Home ಸುದ್ದಿಗಳು ಅರುಣ್ ಯೋಗಿರಾಜ್‌ ಕೆತ್ತನೆಯ ವಾಲ್ಮೀಕಿ ಪ್ರತಿಮೆ ಸಿದ್ಧತೆ  
ಸುದ್ದಿಗಳು

ಅರುಣ್ ಯೋಗಿರಾಜ್‌ ಕೆತ್ತನೆಯ ವಾಲ್ಮೀಕಿ ಪ್ರತಿಮೆ ಸಿದ್ಧತೆ  

Share
ಅರುಣ್‌ ಯೋಗಿರಾಜ್‌ ವಾಲ್ಮೀಕಿ ಪ್ರತಿಮೆ ಸಿದ್ಧತೆ
Share

ಬಳ್ಳಾರಿ : ಬಳ್ಳಾರಿ ನಗರದ ಎಸ್ಪಿ ವೃತ್ತದಲ್ಲಿ ಪ್ರತಿಷ್ಠಾಪನೆ ಮಾಡಲು ಉದ್ದೇಶಿಸಿರುವ  ವಾಲ್ಮೀಕಿ ಪ್ರತಿಮೆಯನ್ನು ಅಯೋಧ್ಯೆ ರಾಮನವಿಗ್ರಹ ರಚಿಸಿದ ಅರುಣ್ ಯೋಗಿರಾಜ್ ಅವರು ಸಿದ್ಧ ಮಾಡುತ್ತಿದ್ದಾರೆ.

ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ, ಅವರು ಈ ಕುರಿತು ಶನಿವಾರ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಪೋಸ್ಟ್‌ ಪ್ರಕಟಿಸಿದ್ದು ‘ನಮ್ಮ ಬಳ್ಳಾರಿ‌ ನಗರದ ಎಸ್ಪಿ ಸರ್ಕಲ್‌ನಲ್ಲಿ ಅನಾವರಣಗೊಳ್ಳಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಅವರ ಪ್ರತಿಮೆಗೆ ಶಿಲ್ಪಿ  ಅವರು ಅಂತಿಮ ಸ್ಪರ್ಷ ನೀಡುತ್ತಿರುವ ಕ್ಷಣ‌’ ಎಂಬ ಬರೆದು ವಾಲ್ಮೀಕಿ ವಿಗ್ರಹ ಕೆತ್ತುತ್ತಿರುವ ಯೋಗಿರಾಜ್‌ ಅವರ ಪೊಟೊ ಪೋಸ್ಟ್‌ ಮಾಡಿದ್ದಾರೆ. ಇತ್ತ, ಅರುಣ್‌ ಯೋಗಿರಾಜ್‌ ಅವರೂ ಅದೇ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಮಹರ್ಷಿ ವಾಲ್ಮೀಕಿಗೆ ವಿನಮ್ರ ನಮನ ಸಲ್ಲಿಸುತ್ತೇನೆ. ಅವರ ಕೊಡುಗೆ ಶಾಶ್ವತವಾದದ್ದು. ಅವರ ಅಮರತ್ವವನ್ನು ಶಿಲೆಯು ಮುಂದಿನ ಪೀಳಿಗೆಗೆ ಒಯ್ಯುಲಿದೆ’ ಎಂದು ಹೇಳಿಕೊಂಡಿರುವುದು ಮಹರ್ಷಿ ವಾಲ್ಮೀಕಿ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.