Home ರಾಜಕೀಯ ಹೊಸಕೋಟೆ ಗ್ರಾಪಂ ಅಧ್ಯಕ್ಷರಾಗಿ ನಾಗಪ್ಪ ಅವಿರೋಧ ಆಯ್ಕೆ
ರಾಜಕೀಯ

ಹೊಸಕೋಟೆ ಗ್ರಾಪಂ ಅಧ್ಯಕ್ಷರಾಗಿ ನಾಗಪ್ಪ ಅವಿರೋಧ ಆಯ್ಕೆ

Share
Hosakote-gp-President
ಹರಪನಹಳ್ಳಿ ತಾಲ್ಲೂಕು ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಾಗಪ್ಪ ಅವಿರೋಧ ಆಯ್ಕೆಯಾದರು, ಮುಖಂಡರನ್ನು ಅಬಿನಂಧಿಸಲಾಯಿತು.
Share

ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆ ಹೋಬಳಿ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಡಿ.ನಾಗಪ್ಪ ಅವರು ಮಂಗಳವಾರ ನಡೆದ ಆಯ್ಕೆಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 14 ಜನ ಸದಸ್ಯ ಬಲ ಹೊಂದಿದೆ. ಹಿಂದಿನ ಅಧ್ಯಕ್ಷೆ ಬಿ.ರೇಣುಕಮ್ಮ ಅವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನ ಬಯಸಿ ಡಿ.ನಾಗಪ್ಪ ಅವರೊಬ್ಬರೆ ನಾಮಪತ್ರ ಸಲ್ಲಿಸಿದ್ದರು. ಸಭೆಯಲ್ಲಿ 11 ಜನ ಸದಸ್ಯರು ಹಾಜರಿದ್ದರು. ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ಘೋಷಿಸಿದರು. ಬಳಿಕ ಕಾರ್ಯಕರ್ತರು ಸಂಭ್ರಮಾಚರಿಸಿದರು. ನೂತನ ಅಧ್ಯಕ್ಷ ನಾಗಪ್ಪ ಮಾತನಾಡಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸುವುದು, ಸ್ವಚ್ಚತೆ, ಬೀದಿ ದೀಪದ ವ್ಯವಸ್ಥೆಗೆ ಆಧ್ಯತೆ ನೀಡಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹೇಮಂತ್, ಉಪಾಧ್ಯಕ್ಷೆ ಕವಿತಾ ವೀರೇಶ್, ಸದಸ್ಯರಾದ ಮಂಜಮ್ಮ ಆನಂದಪ್ಪ, ಜಯ್ಯಮ್ಮ ಕೃಷ್ಣಪ್ಪ, ಬಸಮ್ಮ ಲೋಕಪ್ಪ, ಗೌರಮ್ಮ ಜಗದೀಶ್, ಆರ್. ಆಶಾ ಅಣ್ಣಪ್ಪ, ಕೆಂಚಪ್ಪ, ಜಿ. ಅಮರೇಶ್, ಟಿ.ಪಾಂಡುರಂಗಪ್ಪ, ಡಿ.ಶ್ರೀನಿವಾಸ್, ಕೆ. ಎನ್. ಸಿದ್ದೇಶ್, ಹೆಚ್. ಕರಿಬಸಪ್ಪ, ಮುಖಂಡರಾದ ಚಿಕ್ಕಕಬ್ಬಳ್ಳಿ ಕೊಟ್ರೇಶ್, ಪರುಸಪ್ಪ, ರಮೇಶ್, ಸುರೇಶ್ ಗೌಡ, ಚಂದ್ರುಗೌಡ, ಆಲೂರು ಶ್ರೀನಿವಾಸ,  ಕೋಣನಕಟ್ಟೆ ಅಣ್ಣಪ್ಪ, ಹೊಸಕೋಟೆ ಆನಂದಪ್ಪ,ಎಂ.ಮಲ್ಲೇಶ್,ನಿವೃತ್ತ ಶಿಕ್ಷಕ  ಶರಣಪ್ಪ,ಜಾತಪ್ಪ, ಹೆಚ್. ರಾಮಣ್ಣ, ಸಿದ್ದಲಿಂಗನಗೌಡ, ಕೆರೆಗುಡಿಹಳ್ಳಿ ಅಜ್ಜಪ್ಪ, ವೀರೇಶ್, ಪರಮೇಶ್, ಕಲ್ಲಪ್ಪ, ಸಿದ್ದಲಿಂಗಪ್ಪ, ಡಿ. ಬಸವರಾಜಪ್ಪ, ಕೆರೆಗುಡಿಹಳ್ಳಿ ಪೂಜಾರಿ ದುರುಗಪ್ಪ, ನಾಗರಾಜ್,ಭೋವಿ ಕೆಂಗಣ್ಣ, ಆಲೂರು ಶ್ರೀನಿವಾಸ್, ದ್ಯಾವಜ್ಜಿ ಉಚ್ಚಂಗೆಪ್ಪ, ಮ್ಯಾಸಗೇರಿ ವೆಂಕಟೇಶ ಹಾಗೂ ಗ್ರಾಮಸ್ಥರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeರಾಜಕೀಯ

ಬಿಜೆಪಿ ಹಿರಿಯ ನಾಯಕರ ದಂಡು: ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಶ್ರೀರಾಮುಲು, ಕರುಣಾಕರ ರೆಡ್ಡಿ ಭಾಗಿ :

ವಿಜಯನಗರ :  ಜಿಲ್ಲೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ವತಿಯಿಂದ...

Homeರಾಜಕೀಯ

ಪೌರ ಕಾರ್ಮಿಕ ಡಿ.ಲಿಂಗಪ್ಪ ನಿವೃತ್ತಿ

ಹರಪನಹಳ್ಳಿ :  ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಡಿ.ಲಿಂಗಪ್ಪ ಅವರನ್ನು...

Homeರಾಜಕೀಯ

ಹಲುವಾಗಲು ಗ್ರಾಮಸ್ಥರಿಂದ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರಿಗೆ ಮನವಿ :

ಹರಪನಹಳ್ಳಿ: ತಾಲ್ಲೂಕಿನ ಪ್ರಮುಖ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಹಲವಾಗಲು ಗ್ರಾಮದ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ...

Homeರಾಜಕೀಯ

ಹರಪನಹಳ್ಳಿ ಬೆಸ್ಕಾಂ ನೌಕರರ ಪ್ರತಿಭಟನೆ.

ಹರಪನಹಳ್ಳಿ : ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸುತ್ತಿದ್ದೇವೆ ಇಲಾಖೆಯ ಎಲ್ಲಾ ನೌಕರರು ಹಾಗೂ ಸಿಬ್ಬಂದಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.