ವಿಜಯನಗರ : ಜಿಲ್ಲಾ ಆಸ್ಪತ್ರೆಗೆ ಅಗತ್ಯವಿರುವ ಶೇ.40ರಿಂದ 50ರಷ್ಟು ಉಪಕರಣಗಳು ಈಗಾಗಲೇ ಬಂದಿದ್ದು, ಸೆಪ್ಟೆಂಬರ್ನಲ್ಲಿ ಉಳಿದ ಉಪಕರಣಗಳು ಹಾಗೂ ಫರ್ನಿಚರ್ ಪೂರೈಕೆಯಾಗಲಿವೆ. ಒಟ್ಟು ಹುದ್ದೆಗಳ ಪೈಕಿ ಆರಂಭಿಕವಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ, ಅಕ್ಟೋಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳಿಂದ ಆಸ್ಪತ್ರೆ ಉದ್ಘಾಟನೆ ಮಾಡುವಗುರಿ ಹೊಂದಲಾಗಿದೆ.
ಅಲ್ಲದೆ, ಹೆಚ್ಚುವರಿಯಾಗಿ ರೂ.20 ಕೋಟಿ ವೆಚ್ಚದಲ್ಲಿ 100 ಬೆಡ್ಗಳನ್ನು ಸೇರ್ಪಡೆಗೊಳಿಸಿ 400 ಬೆಡ್ಗಳ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಸಿಟಿ ಆಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆ ಸೇರಿದಂತೆ ಲಭ್ಯವಾಗುವ ಒಟ್ಟು 600ಕ್ಕೂ ಹೆಚ್ಚು ಬೆಡ್ಗಳ ಆಧಾರದ ಮೇಲೆ ಹೊಸಪೇಟೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
- Bed Capacity Expansion
- Chief Minister
- City Hospital
- Healthcare Infrastructure
- hosapete
- Hospital Inauguration
- Karnataka Health Department
- Maternity Hospital
- Medical College Proposal
- VIJAYANAGARA
- Vijayanagara District Hospital
- ಆಸ್ಪತ್ರೆ ಉದ್ಘಾಟನೆ
- ಜಿಲ್ಲಾ ಆಸ್ಪತ್ರೆ
- ಮುಖ್ಯಮಂತ್ರಿ
- ಮೆಡಿಕಲ್ ಕಾಲೇಜು
- ವಿಜಯನಗರ
- ಸಾರ್ವಜನಿಕ ಆರೋಗ್ಯ
- ಹೊಸಪೇಟೆ
Leave a comment