Home ಸಮತಾ ರೆಸಾರ್ಟ್ ಪ್ರಗತಿಪರ‌‌ ಚಿಂತನೆಗಳ ಕೇಂದ್ರ
Homeಕ್ರೀಡೆ

ಸಮತಾ ರೆಸಾರ್ಟ್ ಪ್ರಗತಿಪರ‌‌ ಚಿಂತನೆಗಳ ಕೇಂದ್ರ

Share
Share

ಹರಪನಹಳ್ಳಿ : ಬುದ್ದ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಣ್ಣನವರು ತಮ್ಮ ಜೀವನದಲ್ಲಿ ಮೈಗೂಡಿಸಿ ಕೊಂಡಿದ್ದಾರೆ, ಹರಪನಹಳ್ಳಿ ಸಮತಾ ರೆಸಾರ್ಟ್ ಪ್ರಗತಿಪರ‌ ಚಿಂತನೆಯ ಕೇಂದ್ರ ಎಂದು ಚಿತ್ರದುರ್ಗ  ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಜಿ ಹೇಳಿದರು.

ನಗರದ ಹೊರ ವಲಯದಲ್ಲಿರುವ ಸಮತಾ ರೆಸಾರ್ಟ್ ನಲ್ಲಿ ಸೋಮವಾರ ನಡೆದ ‘ಸಮತ ಕ್ರೀಡಾ ಲೋಕ ಲೋಕಾರ್ಪಣೆ’ ಮತ್ತು ‘ಪ್ರಜಾಪ್ರಭುತ್ವದ ತಲ್ಲಣಗಳು ಮತ್ತು ಪ್ರಸ್ತುತ ಭಾರತ’ ಎನ್ನುವ ವಿಚಾರ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಇವರು ಮಾತನಾಡಿದರು.

ಭೀಮಣ್ಣನವರು ಏನೇ ಕಾರ್ಯಕ್ರಮಗಳನ್ನು ಮಾಡಿದರೂ ಅಲ್ಲಿ ಬುದ್ದ ಬಸವ ಅಂಬೇಡ್ಕರ್ ಪೋಟೋ ಇರುತ್ತದೆ ಎನ್ನುವುದು ಬಹಳ ಮುಖ್ಯವಾಗಿದೆ. ವೈಚಾರಿಕ ಚಿಂತನೆಯುಳ್ಳ ಬೀಮಣ್ಣನವರು ಕ್ರೀಡಾ ಕ್ಷೇತ್ರವನ್ನು ಉದ್ಘಾಟನೆ ಮಾಡಿಸಿದ್ದಾರೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬದಲಾಗುತ್ತಿರುವ ಚಿಂತನೆಗಳನ್ನ ಬದಲಾಗುತ್ತಿರುವ ಅನಿಸಿಕೆಗಳ ಮದ್ಯೆಯೂ ಕೂಡ ಬುದ್ದನ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಬೀಮಣ್ಣನವರು ಕ್ರೀಡಾಲೋಕಕ್ಕೆ ಸಮತ ಕ್ರೀಡಾಲೋಕ ಎಂದು ಹೆಸರನ್ನಿಟ್ಟಿರುವುದು ಈ ಭಾಗದ ಗ್ರಾಮೀಣ ಜನರಿಗೆ ಸದ್ಬಳಕೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.

ಬಂಡಾಯ ಸಾಹಿತಿ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯು ಇಂದು ಪ್ರಜೆಗಳ ಆಶಯಕ್ಕೆ ಉಳಿಯದೆ, ನಮ್ಮ ನೆಲ, ಜಲ ಸಂಸ್ಕೃತಿಯ ಸಂಪತ್ತನ್ನು ಆಳುವ ಸರಕಾರಗಳು ವಿದೇಶಿ ಮೂಲಗಳ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟಕ್ಕಿಟ್ಟಿರುವುದು ಅತಂಕಕಾರಿ ಬೆಳವಣಿಗೆಯಾಗಿದೆ. ಬುದ್ದನ ಸಂಘರ್ಷ ಸಾಮ್ರಾಜ್ಯಗಳ ವಿರುದ್ದ ನಡೆದರೆ, ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಜಾತಿ ವ್ಯವಸ್ಥೆಯ ವಿರುದ್ದ ಹೋರಾಡಿದರು, ಗಾಂಧಿಯು ಶಾಂತಿಯ ಅಸ್ತದ ಮೂಲಕ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆ, ಇನ್ನೊಂದು ವರ್ಗವು ಅದರೊಟ್ಟಿಗೆ ಆರ್ಥಿಕಗಾಗಿ ಮತ್ತು ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜಾತಿ ವ್ಯವಸ್ಥೆ ತೊಲಗಿಸುವ ಬಯಕೆ ಹೊಂದಿದ್ದರು.

