Home ರಾಜಕೀಯ ಹೊಸಕೋಟೆ ಹಣ ದುರ್ಬಳಕೆ ವಿರುದ್ಧ ಸಿಡಿದ ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ
ರಾಜಕೀಯ

ಹೊಸಕೋಟೆ ಹಣ ದುರ್ಬಳಕೆ ವಿರುದ್ಧ ಸಿಡಿದ ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ

Share
S V Ramachandra
Share

ಹರಪನಹಳ್ಳಿ : ರೈತರ ಹಣ ವಂಚನೆ ಮಾಡಿರುವುದು ಕಂಡನೀಯ ಹೊಸಕೋಟೆಯಲ್ಲಿ ಧರಣಿ ಕುಳಿತರೆ ವಂಚನೆಗೆ ಒಳಗಾದ ಯಾವ ರೈತರಿಗೂ ನ್ಯಾಯಸಿಗುವುದಿಲ್ಲ ಬದಲಾಗಿ ಜಿಲ್ಲಾಧಿಕಾರಿ ಕಚೇರಿ ಮತ್ತು ಬಿಡಿಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯ ಮುಂದೆ ಧರಣಿ ನಡೆಸೋಣ ನಾನು ಯಾವುದೇ ಕೆಲಸವಿದ್ದರೂ ಅದನ್ನು ಬಿಟ್ಟು ನಿಮ್ಮೊಡನೆ ಕೈಜೋಡಿಸುತ್ತೇನೆ ದಿನಾಂಕ ನಿಗದಿ ಮಾಡಿ ನ್ಯಾಯ ಸಿಗುವವರೆಗೂ ಹೋರಾಟ ಮಾಡೋಣ ಎಂದು ಜಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು.

ತಾಲ್ಲೂಕಿನ ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರವನ್ನು ಖಂಡಿಸಿ ಅಖಿಲ ಭಾರತ ಕಿಸಾನ್ ಸಭಾ,ರೈತ ಪರ ಸಂಘಟನೆ ಮತ್ತು ಠೇವಣಿ,ಪಿಗ್ನಿ,ಸಾಲಗಾರರು ಮತ್ತು ರೈತರು ಸೇರಿ ನಡೆಸಿದ ನಿರಂತರ ಹೋರಾಟ ನಾಲ್ಕನೇ ದಿನಕ್ಕೆ ಮುಂದುವರೆದ ಪರಿಣಾಮ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ನೀವು ಸೊಸೈಟಿ ಮುಂದೆ ಧರಣಿ ಕುಳಿತರೆ ನಿಮ್ಮ ಸಮಸ್ಯೆ ಬಗೆಹರಿಯದು ಒಗ್ಗಟಾಗಿ ಸೊಸೈಟಿಯ ಕೇಂದ್ರ ಕಚೇರಿಯ ಮುಂದೆ ಧರಣಿ ನಡೆಸಿದರೆ ಮಾತ್ರ ಸೂಕ್ತ ಪರಿಹಾರಸಿಗುವುದು,ನಿಮ್ಮ ಧರಣಿಗೆ ನಾನು ಸಹ ಕೈಜೋಡಿಸುತ್ತೇನೆ ಜಿಲ್ಲಾಧಿಕಾರಿ ಸೇರಿ ಬಿಡಿಸಿಸಿ ಬ್ಯಾಂಕಿನ ಎಲ್ಲರ ಅಧಿಕಾರಿಗಳನ್ನು ಒತ್ತಾಯಿಸಿ ಕೇಳೋಣ ಎಂದು ಭರವಸೆ ನೀಡಿದರು.

ನೀವು ಹೊಸಕೋಟೆಯಲ್ಲಿ ಧರಣಿ ಕುಳಿತರೆ ಏನು ಪ್ರಯೋಜನವಿಲ್ಲ,ಎಲ್ಲಾ ಒಪ್ಪುವುದಾದರೆ ನಾನೆ ಸ್ವತಃ ಈ ಧರಣಿಯ ನೇತೃತ್ವವಹಿಸಿ ನ್ಯಾಯಸಿಗುವ ಹಾಗೆ ನಿಮ್ಮ ಜೊತೆ ಕೈಜೋಡಿಸುತ್ತೇನೆ ದಯಮಾಡಿ ಧರಣಿ ನಿಲ್ಲಿಸಿ ಎಂದು ರೈತರ ಮತ್ತು ವಂಚನೆಗೆ ಒಳಗಾದ ರೈತರ ಮನವೊಲಿಸಿ ಇಂದಿನ ಹಳೆಯ ಆಡಳಿತ ಮಂಡಳಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರೈತರ ಹಣ ದುರ್ಬಳಕೆ ಮಾಡಿದವರು ಎಂದಿಗೂ ನೆಮ್ಮದಿಯಿಂದ ಇರುವುದಿಲ್ಲ ಎಂದರು.

