ಹಗರಿಬೊಮ್ಮನಹಳ್ಳಿ : ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಜಲಾಶಯದ ಬಳಿ ವಿಷಪೂರಿತ ಕಾಳು ಸೇವಿಸಿ ಅಸ್ವಸ್ಥಗೊಂಡಿದ್ದ ಗೀರುತಲೆ ಹೆಬ್ಬಾತನ್ನು ಗ್ರಾಮದ ಸಲ್ಮಾನ್ ಮತ್ತು ಜಿಲಾನ್ ಅವರು ರಕ್ಷಿಸಿ, ಚಿಕಿತ್ಸೆ ಕೊಡಿಸಿ ಮಾನವೀಯತೆ ಮರೆದಿದ್ದಾರೆ.
ಚಳಿಗಾಲದಲ್ಲಿ ಸಾವಿರಾರು ವಿದೇಶಿ ಪಕ್ಷಿಗಳು ಸಂತಾನಕ್ಕಾಗಿ ವಲಸೆ ಬರುತ್ತವೆ. ಮಾಲವಿ ಜಲಾಶಯದಲ್ಲಿ ಅಸ್ವಸ್ಥಗೊಂಡಿದ್ದ ಗೀರು ತಲೆ ಹೆಬ್ಬಾತನ್ನು ನೋಡಿದ ಸಲ್ಮಾನ್ ಮತ್ತು ಜಿಲಾನ್ ಅವರೂ ಗುರುತಿಸಿ, ಅದರ ಬಗ್ಗೆ ಪಕ್ಷಿ ತಜ್ಞ ಇಟ್ಟಗಿ ವಿಜಯಕುಮಾರ ಅವರಿಗೆ ತಿಳಿಸಿದ್ದಾರೆ, ಆಗ ಅವರು ಪಶು ವೈದ್ಯ ಡಾ.ಅಜಯ್ ಅವರಿಗೆ ಮಾಹಿತಿ ಕೊಟ್ಟು, ಸ್ಥಳಕ್ಕೆ ಕರೆಯಿಸಿಕೊಂಡು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಬಿಎನ್‌ಎಚ್‌ಎಸ್ ಫೇಲೂಶಿಪ್ ವಿದ್ಯಾರ್ಥಿಯನ್ನು ಕರೆಯಿಸಿ ವಿಷಯ ತಿಳಿಸಲಾಯಿತು ನಂತರ ವಿಜಯ್ ಇಟ್ಟಿಗಿ ಮತ್ತು ಆನಂದ್ ಬಾಬು ಇವರೊಂದಿಗೆ ಸೇರಿಕೊಂಡು ಈ ಹಕ್ಕಿಯ ಎತ್ತರ , ಗಾತ್ರ, ತೂಕವನ್ನು ಬರೆದು ಕೊಂಡು ಅರಣ್ಯ ಇಲಾಖೆಗೆ ಇದರ ಮಾಹಿತಿಯನ್ನು ನೀಡಿ. ಪಕ್ಷಿಸಂರಕ್ಷಣಾ ಮೀಸಲಿಗೆ ಕಳಿಸಿಕೊಡಲಾಯಿತು.

ತಪ್ಪದೇ ವೀಕ್ಷಿಸಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : [the_ad id=”7088″]
Bar-headed goose ಪಟ್ಟೆತಲೆಯ ಹೆಬ್ಬಾತು ಅಥವಾ ಗೀರುತಲೆಯ ಹೆಬ್ಬಾತು ಎಂದು ಈ ಹಕ್ಕಿಯನ್ನು ಕರೆಯುತ್ತಾರೆ .ಮಂಗೋಲಿಯದಿಂದ ಮಾಲವಿ ,ತುಂಗಾಭದ್ರ ಹಿನ್ನೀರು ಪ್ರದೇಶ,ಚಿಂತ್ರಪಳ್ಳಿ ಕೆರೆಯು ಸೇರಿದಂತೆ ತಾಲ್ಲೂಕಿನ ಸುತ್ತಮುತ್ತಲಿನ ಕೆರೆಯ ಪ್ರದೇಶಕ್ಕೆ ಚಳಿಗಾಲದಲ್ಲಿ ವಲಸೆ ಬರುತ್ತದೆ. ಪ್ರಪಂಚದಲ್ಲಿ ಅತ್ಯಂತ ಎತ್ತರ ಪರ್ವತ ಗೌರಿಶಂಕರ ಶಿಖರವನ್ನು ದಾಟಿಕೊಂಡು ನಮ್ಮಲಿಗೆ ಚಳಿಗಾಲದಲ್ಲಿ ವಲಸೆ ಬರುತ್ತದೆ ಎಂದು ಪಕ್ಷಿತಜ್ಞ ಇಟಗಿ ವಿಜಯಕುಮಾರ ಅವರು ಮಾಹಿತಿ ನೀಡಿದರು.
Leave a comment