Home ಸುದ್ದಿಗಳು ಹರಪನಹಳ್ಳಿಯಲ್ಲಿ ಬೀದಿ ದೀಪ ನಿರ್ಲಕ್ಷ್ಯ | ಅಕ್ರಮ ನಳ ಬಂದ್ ಗೆ ಒತ್ತಾಯ | 43 ಮಳಿಗೆ ಹರಾಜು ಶೀಘ್ರ!
ಸುದ್ದಿಗಳು

ಹರಪನಹಳ್ಳಿಯಲ್ಲಿ ಬೀದಿ ದೀಪ ನಿರ್ಲಕ್ಷ್ಯ | ಅಕ್ರಮ ನಳ ಬಂದ್ ಗೆ ಒತ್ತಾಯ | 43 ಮಳಿಗೆ ಹರಾಜು ಶೀಘ್ರ!

Share
Harapanahalli Purasabe meeting sirisuddi
Share

ಹರಪನಹಳ್ಳಿ : ಇಲ್ಲಿಯ ಪುರಸಭೆ ಸಭಾಂಗಣದಲ್ಲಿ ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಯಿತು.

ಅಧ್ಯಕ್ಷೆ ಫಾತೀಮಾಬಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸದಸ್ಯ ಲಾಟಿ ದಾದಾಪೀರ ಮಾತನಾಡಿ, ಬೀದಿ ದೀಪ ನಿರ್ವಹಣೆ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ದೂರಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಎಂ.ವಿ.ಅಂಜಿನಪ್ಪ ಅರಸೀಕೆರೆ ರಸ್ತೆಯಲ್ಲಿ ಬೀದಿ ದೀಪವಿಲ್ಲದೇ ತೊಂದರೆಯಾಗಿದೆ ಎಂದರು.

ಶಾಸಕರ‌ ಅನುದಾನದಡಿ 3500 ದೀಪ ಖರೀದಿಸಿ ಕೊಡುವುದಾಗಿ ತಿಳಿಸಿದ್ದಾರೆ, ಹೈಮಾಸ್ಟ್ ದೀಪದ‌ ವ್ಯವಸ್ಥೆ ಸಹ ಕಲ್ಪಿಸಲು ಸಿದ್ಧರಿದ್ದಾರೆ. ಹಾಗಾಗಿ ಬೀದಿ ದೀಪ ನಿರ್ವಹಣೆ ಮಾಡುವ ಗುತ್ತಿಗೆದಾರರು, ಸಾರ್ವಜನಿಕ ಸ‍್ಥಳದಲ್ಲಿ ಬೆಳಕಿನ ವ್ಯವಸ್ಥೆ ಮಾಡಲು ನಿರ್ಲಕ್ಷ್ಯ ಮಾಡಬಾರದು ಎಂದು ಹೇಳಿದರು. ಸದಸ್ಯ ಅಬ್ದುಲ್ ರೆಹಮಾನ್, ಅಗತ್ಯವಿರುವ ಕಡೆ ಹೈಕಮಾಸ್ಟ್ ತುರ್ತಾಗಿ ದುರಸ್ಥಿಪಡಿಸಿ ಎಂದು ಸಲಹೆ ನೀಡಿದರು.

ಸದಸ್ಯ ಎಂ.ವಿ.ಅಂಜಿನಪ್ಪ ಮಾತನಾಡಿ, ಪುರಸಭೆ ವಾಹನಗಳು ಸಾಕಷ್ಟು ಡ್ಯಾಮೆಜ್ ಆಗುತ್ತವೆ, ಅವುಗಳಿಗೆ ವಿಮಾ ಸೌಲಭ್ಯ ಪಡೆದು ಏಕೆ ದುರಸ್ಥಿ ಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಸದಸ್ಯ ದಾದಾಪೀರ, ಕುಡಿಯುವ ನೀರಿನ ಸಮಸ್ಯೆ ಇದೆ, ಪೂರೈಕೆಯಲ್ಲಿ ಅವ್ಯವಸ್ಥೆಯಾಗಿದೆ ಎಂದು ತಿಳಿಸಿದರು.
ಅಕ್ರಮ ನಳ ಸಂಪರ್ಕ ಕೊಡುತ್ತಿದ್ದಾರೆ, ಶೀಘ್ರ ಅಕ್ರಮ ನಳ ಬಂದ್ ಮಾಡಿ ಇಲ್ಲವೇ ಸಕ್ರಮಗೊಳಿಸಿ ಎಂದು ಸದಸ್ಯರಾದ ಇಜಂತಕರ ಮಂಜುನಾಥ್, ಉದ್ದಾರ ಗಣೇಶ, ಜಾವಿದ್ ಒತ್ತಾಯಿಸಿದರು.
ಸದಸ್ಯ ಹರಾಳು ಅಶೋಕ, 43 ಮಳಿಗೆ ಹರಾಜು ಮಾಡುವ ತೀರ್ಮಾನ ಮಾಡಿತ್ತು, ವಿಳಂಬವಾಗಿದ್ದು ಏಕೆ ಎಂದರು. ಶೀಘ್ರ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ರೇಣುಕಾದೇಸಾಯಿ ಸಭೆ ಗಮನಕ್ಕೆ ತಂದರು.

