Home ಆರೋಗ್ಯ ಹೆಚ್.ಮಲ್ಲಿಕಾರ್ಜುನಗೆ ‘ಯಶಸ್ವಿ ಯೋಗಿ’ ಪ್ರಶಸ್ತಿ
ಆರೋಗ್ಯ

ಹೆಚ್.ಮಲ್ಲಿಕಾರ್ಜುನಗೆ ‘ಯಶಸ್ವಿ ಯೋಗಿ’ ಪ್ರಶಸ್ತಿ

Share
ಹೆಚ್‌,ಮಲ್ಲಿಕಾರ್ಜುನ ಕನ್ನಡ ಉಪನ್ಯಾಸಕ, ಹರಪನಹಳ್ಳಿ.
Share

ಬೆಂಗಳೂರು : ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು  ಶ್ರಿ ಉಜ್ಜಯನಿ ಜಗದ್ಗುರು ಮರುಳಾರಾಧ್ಯ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಚ್.ಮಲ್ಲಿಕಾರ್ಜುನ ಅವರಿಗೆ ‌ʼಯಶಸ್ವಿ ಯೋಗಿ ಪ್ರಶಸ್ತಿʼ ಲಭಿಸಿದೆ.

ಶನಿವಾರ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮ್ಮೇಳನ ಭವನದಲ್ಲಿ ಜರುಗಿದ ರೋಟರಿಯ ಗ್ಲೋಬಲ್ ಯೋಗ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮತ್ತು ಯೋಗ ವಿಶ್ವವಿದ್ಯಾಲಯ (ಅಮೇರಿಕಾ) ಸಂಯುಕ್ತವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಡಾ.ಬಿ.ಎನ್.ನಾಗೇಂದ್ರ ಪ್ರಸಾದ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಮಚಂದ್ರ ಗುರೂಜಿ, ಡಾ.ಅರುಣ್‌ ಕುಮಾರ, ಡಾ.ತ್ರಿವಿಕ್ರಮ್‌ ಖಾದರ್‌, ಪ್ರಿಯಾಂಕರಾವ್‌, ಬಾಬು ರಾಜೇಂದ್ರ ಪ್ರಸಾದ್‌ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನದ ಹಿನ್ನೆಲೆ : ಯೋಗದ ಮೂಲಕ ಮನುಷ್ಯತ್ವದ ಮೌಲ್ಯಗಳ ಬೆಳವಣೆ, ಸಾರ್ವಜನಿಕ ಆರೋಗ್ಯ ಜಾಗೃತಿ, ವಿದ್ಯಾರ್ಥಿ ಸಬಲೀಕರಣ, ಮತ್ತು ಸಮಾಜ ಸೇವೆ ಕ್ಷೇತ್ರಗಳಲ್ಲಿ ಹಲವು ದಶಕಗಳಿಂದ ಸಲ್ಲಿಸುತ್ತಿರುವ ಅಮೋಘ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಸಂಸ್ಥೆ ಕೊಡಮಾಡುತ್ತದೆ. ಅನೇಕ ವರ್ಷಗಳಿಂದ ಯೋಗ ತರಬೇತಿ ಹಾಗೂ ಸಾರ್ವಜನಿಕ ಆರೋಗ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿರುವುದು ಪ್ರಶಸ್ತಿ ಲಭಿಸಲು ಪ್ರಮುಖ ಕಾರಣವೆಂದು ಆಯೋಜಕರು ನೆರೆದವರಿಗೆ ಮಾಹಿತಿ ನೀಡಿದರು.

ಪ್ರಶಸ್ತಿ ಸ್ವೀಕರಿಸಿ  ಹೆಚ್. ಮಲ್ಲಿಕಾರ್ಜುನ ಮಾತನಾಡಿ, ಯೋಗವು ಕೇವಲ ವ್ಯಾಯಾಮವಲ್ಲ, ಅದು ಜೀವನ ಶೈಲಿ. ಶಾಂತಿ, ಆರೋಗ್ಯ ಮತ್ತು ಮಾನವೀಯತೆಯ ದಾರಿಯೇ ಯೋಗ. ಈ ಪ್ರಶಸ್ತಿ ನನಗೆ ಸೇರಿದ್ದಲ್ಲ, ಇದು ಎಲ್ಲ ಯೋಗಾಭಿಮಾನಿಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಹಿರಿಯ ವಕೀಲರಾದ ಆರ್.ರಾಮನಗೌಡ ಪಾಟಿಲ್‌,  ಡಾ. ಸಂತೋಷ, ಹೇಮಪ್ಪ ಮೋರಗೇರಿ, ಎಂ.ಅಂಬಣ್ಣ, ಎಂ.ವೀರಭದ್ರಾಚಾರ್, ಶಿವಕುಮಾರ್, ಸಪ್ನ ಮಲ್ಲಿಕಾರ್ಜುನ ಇದ್ದರು.

Watch this vedio : [the_ad id=”7088″]

‘ಯಶಸ್ವಿ ಯೋಗಿ ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಾಗಿದೆ. ಇದರಿಂದ ಮಾನವೀಯ ಮೌಲ್ಯಗಳು, ಸಾಮಾಜಿಕ ಜಾಗೃತಿಯತ್ತ ಇನ್ನಷ್ಟು ವಿಶಾಲ ದಾರಿಗಳು ತೆರೆದುಕೊಳ್ಳುತ್ತವೆ’

ಹೆಚ್.ಮಲ್ಲಿಕಾರ್ಜುನ, ಯಶಸ್ವಿ ಯೋಗಿ ಪ್ರಶಸ್ತಿ ಪುರಸ್ಕೃತರು.

Share

Leave a comment

Leave a Reply

Your email address will not be published. Required fields are marked *

Related Articles
Homeಆರೋಗ್ಯ

ಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ

ದಾವಣಗೆರೆ : ದೇಶದ ಪ್ರಮುಖ ಆರೋಗ್ಯ ವಿಮೆ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಟಾರ್ ಹೆಲ್ತ್ ಅಂಡ್ ಅಲೈಡ್...

Homeಆರೋಗ್ಯ

ವಿಶೇಷಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿ – ಇಒ ವೈ.ಎಚ್. ಚಂದ್ರಶೇಖರ

ಹರಪನಹಳ್ಳಿ : ವಿಶೇಷಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಮತ್ತು ಅವರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು...

Homeಆರೋಗ್ಯ

ಒಂಟಿಹಾಳ್ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವೆಂದು ಘೋಷಣೆ : 

ದಾವಣಗೆರೆ : ಯುವಕರು ಯಾವುದೇ ದುಶ್ಚಟ ಒಳಗಾಗದೆ ಇಂತಹ ಕಾರ್ಯಕ್ರಮಕ್ಕೆ ಕೈಜೋಡಿಸಿದರೆ ಪ್ರತಿ ಗ್ರಾಮವನ್ನು ಸಹ...

Homeಆರೋಗ್ಯ

ಪೋಷಕತ್ವ ಯೋಜನೆ ಅರ್ಜಿ ಆಹ್ವಾನ

ವಿಜಯನಗರ (ಹೊಸಪೇಟೆ) : 2026-27ನೇ ಸಾಲಿಗೆ ಮಕ್ಕಳ ಪಾಲನೆ ಮತ್ತು ರಕ್ಷಣೆ ಅನ್ವಯ, ಜಿಲ್ಲೆಯ ವಿವಿಧ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.