ಹರಪನಹಳ್ಳಿ: ತಾಲ್ಲೂಕಿನ ಹಲುವಾಗಲು ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಪ್ರಸಕ್ತ 2026-27ನೇ ಶೈಕ್ಷಣಿಕ ಸಾಲಿನಿಂದ ವಿಜ್ಞಾನ ಪದವಿ ಪೂರ್ವ (ಪಿಯುಸಿ) ಕಾಲೇಜಾಗಿ ಉನ್ನತೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೂತನವಾಗಿ ಆರಂಭವಾಗುತ್ತಿರುವ ಪ್ರಥಮ ಪಿಯುಸಿ ತರಗತಿಗಳಿಗೆ ಬೋಧಿಸಲು ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಲಭ್ಯವಿರುವ ಹುದ್ದೆಗಳು ಹಾಗೂ ವಿಷಯಗಳು : ಕಾಲೇಜಿನಲ್ಲಿ ಈ ಬಾರಿ ಪಿಸಿಎಂಬಿ (PCMB) ಹಾಗೂ ಪಿಸಿಎಂಸಿ (PCMC) ವಿಜ್ಞಾನ ಸಂಯೋಜನೆಗಳ ತರಗತಿಗಳು ಪ್ರಾರಂಭವಾಗುತ್ತಿದ್ದು, ಈ ಕೆಳಗಿನ ವಿಷಯಗಳಿಗೆ ಅತಿಥಿ ಉಪನ್ಯಾಸಕರ ಅಗತ್ಯವಿದೆ:
ಭಾಷಾ ವಿಷಯಗಳು:ಕನ್ನಡ, ಇಂಗ್ಲಿಷ್, ವಿಜ್ಞಾನ ಹಾಗೂ ಇತರೆ ವಿಷಯಗಳು: ಗಣಿತ, ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry), ಜೀವಶಾಸ್ತ್ರ (Biology) ಮತ್ತು ಕಂಪ್ಯೂಟರ್ ಸೈನ್ಸ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:02-08-2026
ವಿಶೇಷ ಸೂಚನೆ: ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲರು ಕೋರಿದ್ದಾರೆ. ಸಂಪರ್ಕ ಸಂಖ್ಯೆಗಳು: 9741454101, 9731418928, 7892372872.
- Education News Karnataka
- Guest Faculty Vacancy
- Guest Lecturer Recruitment
- Haluvagalu
- HARAPANAHALLI NEWS
- Karnataka Govt College Recruitment
- Morarji Desai Residential College
- PCMB PCMC Jobs
- Science PU College
- Vijayanagara Jobs
- ಅತಿಥಿ ಉಪನ್ಯಾಸಕರ ನೇಮಕಾತಿ
- ಅರ್ಜಿ ಆಹ್ವಾನ
- ದಾವಣಗೆರೆ ಸುದ್ದಿ
- ಪಿಯು ಕಾಲೇಜು ಉದ್ಯೋಗಗಳು
- ಪ್ರಥಮ ಪಿಯುಸಿ ಪ್ರವೇಶ
- ಮೊರಾರ್ಜಿ ದೇಸಾಯಿ ವಸತಿ ಶಾಲೆ
- ವಿಜಯನಗರ ಸುದ್ದಿ
- ವಿಜ್ಞಾನ ಪಿಯುಸಿ ಕಾಲೇಜು
- ಸರಕಾರಿ ಉದ್ಯೋಗ
- ಹರಪನಹಳ್ಳಿ
- ಹಲುವಾಗಲು
Leave a comment