Home ರಾಜಕೀಯ ಸಚಿವ ಸಂತೋಷ ಲಾಡ್-ಕೋಡಿಹಳ್ಳಿ ಭೀಮಪ್ಪ ಚರ್ಚೆ
ರಾಜಕೀಯ

ಸಚಿವ ಸಂತೋಷ ಲಾಡ್-ಕೋಡಿಹಳ್ಳಿ ಭೀಮಪ್ಪ ಚರ್ಚೆ

Share
Santoshlad, labourminister,kodihalli bheemappa,samata resort, harapanahalli
Share

ಹರಪನಹಳ್ಳಿ : ವಿಜಯನಗರ ಜಿಲ್ಲೆ ಹರಪನಹಳ್ಳಿ ಸಮತಾ ರೆಸಾರ್ಟ್‍ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಆಗಮಿಸಿ ಕಾಂಗ್ರೆಸ್ ಪಕ್ಷದ ಮುಖಂಡ ಕೋಡಿಹಳ್ಳಿ ಭೀಮಪ್ಪ ಅವರೊಂದಿಗೆ ಭಾನುವಾರ ಚರ್ಚೆ ನಡೆಸಿದರು.

ಕಾರ್ಮಿಕ ಇಲಾಖೆಯ ಮೂಲಕ ತಂದಿರುವ ಯೋಜನೆಗಳು, ಕಾರ್ಮಿಕರ ಹಿತಕಾಯುವ ಕಾರ್ಯಕ್ರಮಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದರು. ಕಾರ್ಮಿಕರಿಗೆ ಗುರುತಿನ ಚೀಟಿ ನೊಂದಾಣಿ ಮಾಡಿಸುವುದು, ಸರ್ಕಾರದ ಸವಲತ್ತುಗಳು ಸಕಾಲಕ್ಕೆ ಮತ್ತು ಅರ್ಹರಿಗೆ ತಲುಪಿಸಲು ಕಾಳಜಿವಹಿಸಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಲು ಹೇಳಿದರು ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ.

ಕಾಂಗ್ರೆಸ್ ಪಕ್ಷದ ಸಂಘಟನೆ, ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಮಹತ್ವಕಾಂಕ್ಷೆ ಯೋಜನೆಗಳು ಬಡವರಿಗೆ, ನಿರ್ಗತಿಕರಿಗೆ, ಮಧ್ಯಮ ವರ್ಗದವರಿಗೆ ವರದಾನ ಆಗಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಅವುಗಳ ಬಗ್ಗೆ ಹೆಚ್ಚು ಪ್ರಚುರ ಪಡಿಸಲು ಕಾಂಗ್ರೆಸ್‍ ಕಾರ್ಯಕರ್ತರ ಪಡೆ ಸನ್ನದ್ಧರಾಗಿರಬೇಕು. ವಿರೋಧ ಪಕ್ಷದವರು ಸುಳ್ಳು ಹೇಳಿ, ಜನರನ್ನು ದಿಕ್ಕು ತಪ್ಪಿಸುತ್ತಾರೆ. ಇದರ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.

‘ಕಾರ್ಮಿಕ ಜಾಗೃತಿ ಅಭಿಯಾನಕ್ಕೆ ಸೂಚನೆ’

ಸಚಿವರಾದ ಸಂತೋಷ್ ಲಾಡ್ ಅವರು ʼಜಿಲ್ಲೆಯಲ್ಲಿ ಆಗಿರುವ ಕಾರ್ಮಿಕ ಕಾರ್ಡ್‍ ಗಳ ನೊಂದಣಿ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರತಿ ತಾಲ್ಲೂಕಿನಲ್ಲೂ ಕಾರ್ಮಿಕರ ನೋಂದಣಿ ಕಾರ್ಡ್ ವಿತರಣೆ ಹಾಗೂ ಜಾಗೃತಿ ಅಭಿಯಾನ ಮಾಡಬೇಕುʼ ಎಂದು ಅಲ್ಲಿಗೆ ಬಂದಿದ್ದ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಸೂರಪ್ಪ ಹಾಗೂ ತಾಲ್ಲೂಕು ಕಾರ್ಮಿಕ ನಿರೀಕ್ಷಕ ಪ್ರಕಾಶ್ ಗೌಡ ಅವರಿಗೆ ಸೂಚನೆ ನೀಡಿದರು.

