: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ,...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.