ವಿಜಯನಗರ: ಪ್ರತಿಯೊಂದು ಮಗುವಿಗೂ ಸುರಕ್ಷಿತ ವಾತಾವರಣ, ಶಿಕ್ಷಣ ಹಾಗೂ ಗೌರವಯುತ ಜೀವನ ದೊರೆಯಬೇಕು. ಮಕ್ಕಳು ದೌರ್ಜನ್ಯ ಅಥವಾ ಶೋಷಣೆಗೆ ಒಳಗಾದರೆ ಭಯಪಡದೆ ಸಂಬAಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸಿವಿಲ್ ನ್ಯಾಯಾಧೀಶರಾದ ಶೃತಿ ಅವರು ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಇಂದು ನಗರದ ಜೆಸ್ಸಿಸ್ ಪ್ರೌಢಶಾಲೆಯಲ್ಲಿ ಸುರಕ್ಷಿತ ಬಾಲ್ಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಿಲಿಟರಿ ಕಮಿಟಿಯ ಮಾನಿಟರಿಂಗ್ ಸದಸ್ಯರಾದ ಜಂಬಯ್ಯ ಅವರು ಪೋಕ್ಸೋ ಕಾಯ್ದೆಯಡಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಹಾಗೂ ಕಾನೂನು ಕ್ರಮಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಮಿಷನ್ ಶಕ್ತಿ ಸಂಯೋಜಕಿ ವಿದ್ಯಾ ಅವರು ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕುರಿತು ಅರಿವು ಮೂಡಿಸಿ, ಸಂಕಷ್ಟದಲ್ಲಿರುವ ಮಕ್ಕಳು ಮಕ್ಕಳ ಸಹಾಯವಾಣಿ 1098 ಹಾಗೂ ತುರ್ತು ಸಹಾಯವಾಣಿ 112 ಸಂಪರ್ಕಿಸುವAತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಗ್ರ ಶಿಕ್ಷಣ ಇಲಾಖೆಯ ಅಬ್ದುಲ್ , ಟಿಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿಗಳು, ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಬಿ. ಲಿಂಗಪ್ಪ, ಸೀತಾ ದಾಬೇರಿ, ಅಕ್ಕ ಪಡೆ ತಂಡದ ಸದಸ್ಯರು, ವಿಜಯ ಸುರಕ್ಷಾ ಪಡೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Leave a comment