ಕೇಂದ್ರವು ಚಲೇ ಆವ್ ಚಳುವಳಿಯ ಮೂಲಕ ತುಳಿತಕ್ಕೆ ಒಳಗಾದ ಜನರನ್ನು ಗುರಿಯಾಗಿ ಅವರನ್ನು ನಿರ್ಲ್ಯಕ್ಷ ಮಾಡಿ, ಜನರ ಬದುಕಲ್ಲಿ ನಿತ್ಯ ಬೆರೆತಿರುವ ವಿದ್ಯುತ್, ಆಸ್ಪತ್ರೆ ಹಾಗೂ ಶಿಕ್ಷಣವನ್ನು ಖಾಸಗೀಕರಣ ಮಾಡಲು ಹೊರಟಿದೆ. ವಿದೇಶಿ ವ್ಯಾಮೋಹಕ್ಕೆ ಒಳಗಾಗಿರುವ ದೇಶದ ಪ್ರಜೆಗಳು ಮೂಲ ನೆಲೆಯನ್ನು ಮರೆತು ನಮ್ಮ ಪ್ರಕೃತಿಯಲ್ಲಿ ಸಿಗುವ ಸಂಪತ್ತನ್ನು ನಿರ್ಲ್ಯಕ್ಷ ವಹಿಸುತ್ತಿದ್ದಾರೆ, ಸನಾತನ ಪರಂಪರೆ ಉಳ್ಳವರು ಮತೀಯರಂತೆ ವರ್ತಿಸುತ್ತಾರೆ, ನಾವುಗಳು ಮತಾಂದತೆಯ ಮನಸ್ಸನ್ನು ಹೊಂದಬಾರದು, ಮನುಷ್ಯ ಮನುಷ್ಯರ ಮದ್ಯೆ ಪ್ರೀತಿಯ ಸಾಮರಸ್ಯ ಬೆಸೆಯುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.

ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ರಾಜಕಾರಣಿಗಳನ್ನು ಸಾರಾಸಗಟವಾಗಿ ದೂರುವುದು ಸುಲಭ ಆದರೆ, ಇಂದಿನ ರಾಜಕಾರಣವು ಅಂದುಕೊಂಡಂತೆ ಸಾಗದೆ, ತಾಯಿಯು ಮಗುವಿಗೆ ಜನ್ಮ ನೀಡಿ ಹೇಗೆ ಪುನರ್ಜನ್ಮ ಪಡೆಯುತ್ತಾಳೊ ಹಾಗೆಯೇ ಒಬ್ಬ ರಾಜಕಾರಣಿಯು ಚುನಾವಣೆಯ ನಂತರ ಪುನರ್ಜನ್ಮ ಪಡೆದಷ್ಟೇ ನೋವನ್ನು ಎದುರಿಸುತ್ತಿದ್ದಾನೆ. ನೀರಿನಲ್ಲಿ ಜೀವಿಸುವ ಮೀನು ನೀರನ್ನು ಕುಡಿಯದೆ ಇರಲು ಹೇಗೆ ಸಾದ್ಯವಿಲ್ಲವೊ, ರಾಜಕಾರಣಿಗಳು ಕೂಡ ತಮ್ಮ ಅಧಿಕಾರಾವದಿಯಲ್ಲಿ ಭ್ರಷ್ಟತನದ ಹಣೆಪಟ್ಟಿಯನ್ನು ಕಟ್ಟಿಕೊಳ್ಳುವುದು ಸಾಮಾನ್ಯ, ಬಂಡಾಯ ಸಾಹಿತಿಗಳು ತಮ್ಮ ಕಲ್ಪಲೋಕದಲ್ಲಿ ಮಾತನಾಡಿದಷ್ಟು ಸುಲಭವಾಗಿ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾದ್ಯವಿಲ್ಲ. ಇಂದಿನ ಜನಗಳು ನಿತ್ಯದ ಬದುಕಲ್ಲಿ ಎದುರಿಸುತ್ತಿರುವ ಒತ್ತಡದ ಜೀವನದಲ್ಲಿ ತಮ್ಮ ಆರೋಗ್ಯ ರಕ್ಷಣೆಗಾಗಿ ಮರಳಿ ಮೂಲ ಪರಂಪರೆಯ ಕಡೆಗೆ ಸಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಸ್ವಾಮೀಜಿ, ಶಾಂತಲಿಂಗ ರಾಜದೇಶೀ ಕೇಂದ್ರ ಸ್ವಾಮೀಜಿ ಅರಸೀಕೆರೆ, ಪಟ್ಟದ ಚಿನ್ಮಯ ಸ್ವಾಮೀಜಿ ಕೂಲಹಳ್ಳಿ ಸ್ವಾಮೀಜಿಗಳು ಸಾನಿದ್ಯ ವಹಿಸಿದ್ದರು,
ನಾಡೋಜ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ಮಾಜಿ ಸಂಸದ ವೈ.ದೇವೇಂದ್ರಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ರಾಜ್ಯಾದ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ, ಪ್ರಗತಿ ಪರ ಚಿಂತಕ ಕೋಡಿಹಳ್ಳಿ ಭೀಮಪ್ಪ, ಚಿತ್ರ ನಟ ಶ್ರೀನಗರ ಕಿಟ್ಟಿ,ಸುನಾಮಿ ಕಿಟ್ಟಿ, ನಿರ್ಮಾಪಕ ಛಲವಾದಿ ಕುಮಾರ, ಮಹಿಮಾ ಪಾಟೀಲ್, ಹೆಚ್.ಕೆ.ಹಾಲೇಶ್, ಎನ್.ಕೊಟ್ರೇಶ್, ಹುಲಿಕಟ್ಟಿ ಚಂದ್ರಪ್ಪ, ಒ.ಮಹಾಂತೇಶ್, ಕೆ.ಡಿ.ಅಂಜಿನಪ್ಪ, ಸೇರಿದಂತೆ ಅನೇಕರಿದ್ದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಅಪರಾಧ

ಹರಪನಹಳ್ಳಿ: ನಕಲಿ ದಾಖಲೆ ಸೃಷ್ಟಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಕೃಷಿ

ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.