ಸರ್ವೆ ನಂಬರ್ 163/7, ಸರ್ವೆ ನಂಬರ್ 63ರಲ್ಲಿ ತಾತ್ಕಾಲಿಕ ವಸತಿ ವಿನ್ಯಾಸಕ್ಕೆ ಅಂತಿಮ ಅನುಮೋದನೆ ಮತ್ತು ಮನೆ ನಂಬರ್ ವಿತರಣೆಗೆ ಸಭೆ ಅನುಮತಿಸಿತು. ಸಹಾಯಕ ಆಯುಕ್ತರ ವಸತಿ ನಿಲಯದ ಬಳಿ ಶಿಥಿಲಗೊಂಡಿರುವ ಮೇಲ್ಮಟ್ಟದ ಜಲ ಸಂಗ್ರಾಹಗಾರ ನೆಲಸಮ ಗೊಳಿಸಲು ನಿರ್ಧರಿಸಿದರು. ಸದಸ್ಯ ಹರಾಳು ಅಶೋಕ ಮಾತನಾಡಿ, ನಗರದಲ್ಲಿ ಹಾದು ಹೋಗಿರುವ ಹೊಸಪೇಟೆ, ಶಿವಮೊಗ್ಗ ರಾಜ್ಯ ಹೆದ್ದಾರಿ ಡಿವೈಡರ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿದರು. ಅಧ್ಯಕ್ಷೆ ಫಾತೀಮಾಬಿ ಮಾತನಾಡಿ, ಎ ಖಾತಾ ವರ್ಗಾವಣೆ ವಿಳಂಬವಾಗುತ್ತಿದ್ದು, ಶೀಘ್ರ ವಿಲೇವಾರಿಗೆ ಸೂಚಿಸಿದರು.

ಪುರಸಭೆ ಮೊದಲ ಕೌನ್ಸಿಲ್ ಸಭೆಯ ಪೊಟೊವನ್ನು ಸದಸ್ಯ ಇಜಂತಕರ್ ಮಂಜುನಾಥ ಕೊಡುಗೆ ನೀಡಿದರು. ಉಪಾಧ್ಯಕ್ಷ ಎಚ್.ಕೊಟ್ರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ್, ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ, ಎಂಜಿನಿಯರ್ ಸಿದ್ದಲಿಂಗಸ್ವಾಮಿ, ಅಮರೇಶ್,ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಇತರರಿದ್ದರು

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಸಿಲಿಂಡರ್ ಪಡೆಯಲು ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯ

ದಾವಣಗೆರೆ  : ಜಿಲ್ಲೆಯ ಎಲ್ಲಾ ಬಿಪಿಸಿಎಲ್, ಹೆಚ್‍ಪಿಸಿಎಲ್ ಹಾಗೂ   ಐಓಸಿಎಲ್ ಅನಿಲ ಗ್ರಾಹಕರ ತಮ್ಮ...

Homeಸುದ್ದಿಗಳು

ರಾಂಚಿಯಲ್ಲಿ ಎಐಎಸ್ಎ ಅಧ್ಯಕ್ಷೆ ಮೇಲಿನ ದಾಳಿ: ಸಂಘಿ ಗೂಂಡಾಗಳ ಬಂಧನಕ್ಕೆ ಗಂಗಾವತಿಯಲ್ಲಿ ಆಗ್ರಹ

ಗಂಗಾವತಿ : ಜಾರ್ಖಂಡ್‌ನ ರಾಂಚಿಯಲ್ಲಿ ನೇಮಕಾತಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳ ವಿರುದ್ಧ ಹೋರಾಟ ನಡೆಸುತ್ತಿರುವ...

Homeಸುದ್ದಿಗಳು

ಸಚಿವ ಸ್ಥಾನಕ್ಕೆ ಮನವಿ ಮಾಡಿರುವೆ : ಎಂ.ಪಿ.ಲತಾ

ಹರಪನಹಳ್ಳಿ : ಹಿರಿಯ ನಾಯಕರ ಸಲಹೆಯಂತೆ ಮಹಿಳಾ ಕೋಟಾದಡಿ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಗೆ...

Homeಸುದ್ದಿಗಳು

ವಿಜಯನಗರ ಜಿಲ್ಲೆಯಲ್ಲಿ ಭೀಕರ ಮುಂಗಾರು ಅಭಾವ ಹಾಗೂ ಶೇ.60 ರಷ್ಟು ಮಳೆ ಕೊರತೆ: 

ವಿಜಯನಗರ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯಾದ್ಯಂತ ತೀವ್ರ ಮಳೆ ಕೊರತೆ ಎದುರಾಗಿದ್ದು,...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.