ಹರಪನಹಳ್ಳಿ : ತಾಲ್ಲೂಕಿನ ಹಿರೆಮೇಗಳಗೆರೆ ಗ್ರಾಮದಲ್ಲಿ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಶಿವ ಪಂಚಾಕ್ಷರಿ ಪಠಣ, ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ ಈಚೆಗೆ ಜರುಗಿತು.
ಸಾನ್ನಿಧ್ಯವಹಿಸಿದ್ದ ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಹಳ್ಳಿಗಳಲ್ಲಿ ಕುಟುಂಬಗಳ ಆರ್ಥಿಕ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ರೂಪಿಸುತ್ತಿದೆ. ಇಲ್ಲಿ ಸದಸ್ಯತ್ವ ಪಡೆದ ಮಹಿಳೆಯರು ಉಳಿತಾಯ ಖಾತೆ ಮೂಲಕ ತಮ್ಮ ಕುಟುಂಬ ಸದೃಢಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕ ಪ್ರವೀಣ್ ಮಾತನಾಡಿ, ಗ್ರಾಮಾಭಿವೃದ್ದಿ ಯೋಜನೆಯು ಆರೋಗ್ಯ ರಕ್ಷಾ, ಸಂಪೂರ್ಣ ಸುರಕ್ಷಾ, ಸಿಎಸ್‌ಸಿ ಕೇಂದ್ರ, ಶಿಷ್ಯ ವೇತನ, ವಾತ್ಸಲ್ಯ ಕಿಟ್ ಯೋಜನೆ ಒಳಗೊಂಡು ಹಲವು ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ. ಸಂಘದ ಸದಸ್ಯರು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗ್ರಾಮಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಪರಶುರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡ ತಾಲ್ಲೂಕು ಯೋಜನಾಧಿಕಾರಿ ವೆಂಕಟರಾವ್ ಶಾನುಭೋಗ, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳಿದ್ದರು.
Leave a comment