ಪರಿಸರ ಸಂರಕ್ಷಿಸಿ, ಪಕ್ಷಿ ಸಂಕುಲ  ಉಳಿಸುವ ಪೊಟೊಗಳನ್ನು ಸಮತಾ ರೆಸಾರ್ಟ್ ಬಳಗ ಸಚಿವರಿಗೆ ನೀಡಿತು. ಇದೇ ವೇಳೆ ಆಗಮಿಸಿದ್ದ ಬಳ್ಳಾರಿ ಸಂಸದ ಈ.ತುಕರಾಂ, ಹೊಸಪೇಟೆ ಶಾಸಕ ಗವಿಯಪ್ಪ ಅವರನ್ನು ಸನ್ಮಾನಿಸಿತು. ಕಾಂಗ್ರೆಸ್ ಪಕ್ಷದ ಮುಖಂಡ ಕೋಡಿಹಳ್ಳಿ ಭೀಮಪ್ಪ, ಕೆಪಿಸಿಸಿ ರಾಜ್ಯ ಸಂಯೋಜಕ ಜಯಪ್ರಕಾಶ್ ಸಾರಥಿ, ಹರಪನಹಳ್ಳಿ ವಿದಾನಸಭೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅರಸೀಕೆರೆ ಎನ್.ಕೊಟ್ರೇಶ್, ಮಜ್ದೂರ್ ಕಾಂಗ್ರೆಸ್ ವಿಜಯನಗರ ಜಿಲ್ಲಾಧ್ಯಕ್ಷ ಎಲ್.ಪ್ರಕಾಶ್ ನಾಯ್ಕ, ಮುಖಂಡ ಶಮಿವುಲ್ಲಾ, ಮಾಧ್ಯಮ ಕಾರ್ಯದರ್ಶಿ ಇರ್ಫಾನ್ ಮುದಗಲ್, ಜೀಷಾನ್, ಶ್ರೀಕಾಂತ ಯಾದವ್, ಚೌಡಪ್ಪ, ಹುಲಿರಾಜ್, ವಲೀ, ಮೆಹಬೂಬ್ ಭಾಷಾ, ಜಬಿವುಲ್ಲಾ, ಸುನೀಲ್, ಕುಮಾರ ಸೇರಿದಂತೆ ಅನೇಕರಿದ್ದರು.

ಸೆಲ್ಫಿಗಾಗಿ ನಾ ಮುಂದು, ತಾ ಮುಂದು

ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಕಾರ್ಮಿಕರು ಸಚಿವ ಸಂತೋಷ್‌ ಲಾಡ್‌ ಅವರ ಜೊತೆ ‘ನಾ ಮುಂದು, ತಾ ಮುಂದುʼ  ಎಂದು ಸೆಲ್ಫಿ ತೆಗೆದುಕೊಂಡಿದ್ದು ಗಮನ ಸೆಳೆಯಿತು.

Share

Leave a comment

Leave a Reply

Your email address will not be published. Required fields are marked *

Related Articles
Homeರಾಜಕೀಯ

ಬಿಜೆಪಿ ಹಿರಿಯ ನಾಯಕರ ದಂಡು: ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಶ್ರೀರಾಮುಲು, ಕರುಣಾಕರ ರೆಡ್ಡಿ ಭಾಗಿ :

ವಿಜಯನಗರ :  ಜಿಲ್ಲೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ವತಿಯಿಂದ...

Homeರಾಜಕೀಯ

ಪೌರ ಕಾರ್ಮಿಕ ಡಿ.ಲಿಂಗಪ್ಪ ನಿವೃತ್ತಿ

ಹರಪನಹಳ್ಳಿ :  ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಡಿ.ಲಿಂಗಪ್ಪ ಅವರನ್ನು...

Homeರಾಜಕೀಯ

ಹಲುವಾಗಲು ಗ್ರಾಮಸ್ಥರಿಂದ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರಿಗೆ ಮನವಿ :

ಹರಪನಹಳ್ಳಿ: ತಾಲ್ಲೂಕಿನ ಪ್ರಮುಖ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಹಲವಾಗಲು ಗ್ರಾಮದ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ...

Homeರಾಜಕೀಯ

ಹರಪನಹಳ್ಳಿ ಬೆಸ್ಕಾಂ ನೌಕರರ ಪ್ರತಿಭಟನೆ.

ಹರಪನಹಳ್ಳಿ : ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸುತ್ತಿದ್ದೇವೆ ಇಲಾಖೆಯ ಎಲ್ಲಾ ನೌಕರರು ಹಾಗೂ ಸಿಬ್ಬಂದಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.