ತಾಲ್ಲೂಕು ಸಹ ಕಾರ್ಯದರ್ಶಿ ಕಾಮ್ರೆಡ್ ಬಳಿಗನೂರು ಕೊಟ್ರೇಶ್ ಮಾತನಾಡಿ ನಾವು ಕೂಡ ನಿಮಗೆ ನ್ಯಾಯ ಸಿಗುವವರೆಗೂ ನಿಮ್ಮ ಜೊತೆ ನಿಲ್ಲುತ್ತೆವೆ,ವಂಚನೆಗೆ ಒಳಗಾದ ಎಲ್ಲಾ ರೈತರ ಪರವಾಗಿ ನಿಲ್ಲುತ್ತೆವೆ ಕೂಡಲೇ ರೈತರ ಪಿಗ್ನಿ ಮತ್ತು ಠೇವಣಿ ಹಣ ಹಿಂತಿರುಗಿಸದಿದ್ದಲ್ಲಿ ರಾಜ್ಯಾಧ್ಯಂತ ಹೋರಾಟ ಮಾಡುವುದಾದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾದಿಹಳ್ಳಿ ಭೋಮ್ಮಲಿಂಗಪ್ಪ,ಡಿ, ಬಸವರಾಜ್,ಹೆಚ್,ನಾಗಪ್ಪ,ಹೆಚ್ ಕೊಟ್ರೇಶಪ್ಪ,ತುಂಬಿಗೆರೆ ವನಜಾಕ್ಷಮ್ಮ, ರೇವಣ ಸಿದ್ದಪ್ಪ,ಶಿವಣ್ಣ,ಬೂದಿಹಾಳ್ ಕೊಟ್ರೇಶ್,ಕೆಂಚನ ಗೌಡ,ಎಂ.ಕೆ.ಬಣಕಾರ್,ಹೊಸಕೋಟೆ ಡಿ.ಚನ್ನ ಬಸಪ್ಪ,ನಿಂಗಪ್ಪ,ಬಣಕಾರ್ ಕೆಂಚಪ್ಪ,ಕಬ್ಬಳ್ಳಿ ರಮೇಶ್,ಗ್ರಾಮ ಪಂಚಾಯ್ತಿ ಸದಸ್ಯ ಡಿ.ನಾಗರಾಜ್ ಕೆರೆಗುಡಿಹಳ್ಳಿ ಡಿ.ದಾನಪ್ಪ, ಎಂ.ಬಸವರಾಜ್,ಹೋಟೆಲ್ ಸಿದ್ದಪ್ಪ,ಮಲ್ಲೇಶಪ್ಪ,ಅಂಗಡಿ ವಿರೇಶಪ್ಪ, ಸೇರಿ ರೈತರು ಹಾಜರಿದ್ದರು.

ರೈತರ ಹಣ ದುಡ್ಡನ್ನು ತಿಂದವರು ಎಂದಿಗೂ ಉದ್ದಾರವಾಗಿಲ್ಲ ಅಲ್ಲದೆ ರೈತರ ಹಣ ಯಾರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ತಿಳಿದಿದ್ದರೂ ಹೊಸಕೋಟೆ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಕಣ್ಮುಚ್ಚಿ ಕುಳಿತಿರುವುದು ಕಂಡನಿಯ

ಕಾಮ್ರೆಡ್ ಸಂತೋಷ್-ಹರಪನಹಳ್ಳಿ

 

