Home ಶಿಕ್ಷಣ ಅರಸೀಕೆರೆ : ಶಾಲಾ ಮಕ್ಕಳಿಗೆ ಶೂ ಸಾಕ್ಸ್
ಶಿಕ್ಷಣ

ಅರಸೀಕೆರೆ : ಶಾಲಾ ಮಕ್ಕಳಿಗೆ ಶೂ ಸಾಕ್ಸ್

Share
LKG,UKG,HARAPANAHALLI,ARSIKERE,SHOE
ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಪೂರ್ವಪ್ರಾಥಮಿಕ ಶಾಲಾ ಮಕ್ಕಳಿಗೆ ಸಾಕ್ಸ್ ವಿತರಿಸಲಾಯಿತು.
Share

ಅರಸೀಕೆರೆ (ಹರಪನಹಳ್ಳಿ ) : ತಾಲ್ಲೂಕಿನ ಅರಸೀಕೆರೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ 50 ಜೊತೆ ಶೂ, ಸಾಕ್ಸ್ ವಿತರಿಸಿದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಿಕ್ಷಕರ ಸಹಕಾರದಿಂದ ಎಲ್.ಕೆ.ಜಿ. ಮತ್ತು ಯುಕೆಜಿ ಮಕ್ಕಳಿಗೆ ಶೂ, ಸಾಕ್ಸ್, ವಿತರಣೆ ಮಾಡಿದರು.  ಮುಖ್ಯ ಶಿಕ್ಷಕ ಎಂ.ಮಾಲತೇಶ್ ಪಾಟೀಲ್ ಮಾತನಾಡಿ, ಒಂದನೇ ತರಗತಿಯಿಂದ 8ನೇ ತರಗತಿವರೆಗಿನ ಚಿಣ್ಣರಿಗೆ ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್, ಮೊಟ್ಟೆ, ಬಾಳೆಹಣ್ಣು, ಬಿಸಿಯೂಟ, ರಾಗಿ ಮಾಲ್ಟ್ ಸರ್ಕಾರವೇ ನೀಡುತ್ತಿದೆ.

ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಹೆಚ್ಚಿನ ಸೌಕರ್ಯಗಳಿವೆ. ಅವುಗಳನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು. ಎಸ್‍ಡಿಎಂಸಿ ಅಧ್ಯಕ್ಷ ಖಾಜಾ ಹುಸೇನ್ ಮಾತನಾಡಿ, ಎಲ್ಲ ಮಕ್ಕಳಿಗೂ ತಾರತಮ್ಯ ಮಾಡದೇ ಸವಲತ್ತು ತಲುಪಿಸಲಾಗಿದೆ ಎಂದು ತಿಳಿಸಿದರು. ಶಾಲಾಭಿವೃದ್ದಿ ಸಮಿತಿ ಸದಸ್ಯ ನಿಂಗಪ್ಪ, ಹಸೇನ್ ಸಾಹೇಬ್, ಸಹ ಶಿಕ್ಷಕರಾದ ಅಡ್ಡಿ ಕೆಂಪಣ್ಣ, ಎನ್.ರೇಣುಕಾ, ಬಂದಮ್ಮ, ಪರಶುರಾಮ್, ಪೂರ್ಣಿಮಾ, ರಾಜಶೇಖರ, ಈಡಿಗರ ಅಜ್ಜಯ್ಯ, ಸುನಂದಾ, ಪವನಕುಮಾರಿ, ರೇಖಾದೇವಿ, ಗಿರಿಜಾ ಇದ್ದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಶಿಕ್ಷಣ

ಬಿ.ಐ.ಇ.ಟಿ. ಯಲ್ಲಿ ನೈಲಿಟ್‌ನ 90 ಗಂಟೆಗಳ ‘ಚಿಪ್‌ಕ್ರಾಫ್ಟ್’ ಸೆಮಿಕಂಡಕ್ಟರ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ದಾವಣಗೆರೆ : ಬಾಪೂಜಿ ಇಂಜಿನಿಯರಿಂಗ್  ಮತ್ತು ತಾಂತ್ರಿಕ ಮಹಾವಿದ್ಯಾಲಯ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್...

Homeಶಿಕ್ಷಣ

ವಿದ್ಯಾರ್ಥಿ ದೆಸೆಯಲ್ಲೇ ದೊಡ್ಡಮಟ್ಟದ ಸಾಧನೆಯ ಗುರಿ ಇರಲಿ

ಹರಪನಹಳ್ಳಿ: ಶಿಕ್ಷಣ ಪಡೆಯುವಾಗಲೇ ವಿದ್ಯಾರ್ಥಿಗಳು ದೊಡ್ಡಮಟ್ಟದ ಸಾಧನೆಯ ಗುರಿ ಇಟ್ಟುಕೊಳ್ಳಬೇಕು ಎಂದು ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಪಿ. ಮಹಾಬಲೇಶ್ವರಗೌಡ್ರು ಕಿವಿಮಾತು ಹೇಳಿದರು. ನಗರದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಎಚ್.ಪಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 2026 -27ನೇ...

Homeಶಿಕ್ಷಣ

ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026-27 ನೇ ಸಾಲಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ದೂರ ಶಿಕ್ಷಣ ಮಾದರಿ...

Homeಶಿಕ್ಷಣ

ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ :

ದಾವಣಗೆರೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ (ಸಾಮಾನ್ಯ ಪದವಿ ಮಟ್ಟದ ಕೋರ್ಸಿನವಿದ್ಯಾರ್ಥಿಗಳಿಗೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.