Home ಸುದ್ದಿಗಳು ಹರಪನಹಳ್ಳಿ ಕಾರ್ಯನಿರತ ಪತ್ರಕರ್ತರ ಸಮಿತಿ ಅಧ್ಯಕ್ಷ ನಾಗೇಂದ್ರಪ್ಪ
ಸುದ್ದಿಗಳು

ಹರಪನಹಳ್ಳಿ ಕಾರ್ಯನಿರತ ಪತ್ರಕರ್ತರ ಸಮಿತಿ ಅಧ್ಯಕ್ಷ ನಾಗೇಂದ್ರಪ್ಪ

Share
ಹರಪನಹಳ್ಳಿ ಕಾರ್ಯನಿರತ ಪತ್ರಕರ್ತರ ಸಮಿತಿ ಅಧ್ಯಕ್ಷ ನಾಗೇಂದ್ರಪ್ಪ
Share

ಹರಪನಹಳ್ಳಿ :  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿಯ ಹರಪನಹಳ್ಳಿ ತಾಲ್ಲೂಕು ಘಟಕ ಅಸ್ತಿತ್ವಕ್ಕೆ ತರಲಾಗಿದ್ದು, ಗೌರವ ಅಧ್ಯಕ್ಷರಾಗಿ ಕೆ.ಉಚ್ಚೆಂಗೆಪ್ಪ, ತಾಲ್ಲೂಕು ಅಧ್ಯಕ್ಷರಾಗಿ ಎ.ನಾಗೇಂದ್ರಪ್ಪ,  ಉಪಾಧ್ಯಕ್ಷರಾಗಿ  ಪಟ್ನಾಮದ ವೆಂಕಟೇಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಿ.ವೈ.ದುರುಗೇಶ್ ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ಖಜಾಂಚಿ ಎ.ವೆಂಕಟರಾಜು, ಸಂಘಟನಾ ಕಾರ್ಯದಶಿಗಳಾದ ರಾಮಚಂದ್ರ ನಾಗತಿಕಟ್ಟೆ, ಹಾಗೂ ಶಬ್ಬೀರ ಸಾಹೇಬ್, ಸಹ ಕಾರ್ಯದರ್ಶಿಯಾಗಿ ನಾಗಭೂಷಣ್ ಸಂಡೂರು ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರು :  ಹಿರಿಯ ಪತ್ರಕರ್ತ ವಿಶ್ವನಾಥ, ಪಟ್ನಾಮದ್ ಬಸವರಾಜ, ಕವಸರ ಬಸವರಾಜ, ಹೆಚ್.ಪರಶುರಾಮ, ಮಾರುತಿ ಪೂಜಾರ, ಮೈಲಾರಿ, ಭೋವಿ ಮಂಜುನಾಥ, ಹೆಚ್.ಶಶಿಕುಮಾರ್, ಬಿ.ನಾಗರಾಜ್, ರುದ್ರಮುನಿ, ಬಸವರಾಜ ಹುಲಿಯಪ್ಪನವರ, ತಿರುಮಲ, ಅಶೋಕ, ಅಡವಿಗೌಡರ ಬಸವರಾಜ ಅವರನ್ನು ಆಯ್ಕೆ ಮಾಡಲಾಗಿದೆ.

ಕ.ಕಾ.ನಿ.ಪ.ಸಮಿತಿ ಗೌರವಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ. ಪತ್ರಕರ್ತರ ಮದ್ಯೆ ಮೇಲು ಕೀಳೆಂಬ ತಾತ್ಸಾರ ಮನೋಭಾವ, ಕೀಳರಿಮೆ ಇರಬಾರದು, ನಮ್ಮ ಸುಸಂಸ್ಕೃತ ನಡವಳಿಕೆಯ ಮೂಲಕ ನಾವುಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಬೇಕು, ನಿರಂತರ ಪ್ರಯತ್ನದಿಂದ ಯಾವುದೇ ಕಾರ್ಯಗಳಲ್ಲಿ ಯಶಸ್ಸು ಗಳಿಸಲು ಸಾದ್ಯ. ಇಂದು ಪತ್ರಿಕಾ ಕ್ಷೇತ್ರವು ದೊಡ್ಡ ಶಕ್ತಿಯಾಗಿ ಬೆಳೆದು ನಿಂತಿದೆ ಎಂದು ಹೇಳಿದರು.

ಕ.ಕಾ.ನಿಪ.ಸಮಿತಿಯ ಹಿರಿಯ ಪರ್ತಕರ್ತ ಡಿ.ವಿಶ್ವನಾಥ ಮಾತನಾಡಿ, ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಗಟ್ಟಿತನದಿಂದ ಖಂಡಿಸುವ ಮನಸ್ಥಿತಿಯನ್ನು ಪತ್ರಕರ್ತರಾದವರು ರೂಡಿಸಿಕೊಳ್ಳಬೇಕು, ಶೋಷಿತರ, ದಮನಿತರ ದ್ವನಿಯಾಗಬೇಕು ಆಗ ಮಾತ್ರ ನಮ್ಮಗಳ ವೃತ್ತಿಗೆ ಶೋಭೆ ತರುತ್ತದೆ, ಎಂತಹ ಕಠಿಣ ಪರಿಸ್ಥಿತಿ ಬಂದರು ಒಗ್ಗಟ್ಟಿನಿಂದ ಜಯ ಸಾದಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಹರಪನಹಳ್ಳಿ : ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ 

ಪ್ರಜಾಸೇವ ಆಂದೋಲನ ಜನರ ಹೃದಯಕ್ಕೆ ಮುಟ್ಟುವಂತಿರಲಿ ಹರಪನಹಳ್ಳಿ :  ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ...

Homeಸುದ್ದಿಗಳು

ಬಾಲಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ 

ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ...

Homeಸುದ್ದಿಗಳು

ಜೆಡಿಎಸ್ ಅಧ್ಯಕ್ಷರಾಗಿ ವಿ. ಮಲ್ಕಪ್ಪ ಆಯ್ಕೆ

ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ...

Homeಸುದ್ದಿಗಳು

ಮಕ್ಕಳಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ನೀಡುವ ಹೊಣೆ ಎಲ್ಲರದ್ದು: ಪ್ರಾಂಶುಪಾಲ ಡಾ. ಎಂ. ಸುರೇಶ್

ಹರಪನಹಳ್ಳಿ : 'ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಹೊಣೆಯನ್ನು ಪ್ರತಿಯೊಬ್ಬರೂ ಹೊರಬೇಕು'...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.