Home ಕ್ಷಯರೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ : ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ ಕರೆ
Homeಸುದ್ದಿಗಳು

ಕ್ಷಯರೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ : ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ ಕರೆ

Share
Share

ವಿಜಯನಗರ : ಸಮಾಜದಲ್ಲಿ ಕ್ಷಯರೋಗಕ್ಕೆ ತುತ್ತಾಗಿರುವ ಹಾಗೂ ಆಸ್ಪತ್ರೆಗೆ ಬಾರದೆ ಇರುವ ಕ್ಷಯರೋಗಿಗಳನ್ನು ಮನೆಮನೆಗೆ ತೆರಳಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸುವ ಮೂಲಕ ಕ್ಷಯರೋಗ ನಿರ್ಮೂಲನೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ ಹೇಳಿದರು. ನಗರದ ಆಕಾಶವಾಣಿ ವ್ಯಾಪ್ತಿಯ 35ನೇ ವಾರ್ಡ್ ನಲ್ಲಿ ಬುಧವಾರ ತಾಲೂಕು ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಕ್ಷಯರೋಗದ ಬಗ್ಗೆ ಜಾಗೃತಿ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಳೆ ಕ್ಷಯರೋಗಿಗಳು, ಕ್ಷಯರೋಗ ಸಂಪರ್ಕದಲ್ಲಿ ಇರುವವರು, ಮೆದುಮೇಹ ಇರುವವರು, ಧೂಮಪಾನ ಮತ್ತು ಮಧ್ಯಪಾನ ಮಾಡುವವರು, ಕ್ಯಾನ್ಸರ್, ದೀರ್ಘಕಾಲ ಕಾಯಿಲೆ ಇರುವವರು ಹಾಗೂ ಕ್ಷಯರೋಗ ಲಕ್ಷಣ ಇರುವವರು ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಬೇಗ ಗುಣಮುಖರಾಗಬಹುದು ಎಂದು ತಿಳಿಸಿದ ಅವರು, ಎರಡು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಕಫದಲ್ಲಿ ರಕ್ತ ಬೀಳುವುದು, ದೇಹದ ತೂಕ ಕಡಿಮೆಯಾಗುವುದು ಹಾಗೂ ಕಂಕುಳಿನಲ್ಲಿ ಗಡ್ಡೆ ಕಾಣಿಸಿಕೊಳ್ಳುವಂತಹ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ವಹಿಸದೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಿರಿ ಎಂದು ಮನವಿ ಮಾಡಿದರು.

ಕ್ಷಯರೋಗವು ಸೋಂಕಿನ ಮೂಲಕ ಹರಡುವ ಕಾಯಿಲೆಯಾಗಿದ್ದು, ಕ್ಷಯರೋಗದಿಂದ ಬಳಲುತ್ತಿರುವವರು ಕೆಮ್ಮುವಾಗ ಅಥವಾ ಸೀನುವಾಗ ಹೊರಬರುವ ಸೂಕ್ಷ್ಮಾಣುಗಳು ಗಾಳಿಯ ಮೂಲಕ ಇತರರ ದೇಹಕ್ಕೆ ಸೇರಿ ಸೋಂಕು ಉಂಟುಮಾಡಬಹುದು. ಆದ್ದರಿಂದ ರೋಗದ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಕ್ಷಯರೋಗ ಮೇಲ್ವಿಚಾರಕ ಕಾಸಿಂ ಸಾಬ್, ಎಚ್ ಐ ಓ ಯಶೋದಾ, ಪಿ ಎಚ್ ಸಿ ಓ ಉಮಾ, ಗುಲ್ನಾಜ್ ಸೇರಿದಂತೆ ಆಶಾ ಕಾರ್ಯಕರ್ತರು ಹಾಗೂ ವಾರ್ಡಿನ ಮುಖಂಡರು ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ನ.6 ರಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ಜಿಲ್ಲಾ ಪ್ರವಾಸ

ವಿಜಯನಗರ : ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ನವೆಂಬರ್ 6 ರಂದು ಮಧ್ಯಾಹ್ನ...

Homeಸುದ್ದಿಗಳು

36 ನೂತನ ಪೊಲೀಸ್ ವಸತಿ ಗೃಹಗಳ ಲೋಕಾರ್ಪಣೆ ಮಾಡಿದ ಸಚಿವ ಕೆ.ಎಸ್. ಬಸವಂತಪ್ಪ

ವಿಜಯನಗರ : ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಯ ವಸತಿ ಸಮಸ್ಯೆಗೆ ಮುಕ್ತಿ...

Homeಸುದ್ದಿಗಳು

ಬಂಜಾರ ಸಮುದಾಯದ ಸಾಮಾಜಿಕ ಜಾಗೃತಿ ಸಭೆ – ವರದಕ್ಷಿಣೆ ಮುಕ್ತ ತಾಂಡಾಗಳಿಗೆ ಮುಖಂಡರ ಶ್ರಮ

ಹರಪನಹಳ್ಳಿ: ತಾಲೂಕಿನ ಬಂಜಾರರು ವರದಕ್ಷಿಣೆ ಹಠಾವೋ-ತಾಂಡ ಬಚಾವೋ ಧ್ಯೇಯಗೆ ಒಗ್ಗೂಡಲು ಸಮುದಾಯದ ಮುಖಂಡರು ಕರೆ ನೀಡಿದರು. ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ...

Homeಸುದ್ದಿಗಳು

ಸಚಿವ ಕೆ.ಎಸ್. ಬಸವಂತಪ್ಪ ಜಿಲ್ಲಾ ಪ್ರವಾಸ

ವಿಜಯನಗರ  : ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.