ಹರಪನಹಳ್ಳಿ : ವಾಲ್ಮೀಕಿ ವಂಶಸ್ಥರು ದೈರ್ಯ, ಸಾಹಸ ಹಾಗೂ ನಿಷ್ಠೆಗೆ ಹೆಸರುವಾಸಿಯಾಗಿದ್ದಾರೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ತಾಲ್ಲೂಕಿನ ಮತ್ರಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿ ಹೆಸರಿಗೆ ದೊಡ್ಡಶಕ್ತಿಯಿದೆ. ಅವರು ಬರೆದ ರಾಮಾಯಣ ಮತ್ತು ಮಹಾಭಾರತ ಪವಿತ್ರ ಗ್ರಂಥಗಳಾಗಿದ್ದು, ಪ್ರಪಂಚಕ್ಕೆ ಮಾದರಿಯಾಗಿದೆ ಎಂದರು.
ರಾಜ್ಯ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಕೆ.ಉಚ್ಚೆಂಗೆಪ್ಪ ಮಾತನಾಡಿ, ವಾಲ್ಮೀಕಿ ಕೇವಲ ಆದಕವಿ ಮಾತ್ರವಲ್ಲ, ಪಂಡಿತ, ಶಿಕ್ಷಣಪ್ರೇಮಿ ಮತ್ತು ಆದರ್ಶ ಶಿಕ್ಷಕರಾಗಿದ್ದರು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಎಸ್.ರೇವಣಸಿದ್ದಪ್ಪ ಮಾತನಾಡಿ, ಜಯಂತಿಗಳು ಕೇವಲ ಜಾತಿಗಳಿಗೆ ಸೀಮಿತವಾಗದೆ, ಎಲ್ಲ ವರ್ಗದವರೂ ಒಂದುಗೂಡಿ ಮಹನೀಯರ ಜಯಂತಿ ಆಚರಿಸಿದರೆ ಮಾದರಿ ಆಗುತ್ತದೆ ಎಂದು ತಿಳಿಸಿದರು.
ಮುಖಂಡ ತಳವಾರ ಬೆಟ್ಟನಗೌಡ. ವಕೀಲ ಎಸ್.ಎಂ. ನಾಗರಾಜ, ವಿ.ಎಸ್.ಎಸ್.ಎನ್ ನಿರ್ದೆಶಕ ಸಣ್ಣ ನಿಗಪ್ಪ, ಕೊಟ್ರಗೌಡ, ಕೆ.ಪ್ರಕಾಶ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಣ್ಣ ಹೊನ್ನಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮತ್ತಿಹಳ್ಳಿ ಶಿವಣ್ಣ, ತಾಲ್ಲೂಕು ಮಾಜಿ ಅಧ್ಯಕ್ಷ ಕಿತ್ತೂರು ಓಬಪ್ಪ, ಡಿ.ಬಸವಂತಪ್, ನಾಗರಾಜ ರಾಂಪುರ ಇದ್ದರು.
Leave a comment