ವಿಜಯನಗರ : ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಶಿಕ್ಷಣ, ವಸತಿ ಹಾಗೂ ಕುಡಿಯುವ ನೀರಿನ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಒಟ್ಟು ರೂ.8.62 ಕೋಟಿ ವೆಚ್ಚದ ಮೇಲ್ಮಟ್ಟದ ಜಲಸಂಗ್ರಹಗಾರ ನೀರಿನ ಟ್ಯಾಂಕ್ ಹಾಗೂ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಕಾಮಗಾರಿಗಳಿಗೆ ಭಾನುವಾರ ಶಾಸಕ ಹೆಚ್.ಆರ್.ಗವಿಯಪ್ಪ ಭೂಮಿಪೂಜೆ ನೆರವೇರಿಸಿದರು.
ನಗರದ ಜಂಬುನಾಥನಹಳ್ಳಿಯಲ್ಲಿ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ 100 ವಿದ್ಯಾರ್ಥಿನಿಯರ ಸಾಮರ್ಥ್ಯದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ ರೂ.455.17 ಲಕ್ಷ ಅಂದಾಜು ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನೂತನ ವಸತಿ ನಿಲಯ ನಿರ್ಮಾಣದಿಂದ ದೂರದ ಪ್ರದೇಶಗಳಿಂದ ಬಂದು ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ಸುರಕ್ಷಿತ ಹಾಗೂ ಉತ್ತಮ ವಸತಿ ಸೌಲಭ್ಯ ದೊರೆಯಲಿದೆ. ಇದರಿಂದ ಸುಮಾರು 150 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ದೊರಕಲಿದೆ ಎಂದು ಮಾಹಿತಿ ನೀಡಿದರು.
ಇದರ ಜೊತೆಗೆ, ಹೊಸಪೇಟೆ ನಗರದಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ ಕುಡಿಯುವ ನೀರಿನ ಸೌಲಭ್ಯವನ್ನು ಸುಧಾರಿಸಲು ಬಾಲಾಜಿ ನಗರದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಗಾರ ನಿರ್ಮಾಣ ಹಾಗೂ 250 ಮಿ.ಮೀ. ವ್ಯಾಸದ ಡಿ.ಐ. ಪೈಪ್‌ಲೈನ್ ಮೂಲಕ ನೀರು ಪೂರೈಕೆ ಕಲ್ಪಿಸುವ ಕಾಮಗಾರಿಗೂ ರೂ.203.58 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕಾಮಗಾರಿ 1 ರಿಂದ 1.5 ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಆಕಾಶವಾಣಿ ಬಡಾವಣೆಯ ಈಶ್ವರ ನಗರದಲ್ಲೂ ಮತ್ತೊಂದು ಟ್ಯಾಂಕ್ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಚಿವರೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ಸಚಿವ ಕೆ.ಎಸ್. ಬಸವಂತಪ್ಪ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು. ಇದರಿಂದ ನಗರದ ವಿವಿಧ ಬಡಾವಣೆಗಳ ನಿವಾಸಿಗಳಿಗೆ ಕುಡಿಯುವ ನೀರಿನ ಪೂರೈಕೆ ಮತ್ತಷ್ಟು ಸುಧಾರಿಸಲಿದೆ ಎಂದರು.
ಪರಿಶಿಷ್ಟ ಪಂಗಡ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಬಲೀಕರಣಕ್ಕಾಗಿ ರೂ.4.55 ಕೋಟಿ ವೆಚ್ಚದಲ್ಲಿ 14,000 ಚದರ ಅಡಿ ವಿಸ್ತೀರ್ಣದ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ನಿರ್ಮಿಸಲಾಗುತ್ತಿದ್ದು, ಸುಮಾರು 150 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ದೊರೆಯಲಿದೆ. . ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.
- Akashavani Layout
- Amruth Nagarothana Scheme
- Balaji Nagar
- Drinking Water Infrastructure
- Girls Hostel
- Groundbreaking Ceremony
- hosapete
- HR Gaviyappa
- Ishwara Nagar
- Jambunathanahalli
- Karnataka News
- Metric Hostel
- Overhead Water Tank
- ST Hostel
- Tribal Welfare
- VIJAYANAGARA
- ಅಮೃತ ನಗರೋತ್ಥಾನ
- ಆಕಾಶವಾಣಿ ಬಡಾವಣೆ
- ಈಶ್ವರ ನಗರ
- ಕುಡಿಯುವ ನೀರು
- ಜಂಬುನಾಥನಹಳ್ಳಿ
- ಜಲಸಂಗ್ರಹಗಾರ
- ಬಾಲಕಿಯರ ವಸತಿ ನಿಲಯ
- ಬಾಲಾಜಿ ನಗರ
- ಭೂಮಿ ಪೂಜೆ
- ಮೆಟ್ರಿಕ್ ನಂತರದ ವಸತಿ ನಿಲಯ
- ವಿಜಯನಗರ
- ಶಿಕ್ಷಣ ಮತ್ತು ಸೌಕರ್ಯ
- ಹೆಚ್ ಆರ್ ಗವಿಯಪ್ಪ
- ಹೊಸಪೇಟೆ
Leave a comment