ಪಂಚಾಯಿ ವ್ಯಾಪ್ತಿಯಲ್ಲಿ ಒಟ್ಟು 400 ರೈತರು ಕಟ್ಟಿದ್ದ, ಠೇವಣಿ, ಪಿಗ್ಮಿ ಹಣ ಸೇರಿದಂತೆ 4 ಕೋಟಿಗೂ ಹೆಚ್ಚಿನ ಹಣ ಹಗರಣ ಆಗಿದೆ. ನ್ಯಾಯಕ್ಕಾಗಿ ಹೋರಾಡುವ ರೈತರನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಕಾಣದ ಕೈಗಳು ಏನೇ ಷಡ್ಯಂತ್ರ ನಡೆಸಿದರೂ ನಾವು ನ್ಯಾಯಸಿಗುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೆಯಿಲ್ಲ ಮುಂದಿನ ದಿನಗಳಲ್ಲಿ ಬಿಡಿಸಿಸಿ ಬ್ಯಾಂಕಿನ ಕೇಂದ್ರ ಕಚೇರಿಯ ಮುಂದೆ ಧರಣಿ ನಡೆಸುತ್ತೇವೆ

ಗುಡಿಹಳ್ಳಿ ಹಾಲೇಶ್-
ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಸಂಚಾಲಕ

 

ನಾನು ಕೇವಲ ಒಬ್ಬ ಹೋರಾಟಗಾರನಾಗಿ ರೈತರೊಂದಿಗೆ ಇರುತ್ತೇನೆ,ಧರಣಿಯಲ್ಲಿ ಎಲ್ಲ ವಂಚನೆಗೆ ಒಳಗಾದ ರೈತರು ಭಾಗವಹಿಸಿ ಸಂಬಂದಿಸಿದ ದರೋಡೆಕೊರರಿಗೆ ಶಿಕ್ಷೆ ಆಗುವ ಹಾಗೆ ಮಾಡುತ್ತೇವೆ,ನನ್ನ ಸ್ವಂತ ಖರ್ಚಿನಲ್ಲಿ ಓದು ವಾಹನ ಮಾಡುತ್ತೇನೆ,ರೈತರಿಗೆ ನ್ಯಾಯ ಸಿಗುವವರೆಗೂ ಹೊಸಪೇಟೆಯಲ್ಲೇ ನನ್ನ ಕ್ಷೇತ್ರದ ರೈತರೊಂದಿಗೆ ಹೋರಾಟ ಮಾಡುತ್ತೇನೆ.

ಎಸ್.ವಿ.ರಾಮಚಂದ್ರ
ಜಗಳೂರು ಕ್ಷೇತ್ರದ ಮಾಜಿ ಶಾಸಕ

Share

Leave a comment

Leave a Reply

Your email address will not be published. Required fields are marked *

Related Articles
Homeರಾಜಕೀಯ

ಬಿಜೆಪಿ ಹಿರಿಯ ನಾಯಕರ ದಂಡು: ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಶ್ರೀರಾಮುಲು, ಕರುಣಾಕರ ರೆಡ್ಡಿ ಭಾಗಿ :

ವಿಜಯನಗರ :  ಜಿಲ್ಲೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ವತಿಯಿಂದ...

Homeರಾಜಕೀಯ

ಪೌರ ಕಾರ್ಮಿಕ ಡಿ.ಲಿಂಗಪ್ಪ ನಿವೃತ್ತಿ

ಹರಪನಹಳ್ಳಿ :  ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಡಿ.ಲಿಂಗಪ್ಪ ಅವರನ್ನು...

Homeರಾಜಕೀಯ

ಹಲುವಾಗಲು ಗ್ರಾಮಸ್ಥರಿಂದ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರಿಗೆ ಮನವಿ :

ಹರಪನಹಳ್ಳಿ: ತಾಲ್ಲೂಕಿನ ಪ್ರಮುಖ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಹಲವಾಗಲು ಗ್ರಾಮದ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ...

Homeರಾಜಕೀಯ

ಹರಪನಹಳ್ಳಿ ಬೆಸ್ಕಾಂ ನೌಕರರ ಪ್ರತಿಭಟನೆ.

ಹರಪನಹಳ್ಳಿ : ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸುತ್ತಿದ್ದೇವೆ ಇಲಾಖೆಯ ಎಲ್ಲಾ ನೌಕರರು ಹಾಗೂ ಸಿಬ್ಬಂದಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.