ಹರಪನಹಳ್ಳಿ :ಕಾನೂನಿನ ಅರಿವು ಪ್ರತಿಯೊಬ್ಬ ಮಹಿಳೆ ಮತ್ತು ಕುಟುಂಬಕ್ಕೆ ರಕ್ಷಣೆಯಾಗಿದೆ ಎಂದು ಹಿರಿಯ ಉಪನ್ಯಾಸಕರಾದ ಬಸವರಾಜ್. ಸಿ.ಎಸ್ ಅಭಿಪ್ರಾಯಪಟ್ಟರು. ಪಟ್ಟಣದ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಹೆಚ್ ಪಿ ಎಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಜಿಲ್ಲೆಯ ವಿಜಯ ಮಹಿಳಾ ಸುರಕ್ಷತಾ ಪಡೆಯ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಾ ಮಕ್ಕಳ ಸುರಕ್ಷತೆ ಗೌರವ ಮತ್ತು ಭಾರತದಲ್ಲಿ ಹಲವು ಕಾನೂನುಗಳಿವೆ ಅವುಗಳ ಬಗ್ಗೆ ಅರಿವು ಹೊಂದುವುದು ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಳಿಯುವುದು ಅತ್ಯಂತ ಮಹತ್ವವಾಗಿದೆ ಎಂದರು.
ವಿಜಯ ಮಹಿಳಾ ಸುರಕ್ಷ ಪಡೆಯ ಸದಸ್ಯರಾದ ಕೆಂಚಮ್ಮ. ಟಿ ಮಾತನಾಡಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ಕುರಿತು ಮಾತನಾಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಈ ಕಾಯ್ದೆ ಜಾರಿಯಲ್ಲಿದೆ. ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಈ ಕಾನೂನು ಅನ್ವಯಿಸುತ್ತದೆ. ಮಕ್ಕಳ ಮೇಲಿನ ಯಾವುದೇ ರೀತಿಯ ಲೈಂಗಿಕ ಕಿರುಕುಳ, ಶೋಷಣೆ ಅಥವಾ ದುರುಪಯೋಗ ಗಂಭೀರ ಅಪರಾಧವಾಗಿದೆ.
ಇಂತಹ ಘಟನೆಗಳು ಕಂಡುಬಂದರೆ ಕೂಡಲೇ ಪೊಲೀಸ್ ಠಾಣೆ ಅಥವಾ ಮಕ್ಕಳ ಸಹಾಯವಾಣಿ 1098 ಗೆ ಮಾಹಿತಿ ನೀಡಬೇಕು ಮತ್ತು ಬಾಲ್ಯ ವಿವಾಹ ನಿಷೇಧ ಕಾಯಿದೆ, 2006 ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸು 18 ವರ್ಷ ಮತ್ತು ಗಂಡುಮಕ್ಕಳ ವಿವಾಹದ ಕನಿಷ್ಠ ವಯಸ್ಸು 21 ವರ್ಷ. ಇದಕ್ಕಿಂತ ಕಡಿಮೆ ವಯಸ್ಸಿನಲ್ಲಿ ವಿವಾಹ ಮಾಡುವುದು ಅಥವಾ ಮಾಡಿಸುವುದು ಕಾನೂನುಬಾಹಿರ. ಬಾಲ್ಯ ವಿವಾಹದಿಂದ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
ಬಾಲ್ಯ ವಿವಾಹದ ಬಗ್ಗೆ ಮಾಹಿತಿ ದೊರೆತರೆ ಪೊಲೀಸ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ 1098 ಗೆ ತಿಳಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತಿ ಎನ್ ಎಸ್ ಎಸ್ ಯೋಜನಾಧಿಕಾರಿ ಹೆಚ್.ಶಿವಾನಂದ, ಉಪನ್ಯಾಸಕರಾದ ವಿರೇಶ್ ಎಂ ಎಸ್, ಶ್ವೇತ ಎಂ.ಬಿ, ಸೌಭಾಗ್ಯ, ಸೌಮ್ಯ.ಸಿ,ವಿಜಯ್ ಮಹಿಳಾ ಸುರಕ್ಷಾ ಪಡೆಯ ಸದಸ್ಯರಾದ ಶಾಂತಮ್ಮಎನ್ ,ಸುಮಾ ಎನ್. ರವೀಂದ್ರ ಕೆ.ಬಿ, ಎಂಪಿ ಗೌಡ, ನರೇಂದ್ರ, ಮೋಹನ್ ಮತ್ತಿತರರಿದ್ದರು.
Leave a comment