ಹರಪನಹಳ್ಳಿ : ಹಿರಿಯ ಪತ್ರಕರ್ತ ಹಾಗೂ ನ್ಯಾಯವಾದಿ ಕೆ. ಉಚ್ಚೆಂಗೆಪ್ಪ ಅವರ ಮೂರು ದಶಕಗಳ ಮಾಧ್ಯಮ ಹಾಗೂ ಸಮಾಜ ಸೇವೆಯನ್ನು ಗುರುತಿಸಿ, ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು 51ನೇ ವರ್ಷದ ಪ್ರತಿಷ್ಠಿತ ‘ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ’ಗೆ (2026) ಆಯ್ಕೆ ಮಾಡಿದೆ.
ಕಳೆದ 30 ವರ್ಷಗಳಿಂದ ಜನತಾವಾಣಿ, ಹೊಸದಿಗಂತ, ಪ್ರಜಾ ಪ್ರಗತಿ ಹಾಗೂ ವಿಸ್ತಾರ ನ್ಯೂಸ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಅವರು ತಮ್ಮ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆಗೆ ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷರಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಇವರ ಈ ಬಹುಮುಖಿ ಸೇವೆಯನ್ನು ಗುರುತಿಸಿ, 2025ನೇ ಸಾಲಿನ ರಾಜ್ಯ ಸರ್ಕಾರದ ‘ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ ಕೂಡ ಇವರಿಗೆ ಒಲಿದು ಬಂದಿತ್ತು.
ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನಾಗಿರುವ ಕೆ.ಉಚ್ಚೆಂಗೆಪ್ಪ ನವರಿಗೆ ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೆಶಕ ವೈ.ಡಿ.ಅಣ್ಣಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ, ದಾವಣಗೆರೆಯ ಶ್ರೀನಿವಾಸ ದಾಸಕರಿಯಪ್ಪ, ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ. ಬಿ.ವೀರಣ್ಣ, ಪ್ರಗತಿಪರ ಮುಖಂಡ ಕೋಡಿಹಳ್ಳಿ ಭೀಮಪ್ಪ, ಕಾರ್ಯನಿರತ ಪತ್ರಕರ್ತರ ಸಮಿತಿ ಅಧ್ಯಕ್ಷ. ಎ.ನಾಗೇಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರುಗಳಾದ ಡಿ.ರಾಮನಮಲಿ.ಸುಭದ್ರಮ್ಮ ಮಾಡ್ಲಿಗೇರಿ, ಸಾಹಿತಿಗಳಾದ ಇಸ್ಮಾಯಿಲ್ ಎಲಿಗಾರ್ , ನ್ಯಾಯವಾದಿ ಕೋಡಿಹಳ್ಳಿ ಪ್ರಕಾಶ, ಕೋಡಿಹಳ್ಳಿಯ ಡಾ.ಬಸವರಾಜ ಪೂಜಾರ್ ಸೇರಿದಂತೆ ಇತರರು ಶುಭ ಹಾರೈಸಿದ್ದಾರೆ.
Leave a comment